ಹೆಮ್ಮೆಯ ಗೌಡ್ರು
ಹೆಮ್ಮೆಯ ಗೌಡ್ರು
ಶ್ರೀ ದಯಾನಂದ ಪಾಟೀಲರು
ದಯೆ ಗುಣ ಉಳ್ಳವರು
ಕವಿ ಮನಸ್ಸು ಹೊಂದಿದವರು
ಕಥೆ ಕವನ ಬರೆಯುವವರು
ಕನ್ನಡಕ್ಕಾಗಿ ದುಡಿಯುವವರು
ಸಾಹಿತ್ಯದೆಡೆಗೆ ಆಸಕ್ತಿ ಇರುವವರು
ತಾಯಿ ಭುವನೇಶ್ವರಿಯ ವರ ಪುತ್ರರು
ಎಳೆಯುವರು ಕನ್ನಡದ ತೇರು
ಮುಖದಲ್ಲಿ ಮಂದಹಾಸ ಇರುವವರು
ನಗು ಮುಖದಿಂದ ಮಾತನಾಡಿಸುವವರು
ಕಷ್ಟ ಸುಖದಲ್ಲಿ ಭಾಗಿಯಾಗುವವರು
ಬಿಂಕು ಬಿಗುಮಾನ ತೋರದವರು
ಯುವ ಸಾಹಿತಿಗಳಿಗೆ ಮಾರ್ಗದರ್ಶಕರು
ಕವಿಗಳಿಗೆ ಪ್ರೋತ್ಸಾಹ ನೀಡುವವರು
ಪುಸ್ತಕಗಳ ಒಳ್ಳೆಯ ವಿಮರ್ಶಕರು
ಸಾಧನೆಯ ಸಾಧಿಸಿದ ಸಾಧಕರು
ದಾರಿಯಿಂದ ಬಹು ದೂರವಿದ್ದರೂ
ಮನಸ್ಸಿನಿಂದ ಹತ್ತಿರ ಇರುವವರು
ನನ್ನ ನೆಚ್ಚಿನ ಕವಿ ಮಿತ್ರರು
ಅವರೇ ನಮ್ಮೆಲ್ಲರ ಹೆಮ್ಮೆಯ ಗೌಡರು
ರಚನೆ -ಶ್ರೀ. ರಾಜೇಂದ್ರ.ಎಂ.ಹಿರೇಮಠ
ಶಿಕ್ಷಕರು, ಉಟಗಿತಾ - ಜತ್ತ, ಜಿ - ಸಾಂಗಲಿಮಹಾರಾಷ್ಟ್ರ ರಾಜ್ಯ