ಬಸವೇಶ್ವರ ಮೂರ್ತಿಗೆ ಬೆಳ್ಳಿ ಕವಚ

ಬಸವೇಶ್ವರ ಮೂರ್ತಿಗೆ ಬೆಳ್ಳಿ ಕವಚ

ಬಸವೇಶ್ವರ ಮೂರ್ತಿಗೆ ಬೆಳ್ಳಿ ಕವಚ 

ಕಲಬುರಗಿ: ಮಹಾತ್ಮ ಬಸವೇಶ್ವರ ಕಾಲೋನಿಯ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಮಸ್ತ ಭಕ್ತರು ನೀಡಿರುವ ಕಾಣಿಕೆಯಿಂದ ಬೆಳ್ಳಿಯ ಶಿವನ ಮೂರ್ತಿ ಕವಚ ಧಾರಣೆ ಶಿವಲಿಂಗಕ್ಕೆ ಶ್ರೀ ಮ. ಘ. ಚ. ಸಿದ್ದಲಿಂಗ ಶಿವಾಚಾರ್ಯರಿಂದ ನೆರವೇರಿತು. ಈ ವೇಳೆ ದೇವಸ್ಥಾನ ಕಮಿಟಿಯವರಾದ ಬಸವರಾಜ್ ಶೆಟ್ಟಿಗಾರ್, ಗುರು ಸ್ವಾಮಿ, ಶರಣಪ್ಪ ಗೊಬ್ಬುರ್, ಶಿವಾನಂದ ಯಳವಂತಗಿ, ವಿರೂಪಾಕ್ಷಯ್ಯ ಮಠಪತಿ, ಸುರೇಶ್ ಉಡಚಣ, ರವಿ ಅಕ್ಕೋಣಿ, ಗೌರೀಶ್ ಪಾಟೀಲ್, ಮನೋಹರ್, ಬಸವರಾಜ್ ಕಮರಡಿ, ಶ್ರೀಕಾಂತ್ ಶೆಟ್ಟಿ, ವಿಶ್ವರಾಧ್ಯ ಧೂಳ, ಹಾಗೂ ಸಮಸ್ತ ಭಕ್ತರು ಭಾಗವಹಿಸಿದ್ದರು.