ಡಾ.ಮಹೇಶ ಎಸ್.ರುದ್ರಕರ್

ಡಾ.ಮಹೇಶ ಎಸ್.ರುದ್ರಕರ್

         ಡಾ.ಮಹೇಶ ಎಸ್.ರುದ್ರಕರ್ ಅವರು ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನಲ್ಲಿ ಬರುವ ಮಹಾಗಾಂವ್ ಗ್ರಾಮದವರು.(ಮೂಲತಃ) ಇವರ ತಾಯಿಯ ತವರೂರಾದ ಕಲಬುರಗಿ ನಗರದ ಬಸವನಗರದಲ್ಲಿ ತಂದೆ ಶಾಂತಪ್ಪ ತಾಯಿ ಲಕ್ಷ್ಮೀಬಾಯಿ ದಂಪತಿಗಳ ಹಿರಿಯ ಮಗನಾಗಿ ದಿನಾಂಕ ೧-೬-೧೯೮೫ರಂದು ಜನಿಸಿದರು.

ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕಲಬುರಗಿ ಜಿಲ್ಲೆಯಲ್ಲಿ ಬರುವ ಬಿ.ಶ್ಯಾಮ ಸುಂದರ ನಗರ ಹಿರಿಯ ಪ್ರಾ.ಶಾಲೆ ಮತ್ತು ಮಿಲಿಂದ ಹೈಸ್ಕೂಲ್ ಹಾಗೂ ಮಿಲಿಂದ ಪ.ಪೂರ್ವ ಕಾಲೇಜು .ಬಿ.ಎ ಪದವಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಲಯದಿಂದ ಬಿ.ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾದರು.

ನಂತರ ಎಂ.ಎ ಪದವಿಯನ್ನು ಕೆ.ಎಸ್.ಒ.ಯು.ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪಾಸಾದರು. ಬಿ.ಇಡ್, - ಶರಣಬಸವೇಶ್ವರರ ಶಿಕ್ಷಣ ಮಹಾವಿದ್ಯಾಲಯ.ಕಲಬುರಗಿ.ಮುಂದೆ ಸಂಶೋಧನಾ ವಿದ್ಯಾರ್ಥಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಭ್ಯಾಸವನ್ನು ಮಾಡುತ್ತಾರೆ.

ಡಾ.ಶರಣಪ್ಪ ಎಸ್.ಮಾಳಗಿ ಇವರ ಮಾರ್ಗದರ್ಶನದಡಿಯಲ್ಲಿ "ಡಿ.ಎಸ್.ಕುಮಾರ : ಸಮಗ್ರ ಸಾಹಿತ್ಯ ಒಂದು : ಅಧ್ಯಯನ" ಎಂಬ ವಿಷಯದ ಕುರಿತು ಸಂಶೋಧನಾ ಮಹಾ ಪ್ರಬಂಧವನ್ನು ಸಾದರಪಡಿಸಿ ಡಾಕ್ಟರೇಟ್ ಪದವಿಯನ್ನು ೨೦೧೭ರಲಿ ಪಡೆದುಕೊಂಡರು.

ಇವರು ಕಥೆ,ಕವನ,ವಚನ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವುತೊಡಗಿಸಿಕೊಂಡಿದ್ದಾರೆ. ನೂರಾರು ವೇದಿಕೆಗಳನ್ನು ಹಂಚಿಕೊಂಡಿದ್ದಾರೆ.ಕೆಲವೊಂದು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರ ಮೊದಲು ಕವನ ಸಂಕಲನ - ನೀಲಿ ನಕ್ಷತ್ರ- ೨೦೦೮,ಎರಡನೆಯದು- ಕಾವ್ಯ ಚಿಗುರು-೨೦೧೮.ಮೂರನೆಯ ಕವನ‌ ಸಂಕಲನ ಕಾವ್ಯ ಖಡ್ಗ -೨೦೧೮.

ವಚನ ಸಾಹಿತ್ಯ : "ರೆಕ್ಕೆ ಇಲ್ಲದ ಹಕ್ಕಿ" ಎನ್ನುವ ವಚನ ಸಂಕಲನ - ೨೦೨೩. "ಅರಸನಿಲದ ಅರಮನೆ" ಎನ್ನುವ ನಾಟಕ ಮುದ್ರಣದ ಅಂಚಿನಲ್ಲಿ ಇದೆ."ಬಣ್ಣದ ನಾಲಿಗೆ" ಕಥಾ ಸಂಕಲನ ಕೊಡ ಸಮಯದಲ್ಲಿದೆ.ಇವರು ಒಟ್ಟು ನಾಲ್ಕು ಪುಸ್ತಕ ಮತ್ತು ಹತ್ತಾರು ಲೇಖನಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ಇವರ ಸಾಹಿತ್ಯ ಸೇವೆಯನ್ನು ಕಂಡು ಅನೇಕ ಸಂಘ ಸಂಸ್ಥೆಗಳು ರಾಜ್ಯ ಮಟ್ಟದ, ಮತ್ತು ರಾಷ್ಟ್ರ ಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಅವುಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ "ಕರುನಾಡ ಕುವೆಂಪು ರತ್ನ" ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ -೨೦೧೧. ರಾಜ್ಯ ಮಟ್ಟದ ಪ್ರಶಸ್ತಿ "ಸಾಹಿತ್ಯ ಕಲಾ ಸಾಮ್ರಾಟ" ಕವಿವೃಕ್ಷ ಬಳಗ,ಬೆಂಗಳೂರು-೨೦೧೯ ‌ರಾಜ್ಯ ಮಟ್ಟದ ಪ್ರಶಸ್ತಿ "ಕುವೆಂಪು ಪ್ರಶಸ್ತಿ" ಪಂಚಜಿಲ್ಲಾ ಬೆಳಕು ಸಾಂಸ್ಕೃತಿಕ ಟ್ರಸ್ಟ್ -ಮಂಡ್ಯ ರಾಷ್ಟ್ರಮಟ್ಟದ ಪ್ರಶಸ್ತಿ "ಭಾರತ ಸೇವಾ ರತ್ನ" ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ,ದಾವಣಗೆರೆ-೨೦೧೯ .ರಾಜ್ಯ ಮಟ್ಟದ ಪ್ರಶಸ್ತಿ "ಶ್ರೀ ಡಾ. ಪಂಡಿತ ಪುಟ್ಟರಾಜ ಸಾಹಿತ್ಯ ಚೇತನ" ಡಾ.ವ್ಹಿ.ಬಿ ಹೀರೆಮಠ ಮೆಮೊರಿಯಲ್ ಪ್ರತಿಷ್ಠಾನ , ಗದಗ -೨೦೧೯

ರಾಷ್ಟ್ರ ಮಟ್ಟದ ಪ್ರಶಸ್ತಿ "ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ- ಡಾ.ಬಿ.ಆರ್ . ಅಂಬೇಡ್ಕರ ಬಾಬು ಜಗಜೀವನ್ ರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಾವಣಗೆರೆ.-೨೦೨೦.ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು . ಕನ್ನಡ ಸೇವಾರತ್ನ ಪ್ರಶಸ್ತಿ -೨೦೨೦

ರಾಷ್ಟ್ರ ಮಟ್ಟದ ಪ್ರಶಸ್ತಿ " ಸಾಧನ ಕೇರಿಯ ಸಾಧಕ ರಾಷ್ಟ್ರ ಪ್ರಶಸ್ತಿ" ಅಕ್ಷರ ಫೌಂಡೇಶನ್ ಧಾರವಾಡ - ೨೮-೭-೨೦೨೪

ಇವರು ನಾಗಾಲಾಂಬಿಕಾ ಮಹಾವಿದ್ಯಾಲಯ .ಶ್ರೀ ದತ್ತ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸಿರನೂರನಲ್ಲಿರುವ ಜೆಜ್ವಿಟ್ ಸಂಸ್ಥೆಯಾದ ಸಂತ ಜೇವ್ಹಿಯರ್ಸ ಪ.ಪೂ.ಕಾಲೇಜು, ಕನ್ನಡ ಉಪನ್ಯಾಸಕರಾಗಿ ಮತ್ತು ಭಾಷೆಯ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದಾರೆ.

                         ಡಾ.ಶರಣಬಸಪ್ಪವಡ್ಡನಕೇರಿ