ಬೊಮ್ಮನಹಳ್ಳಿ-ಕರದಾಳ ಪರಿಸರ ಸಾರ್ವಜನಿಕ ಆಲಿಕೆ ಸಭೆ
ಬೊಮ್ಮನಹಳ್ಳಿ-ಕರದಾಳ ಪರಿಸರ ಸಾರ್ವಜನಿಕ ಆಲಿಕೆ ಸಭೆ
ಕುಟುಂಬಕ್ಕೆ ಒಂದು ಉದ್ಯೋಗ, ರಸ್ತೆಗಳು ಬದಲಾವಣೆ ಯಾಗಬಾರದು: ರೈತರಿಂದ ಅಹವಾಲು ಸಲ್ಲಿಕೆ
ಚಿತ್ತಾಪುರ:ಕಂಪನಿಯವರು ರೈತರಿಗೆ ಭರವಸೆ ನೀಡಿದಂತೆ ಪ್ರತಿ ಕುಟುಂಬದವರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಸಿಎಸ್‌ಆರ್ ಅಡಿ ಸುತ್ತಲಿನ ಗ್ರಾಮಗಳಿಗೆ ಮೂಲಸೌಲಭ್ಯಗಳು ಕಲ್ಪಿಸಬೇಕೆಂದು ಜಿಪಂ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ-ಕರದಾಳ ಗ್ರಾಮದ ಹೊರವಲಯದಲ್ಲಿ ರಾಮ್ಕೊ ಸಿಮೆಂಟ್ ಕಂಪನಿವತಿಯಿAದ ೫೦೦ ಹೇಕ್ಟರ್ ಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ಸ್ಥಾಪನೆಗೆ ಉದ್ದೇಶಿಸಿದರುವ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ರಾಮ್ಕೊ ಸಿಮೆಂಟ್ ಕಂಪನಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿರುವ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕರದಾಳ ಮತ್ತು ಬೊಮ್ಮನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಮ್ಕೊ ಸಿಮೆಂಟ್ ಕಂಪನಿಯ ಪರಿಸರ ಮತ್ತು ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ರೈತರು ಸಕರಾತ್ಮಕವಾಗಿ ಮಾತನಾಡಿದ್ದಾರೆ. ಜನರು ಕಾಳಜಿಯಿಂದ ಪರಿಸರದ ಬಗ್ಗೆ ಮತ್ತು ಉದ್ಯೋಗ ಭದ್ರತೆ, ಮೈನಿಂಗ್‌ಗಾಗಿ ರಸ್ತೆ ಹಾಳಾಗುವುದರ ಕುರಿತು ಅಹವಾಲು ಹೇಳಿರುವದು ಸತ್ಯವಾಗಿದೆ. ಜಮೀನು ಖರೀದಿ ಮಾಡುವಾಗ ಮೊದಲ ಷರತ್ತಿನ ಅನ್ವಯ ಕಡ್ಡಾಯವಾಗಿ ಪ್ರತಿ ಕುಟುಂಬದವರಿಗೆ ತಲಾ ಒಬ್ಬರಿಗೆ ಉದ್ಯೋಗ ನೀಡಬೇಕು. ಪರಿಸರ ಹಾಳಾಗದಂತೆ ಎಚ್ಚರವಹಿಸಬೇಕು. ಈಗ ಇದ್ದ ಬೊಮ್ಮನಳ್ಳಿ-ಚಿತ್ತಾಪುರ, ಬೊಮ್ಮನಳ್ಳಿ-ವಾಡಿ ರಸ್ತೆಯನ್ನೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೆ ಈ ರಸ್ತೆಯನ್ನೆ ಬಿಟ್ಟು ಕಂಪನಿ ಕೆಲಸ ನಿರ್ವಹಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಕಂಪನಿಯವರಿಗೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಹೇಳಿದರು.
ವೀರೇಶ ಮಕಾಪ್, ರೇವಣಸಿದ್ದಪ್ಪ ತಳವಾರ ಮಾತನಾಡಿ, ರೈತರ ಮೇಲೆ ಕಂಪನಿಯವರು ದಬ್ಬಾಳಿಕೆ ಮಾಡಬಾರದು. ಉಚಿತ ಶಿಕ್ಷಣ, ಉದ್ಯೋಗ ನೀಡಬೇಕು. ಮಹಿಳೆಯರ ಶೌಚಾಲಯ, ಸಿಸಿ ರಸ್ತೆ ನಿರ್ಮಿಸಬೇಕು. ಶೀಘ್ರದಲ್ಲಿ ಕಂಪನಿ ಆರಂಭಿಸಬೇಕೆಂದು ಹೇಳಿದರು.
ಚಂದ್ರಪ್ಪ ಬಮ್ಮನಳ್ಳಿ ಮಾತನಾಡಿ, ಜನರು ಗೂಳೆ ಹೋಗುವದನ್ನು ತಪ್ಪಿಸಲು ಕಂಪನಿ ಬೇಗ ಆರಂಭಿಸಿ ಕಡ್ಡಾಯವಾಗಿ ಮನೆಗೊಂದು ಉದ್ಯೋಗ ನೀಡಬೇಕೆಂದು ಹೇಳಿದರು.
ಸಂಗಮೇಶ ಕರದಾಳ ಮಾತನಾಡಿ, ಉತ್ತಮ ಫಲವತ್ತಾದ ಜಮೀನುಗಳಿಗೆ ಹೆಚ್ಚು ಪರಿಹಾರ ಏನೂ ನೀಡಬೇಕೆಂದು ಹೇಳಿದರು.
ಅಯ್ಯಪ್ಪ ಜಾನಬೋ ಮಾತನಾಡಿ, ಈ ಜಮೀನುಗಳು ಕರೋನಾ ಸಮಯದಲ್ಲಿ ಕಡಿಮೆ ಬೆಲೆಯ ೧೯ ಲಕ್ಷ ರೂಪಾಯಿ ಕಂಪನಿಯವರು ಖರೀದಿಸಿದ್ದಾರೆ. ಆದರೆ ಈಗ ಬೆಲೆ ಹೆಚ್ದಾಗಿದ್ದು ೩೫ ಲಕ್ಷ ರೂಪಾಯಿ ಪ್ರತಿ ಎಕರೆಗೆ ಖರೀದಿ ಪ್ರಕಾರ ಹಣ ನೀಡಬೇಕು. ಭೂರಹಿತರಿಗೂ ಕಡ್ಡಾಯವಾಗಿ ಉದ್ಯೋಗ ಹಾಗು ಪರಿಹಾರ ನೀಡಬೇಕು. ೪೦ ಎಕರೆ ಸರ್ಕಾರಿ ಗಹಿರಾಣಿ ಜಮೀನು ಕಂಪನಿಯವರಿಗೆ ನೀಡಬಾರದು. ರೈತರ ಜಾನುವಾರುಗಳಿಗೆ ಈ ಜಮೀನು ಅಗತ್ಯವಾಗಿದೆ ಎಂದು ಹೇಳಿದರು.
ದೊಡ್ಡಪ್ಪಗೌಡ ಮಳಖೇಡ ಮಾತನಾಡಿ, ಇಲ್ಲಿ ಎರಡು ಮುಖ್ಯ ರಸ್ತೆಗಳಿವೆ. ಈ ರಸ್ತೆಗಳನ್ನು ಬದಲಿಸಬಾರದು. ಅರಣ್ಯ ಪ್ರದೇಶವಾಗಿರುವುದರಿಂದ ಈ ಪ್ರದೇಶ ರಕ್ಷಣೆ ಮಾಡಬೇಕೆಂದು ಹೇಳಿದರು.
ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸಿಮೆಂಟ್ ಕಂಪನಿಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉಸಿರಾಟ, ಕಣ್ಣು ಹಾಗೂ ಚರ್ಮ ರೋಗ ಬರುವ ಸಾಧ್ಯತೆ ಬಂಗಾರದಕತಹ ಜಮೀನು ಹೋಗುತ್ತಿದೆ. ಅಂತರ್ಜಲ ಕುಸಿತವಾಗುತ್ತದೆ. ಕಂಪನಿಯವರು ಇದಕ್ಕೆಲ್ಲ ವ್ಯವಸ್ಥೆ ಮಾಡಬೇಕು. ಆದ್ದರಿಂದ ಬ್ರೋಕರಗಳಿಗೆ ಅವಕಾಶ ನೀಡದೇ ನೇರವಾಗಿ ರೈತರಿಗೆ ಸಂಪರ್ಕಿಸಿ ಜಮೀನು ಖರೀದಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಫೌಜೀಯಾ ತರನ್ನೂಮ ಮಾತನಾಡಿ, ಪ್ರತಿ ವರ್ಷ ಪರಿಸರ, ರೈತರು ಹೇಳಿದಂತೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಕಂಪನಿಯ ಉನ್ನತ ಆಡಳಿತ ಮಂಡಳಿಯವರು ರೈತರ ಬೇಡಿಕೆಯಂತೆ ಜಮೀನಿನ ಬೆಲೆ ಹೆಚ್ಚಳ ಮಾಡಲು ಪ್ರಯತ್ನಿಸಬೇಕು. ತಾಂತ್ರಿಕ ಮತ್ತು ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಜಮೀನು ಕಳೆದುಕೊಂಡ ರೈತರಿಗೆ ಹಾಗೂ ಭೂರಹಿತರಿಗೆ ತರಬೇತಿ ನೀಡಬೇಕು. ರೈತರು ಹೇಳಿದಂತೆ ಆ ಎರಡು ರಸ್ತೆಗಳನ್ನು ಯಾವುದೇ ಬದಲಾವಣೆ ಮಾಡಬಾರದು. ಪ್ರತಿವರ್ಷ ಶಬ್ಧ ಮಾಲಿನ್ಯ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಇನ್ನೂ ಮೂರು ವಾರದವರೆಗೆ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಅವರಿಗೆ ರೈತರು ತಮ್ಮ ಅಭಿಪ್ರಾಯ ಸಲ್ಲಿಸಬಹುದು. ರೈತರ ನೀಡಿರುವ ಅಭಿಪ್ರಾಯಗಳು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಮ್ಕೊ ಕಂಪನಿಯ ಮುರಳಿ ಮಾನಸ ಮಾತನಾಡಿ, ಪ್ರತಿವರ್ಷ ೨೫ ಲಕ್ಷ ರೂಪಾಯಿ ಜನರ ಆರೋಗ್ಯ ಹಾಗೂ ಶೈಕ್ಷಣಿಕೆಗಾಗಿ ಮೀಸಲಿದೆ. ೨೫೧ ಜನರಿಗೆ ಉದ್ಯೋಗ ನೀಡಲಾಗುವುದು. ತರಬೇತಿ ಇಲ್ಲದವರಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಗುವದು. ಸಿಎಸ್‌ಆರ್ ಅನುದಾನ ಹೆಚ್ಚು ಮಾಡಿ ಮೂಲ ಸೌಲಭ್ಯಗಳು ಹೆಚ್ಚು ಕಲ್ಪಿಸಲಾಗುದು ಎಂದು ಭರವಸೆ ನೀಡಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ರೇಖಾ, ಗ್ರಾಪಂ ಉಪಾಧ್ಯಕ್ಷ ರಾಜು ಗುತ್ತೇದಾರ, ರೈತರಾದ ತೋಟಪ್ಪ ಪೂಜಾರಿ, ನಾಗಪ್ಪ, ಮಹ್ಮದ್ ರಫೀಕ್:ಮಲ್ಲಣ್ಣ ತಳವಾರ;ನಾಗರಾಜ ಕರದಾಳ, ಚಂದ್ರಪ್ಪ ಪೂಜಾರಿ, ಧೂಳಮ್ಮ ಬಮ್ಮನಳ್ಳಿ, ಲಕ್ಷ್ಮೀಕಾಂತ್ ಜೋಗಿ, ಮೌನೇಶ, ಜಗನ್ನಾಥ ಪೋಲಿಸ್ ಪಾಟೀಲ್, ಬಸವರಾಜ ಕರದಾಳ ಮಾತನಾಡಿದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ನಾಗಯ್ಯ ಹೀರೆಮಠ, ಕಂಪನಿಯ ಮುಖ್ಯ ನಿರ್ಧೇಶಕ ಎಂ ಶ್ರೀನಿವಾಸನ್, ಸಹಾಯಕ ವ್ಯವಸ್ಥಾಪಕ ಮತ್ತಿವಣ್ಣನ್, ಗಣಿ ಪ್ರಧಾನ ವ್ಯವಸ್ಥಾಪಕ ಸಾಂಬಸಿವಮ, ರವೀಂದ್ರ ಸಜ್ಜನಶೆಟ್ಟಿ, ಜಗದೀಶ ಚವ್ಹಾಣ, ಶಿವರೆಡ್ಡಿ ಪಾಲಪ್, ಮಲ್ಲಿಕಾರ್ಜುನರೆಡ್ಡಿ ಇಜಾರ್, ನಾಗೇಂದ್ರ ವಿಶ್ವಕರ್ಮ, ಶಿವರಾಜ ಪಾಳೇದ್ ಸೇರಿದಂತೆ ಇತರರಿದ್ದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು.