ಮೊರಾರ್ಜಿ ವಸತಿ ಶಾಲೆ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಅಮಾನತಿಗೆ - ಪ್ರದೀಪ್ ಅಣಬಿ ಆಗ್ರಹ.

ಮೊರಾರ್ಜಿ ವಸತಿ ಶಾಲೆ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಅಮಾನತಿಗೆ - ಪ್ರದೀಪ್ ಅಣಬಿ ಆಗ್ರಹ.

: ಶಹಪುರ ತಾಲೂಕಿನ ಬೇವಿನಹಳ್ಳಿ ಮುರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮೊರಾರ್ಜಿ ವಸತಿ ಶಾಲೆ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ಅಮಾನತಿಗೆ - ಪ್ರದೀಪ್ ಅಣಬಿ ಆಗ್ರಹ.

ಶಹಪುರ : ತಾಲೂಕಿನ ಬೇವಿನಹಳ್ಳಿ ಕ್ರಾಸ್ ನಲ್ಲಿರುವ ಮುರಾರ್ಜಿ ವಸತಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ವಾರ್ಡನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಮಾಡುವಂತೆ ಯಾದಗಿರಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮುಖಾಂತರ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಾಮಾಜಿಕ ಹೋರಾಟಗಾರ ಹಾಗೂ  

ಸರ್,ಎಂ,ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಅಣಬಿ ಪತ್ರ ಬರೆದಿದ್ದಾರೆ.

ಹಲವಾರು ಸಾರ್ವಜನಿಕ ದೂರುಗಳು ಕೇಳಿ ಬಂದಾಗ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಸಂದರ್ಭದಲ್ಲಿ ಶೌಚಾಲಯ ಅವ್ಯವಸ್ಥೆ ಹಾಗೂ ಕಿಟಕಿ ಬಾಗಿಲುಗಳು ಮುರಿದು ಹೋಗಿರುವುದು ಕಂಡುಬಂದಿದ್ದು, ಅಲ್ಲದೆ ಪ್ರಿನ್ಸಿಪಲ್ ಮತ್ತು ವಾರ್ಡನ್ ತಮ್ಮ ಮನೆಯ ಕೆಲಸಗಳಿಗೆ ಇಲ್ಲಿಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಎಂಬ ಆರೋಪ ಕೇಳಿ ಬಂದಿದ್ದು,ಇದನ್ನು ಪ್ರಶ್ನೆ ಮಾಡಿದಾಗ ನಮಗೆ ಧಮಕಿ ಹಾಕಿದ್ದಾರೆ ಸಾಮಾಜಿಕ ಹೋರಾಟಗಾರ ತಿಳಿಸಿದ್ದಾರೆ.

ಅಡುಗೆ ಕೋಣೆಯಂತೂ ತುಂಬಾ ದುರ್ವಾಸನೆ ಬೀರುತ್ತಿದ್ದು,ಅಡುಗೆಗೆ ಬಳಸುವ ತರಕಾರಿಗಳು,ದವಸ ಧಾನ್ಯಗಳು,ತೊಳೆಯದೆ ಹಾಗೆ ಬಳಸುತ್ತಿದ್ದಾರೆ ಇದರಿಂದ ರೋಗ ರುಜಿನಗಳು ಹರಡುವ ಭೀತಿಯಲ್ಲಿ ವಿದ್ಯಾರ್ಥಿಗಳು ಬದುಕುತ್ತಿದ್ದಾರೆ,ಅಲ್ಲದೆ ವಿದ್ಯಾರ್ಥಿಗಳಿಂದಲೇ ಉಪಹಾರವನ್ನು ತಾವಿದ್ದ ಕೋಣೆಗೆ ತರಿಸಿಕೊಳ್ಳುತ್ತಿದ್ದಾರೆ,ಶಾಲೆಯ ಪ್ರಿನ್ಸಿಪಲ್ ಹಾಗೂ ವಾರ್ಡನ್ ನೀಡುತ್ತಿರುವ ಕಿರುಕುಳದ ಬಗ್ಗೆ ವಿದ್ಯಾರ್ಥಿಗಳು ನಮ್ಮೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆ ಕೂಡ ನಮ್ಮಲ್ಲಿದೆ ಎಂದು ಹೇಳಿದರು.

ಇಂತಹ ದುರ್ವರ್ತನೆ ಹಾಗೂ ಬೇಜವಾಬ್ದಾರಿತನದಿಂದ ನಡೆದುಕೊಳ್ಳುವ,ಪ್ರಿನ್ಸಿಪಾಲ್ ಹಾಗೂ ವಾರ್ಡನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಇಲ್ಲದಿದ್ದರೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗಳಿಗೆ ಬೇಕಾಗುತ್ತದೆ ಎಂದು ಈ ಮೂಲಕ ಆಗ್ರಹಿಸಿದ್ದಾರೆ.