ದುದನಿ/ ಸಾತಲಿಂಗಪ್ಪ ಎಸ್ ಮೇತ್ರೆ ಅವರ ಪುಣ್ಯ ತಿಥಿ ನಿಮಿತ್ತ ರಕ್ತದಾನ ಶಿಬಿರ

ದುದನಿ/  ಸಾತಲಿಂಗಪ್ಪ ಎಸ್ ಮೇತ್ರೆ ಅವರ ಪುಣ್ಯ ತಿಥಿ ನಿಮಿತ್ತ ರಕ್ತದಾನ ಶಿಬಿರ

ದುದನಿ/ ಸಾತಲಿಂಗಪ್ಪ ಎಸ್ ಮೇತ್ರೆ ಅವರ ಪುಣ್ಯ ತಿಥಿ ನಿಮಿತ್ತ ರಕ್ತದಾನ ಶಿಬಿರ 

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಮಾಳಿ/ಮಾಲಗಾರ ಸಮಾಜದ ಬಿಸ್ಮ್ ಪಿತಾಮಹ ಲಿಂ. ಸಾತಲಿಂಗಪ್ಪ ಎಸ್ ಮೇತ್ರೆ ಇವರ 4ನೇ ಪುಣ್ಯ ತಿಥಿ ನಿಮಿತ್ತ ಶ್ರೀ ಸಿದೇಶ್ವರ ಬ್ಲಡ್ ಬ್ಯಾಂಕ್ ಸೋಲಾಪುರ್ ಮತ್ತು ಮೇತ್ರೆ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ದುದನಿ ಸಮಾಧಿ ಅವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಶಿಬಿರದಲ್ಲಿ 111 ರಕ್ತ ದಾನಿಗಳು ರಕ್ತ ದಾನಮಾಡಿದರು. ನಂತರ ರಕ್ತ ದಾನ ಮಾಡಿದವರಿಗೆ ಪ್ರಮಾಣ ಪತ್ರವನ್ನು ಮಾಜಿ. ರಾಜ್ಯ ಗೃಹ ಸಚಿವರಾದ ಶೀ ಸನ್ಮಾನ ಸಿದ್ದರಾಮ ಎಸ್ ಮೇತ್ರೆ ವಿತರಿಸಿದರು.

ಈ ಸಮಾರಂಭದಲ್ಲಿ ಅಕ್ಕಲಕೋಟ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸನ್ಮಾನ ಶಂಕರ ಎಸ್ ಮೇತ್ರೆ, ಆಳಂದ್ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ. ಮಹಾಂತಪ್ಪ ಹಾಳಮಳ್ಳಿ ನೀಲೂರ. ಬ್ಲಡ್ ಬ್ಯಾಂಕ್ ಮುಖ್ಯಸ್ತ ಸಾದಿಕ್ ಮುಜಾವರ ಭಗವಂತರಾಯ ಕಾಮಜಿ, ಯುವ ನಾಯಕರಾದ ಸಂಗಮನಾಥ ಮೇತ್ರೆ, ಪ್ರಥಮೇಶ ಮೇತ್ರೆ, ಶ್ರೀಮಂತ ಮೇತ್ರೆ, ಶಿವಾನಂದ ಮಾಡ್ಯಾಳ, ಸಾಯಬಣ್ಣಾ ಹೂಗಾರ ನೀಲೂರ, ಇನ್ನು ಅನೇಕ ಮೇತ್ರೆ ಪರಿವಾರದ ಬಂದುಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.