ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಹಿಳೆಯರು ಮಕ್ಕಳು ಪರದಾಟ : ಧನರಾಜ ಡಿ. ರಾಜೋಳ

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಹಿಳೆಯರು ಮಕ್ಕಳು ಪರದಾಟ : ಧನರಾಜ ಡಿ. ರಾಜೋಳ

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಹಿಳೆಯರ, ಮಕ್ಕಳ ಪರದಾಟ : ಧನರಾಜ ಡಿ. ರಾಜೋಳ

ಬಸವಕಲ್ಯಾಣ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುವರ ಹಾವಳಿ ಹೆಚ್ಚಾಗಿವೆ.

ಕಿರಾಣಿ ಅಂಗಡಿಗೆ ದಿನಸಿ ಸಾಮಾನುಗಳನ್ನು ತರಲು ಹೋದರೆ ಕುಡುಕರು ಅವಾಚ್ಯ ಶಬ್ದದಿಂದ ಅವರನ್ನು ನಿಂದಿಸುವುದು ಮತ್ತು ಓರೆ ಕಣ್ಣಿನಿಂದ ನೋಡಿ ಚುಡಾಯಿಸುವ ಕೆಲಸ ಕೂಡ ಮಾಡುತ್ತಿದ್ದಾರೆ. 

   ಮರೆಯಾದಸ್ಥರು ರಸ್ತೆ ಮೇಲೆ ಹೋಗುತ್ತಿರುವಾಗ ಕುಡಿದು ಗಲಾಟೆ ಮಾಡುತ್ತಿದ್ದಾರೆ ಇವರ ಹಾವಳಿಯಿಂದ ಗ್ರಾಮದ ಜನರುಬೇಸತ್ತು ಹೋಗಿದ್ದಾರೆ.

ಕಿರಾಣಿ ಅಂಗಡಿ ಅಕ್ಕ ಪಕ್ಕದಲ್ಲಿ ಅಂಗನವಾಡಿ , ಸರ್ಕಾರಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಕ್ಕಳು ಶಾಲೆಗೆ ಹೋಗುವಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನಮ್ಮ ದೇಶ ಕಟ್ಟುವ ಮಕ್ಕಳ ಮನಸ್ಸಿನ ಮೇಲೆ ಭೀಕರ ಪರಿಣಾಮಗಳು ಬರುತ್ತಿದ್ದು. ಇದನ್ನು ಕಡಿವಾಣ ಹಾಕೋದು ಯಾವಾಗ!

 ಗ್ರಾಮ ಮತ್ತು ನಗರದಲ್ಲಿ ಸರಾಯಿ ಮಾರಾಟ ಮಾರುವರ ಅಂಗಡಿಗಳನ್ನು ಬಂದ್ ಮಾಡಿಸಿ ಅಂಗಡಿ ಮಾಲಿಕರ ಮೇಲೆ ಸೂಕ್ತವಾಗಿ ಕಾನೂನು ಕ್ರಮ ಜರುಗಿಸಬೇಕೆಂದು ಬಸವಕಲ್ಯಾಣ ನಗರ ಘಟಕ ಪ್ರಧಾನ ಕಾರ್ಯದರ್ಶಿ ಧನರಾಜ ಡಿ. ರಾಜೋಳ ಮತ್ತು ಜನತಾ ದಳ (ಜಾತ್ಯಾತಿತ) ನಗರಾಧ್ಯಕ್ಷ ಡಾ.ಜಿಯಾವುದಿನ ನಿಲಂಗೇಕರ ಅವರು ಬೀದರ್ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.