ವಾಡಿ | ಬ್ರಹ್ಮಕಮಲದ ಜೋಡಿ ಹೊವು

ವಾಡಿ | ಬ್ರಹ್ಮಕಮಲದ ಜೋಡಿ ಹೊವು

ವಾಡಿ ಯಲ್ಲಿ ಬ್ರಹ್ಮಕಮಲದ ಜೋಡಿ ಹೊವು

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆಯ ಕಾಶೆಟ್ಟಿ ಪರಿವಾರದ ಮನೆಯಲ್ಲಿನ ಹೂವಿನ ಕುಂಡದಲ್ಲಿ ನೆಟ್ಟ ಬ್ರಹ್ಮ ಕಮಲದ ಗಿಡವು ಮಧ್ಯರಾತ್ರಿ ಜೋಡು ಹೂವು ಬಿಟ್ಟು ಕಣ್ಣಮನ ಸೆಳೆಯಿತು.

ಮನೆಯ ಅಕ್ಕಪಕ್ಕದವರೊಂದಿಗೆ ಜೋಡು ಬ್ರಹ್ಮಕಮಲಕ್ಕೆ ದಂಪತಿಗಳಾದ ಪ್ರೇಮಾವತಿ ಕಾಶೆಟ್ಟಿ, ಶಿವಶಂಕರ ಕಾಶೆಟ್ಟಿ ಹಾಗೂ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ,ಸಂಗೀತ ಯಾರಿ,ಪಾಯಲ ವರ್ಮಾ,ರೂಪಾಲಿ ಸಿಂದಗಿ, ತೃಪ್ತಿ ಯಾರಿ ಪೂಜೆ ಸಲ್ಲಿಸಿದರು.

ಬ್ರಹ್ಮ ಕಮಲ ಮಧ್ಯರಾತ್ರಿ ಅರಳಿ ಬೆಳಗಾಗುವುದರ ಒಳಗೆ ಕಮರಿಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ,

ಮೇಲ್ಚಾವಣಿಯಲ್ಲಿ ಬೆಳೆಸುತ್ತಾರೆ. ಆರೋಗ್ಯ, ಸೌಂದರ್ಯಕ್ಕಿಂತಲೂ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಹಿಂದೂಗಳಿಗೆ ಈ ಹೂವು ಪೂಜ್ಯನೀಯ. ರಾತ್ರಿ ವೇಳೆ ಈ ಹೂವು ಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುವುದು ಸಂಪ್ರದಾಯವಿದೆ. 

ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್‌ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಕೇವಲ ವರ್ಷಕೊಮ್ಮೆ ಅರಳುವ ಈ ಹೂವು ರಾತ್ರಿ ವೇಳೆ ಅರಳಿ ರಾತ್ರಿಯೇ ಬಾಡಿಹೋಗುತ್ತೆ. ಹೂವುಗಳಲ್ಲೇ ಈ ಥರದ ಸ್ವಭಾವವನ್ನು ತೋರಿಸುವ ಹೂವು ಇದೊಂದೇ.

ಇಂಥ ಅಪರೂಪದ ಹೂವು ಬ್ರಹ್ಮ ಕಮಲದ ಹೂವು ಅರಳ್ಳೋದೂ ಅದೃಷ್ಟದ ಸಂಕೇತ ಎಂಬ ನಂಬಿಕೆ ಇದೆ.