ಪುರಾಣ,ಪ್ರವಚನಗಳು ಧಾರ್ಮಿಕ ಚಿಂತನೆಗಳನ್ನು ಹೆಚ್ಚಿಸುತ್ತವೆ: ಶಾಸಕ ಅಲ್ಲಮಪ್ರಭು ಪಾಟೀಲ್

ಪುರಾಣ,ಪ್ರವಚನಗಳು ಧಾರ್ಮಿಕ ಚಿಂತನೆಗಳನ್ನು ಹೆಚ್ಚಿಸುತ್ತವೆ: ಶಾಸಕ ಅಲ್ಲಮಪ್ರಭು ಪಾಟೀಲ್

ಪುರಾಣ,ಪ್ರವಚನಗಳು ಧಾರ್ಮಿಕ ಚಿಂತನೆಗಳನ್ನು ಹೆಚ್ಚಿಸುತ್ತವೆ: ಶಾಸಕ ಅಲ್ಲಮಪ್ರಭು ಪಾಟೀಲ್ 

ಕಲಬುರಗಿ:ಪುರಾಣ ಹಾಗೂ ಪ್ರವಚನಗಳು ಕೇಳುವುದರಿಂದ ಮನುಷ್ಯನ ಧಾರ್ಮಿಕ ಚಿಂತನೆಗಳು ಹೆಚ್ಚುತ್ತದೆ.ಅದಕ್ಕಾಗಿ ಮಹಾತ್ಮರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಿಳಿಸಿದರು.

ಶ್ರಾವಣ ಮಾಸ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಗುಡ್ಡಾಪೂರ ಶ್ರೀ ದಾನಮ್ಮ ದೇವಿ ಚರಿತ್ರೆಯ ಒಂದು ತಿಂಗಳು ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪುರಾಣ ಕೇಳುವುದರಿಂದ ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡುವುದಷ್ಟೇ ಅಲ್ಲ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ.ಮೇಲು, ಕೀಳೆಂಬ ಭಾವನೆ ಹೊಗಲಾಡಿಸುತ್ತದೆ.ಸಮಾನತೆಯ ಬೆಳಕು ಚೆಲ್ಲುವ ಕಾರ್ಯ ಎಲ್ಲರೂ ಮಾಡಬೇಕು ಎಂದ ಅವರು ಜಯನಗರ ಶಿವಮಂದಿರ ಆವರಣದಲ್ಲಿ ಶೀಘ್ರದಲ್ಲೇ ಸಮೂದಾಯ ಭವನ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇಂದು ಪುರಾಣ, ಪ್ರವಚನಗಳು ಗ್ರಂಥಾಲಯಗಳಾಗಿವೆ.ಅಲ್ಲಿ ಮಹಾತ್ಮರ ತ್ಯಾಗದ ಜೀವನ ಚರಿತ್ರೆ ತಿಳಿಯಬಹುದು.ಇಂಥ ಪುರಾಣಗಳು ಇನ್ನು ಹೆಚ್ಚು ನಡೆಯಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ ಹಾಗೂ ಕೃಷಿ ಚಿಂತಕ ಡಾ.ಲಿಂಗರಾಜ ಅಪ್ಪ ಹೇಳಿದರು.ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಎಚ್ಕೆಇ ಸೋಸೈಟಿ ಮಾಜಿ ಅಧ್ಯಕ್ಷ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷ ಡಾ.ಭೀಮಾಶಂಕರ ಮಾತನಾಡಿ ಈ ವರ್ಷ ಜಯನಗರ ಶಿವಮಂದಿರಲ್ಲಿ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಒಂದು ತಿಂಗಳು ಪುರಾಣ ನಡೆಸಲಾಗುತ್ತಿದೆ.ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಭಕ್ತರ ಮತ್ತು ಹಿರಿಯರ ಕೋರಿಕೆ ಮೇರೆಗೆ ಶ್ರೀ ದಾನಮ್ಮ ದೇವಿ ಪುರಾಣ ಹಮ್ಮಿಕೊಳ್ಳಲಾಗಿದೆ.ಒಂದು ತಿಂಗಳು ಅನ್ನ ದಾಸೋಹ ನಡೆಯುತ್ತದೆ.ಸರ್ಕಾರದ ಯಾವುದೇ ಸಹಾಯವಿಲ್ಲದೆ ಶಿವಮಂದಿರದ ಜೀರ್ಣೋದ್ಧಾರ ಕೈಗೊಳ್ಳಲಾಗಿದೆ. ಅನುದಾನದ ಹಸ್ತ ನೀಡಿದರೆ ಇನ್ನೂ ಅಭಿವೃದ್ಧಿ ಪಡಿಸಲಾಗುವುದು.ಜಯನಗರ ಶಿವಮಂದಿದಲ್ಲಿ ಪ್ರತಿ ವರ್ಷ ಶ್ರಾವಣ ಮಾಸ ಅಷ್ಟೇ ಅಲ್ಲದೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.ಗುಡಿಗೆ ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಹೇಳಿದರು.

ವೇದಮೂರ್ತಿ ಪುರಾಣ ಪಂಡಿತ ಶ್ರೀ ತೋಟಯ್ಯ ಶಾಸ್ತ್ರೀಗಳು ಪುರಾಣ ಹೇಳುವ ಮೂಲಕ ಪ್ರಾರಂಭಕ್ಕೆ ಚಾಲನೆ ನೀಡಿದರು.ಇದಕ್ಕೂ ಮೊದಲು ಸಂಗೀತ ಕಲಾವಿದರಾದ ಮೃತ್ಯುಂಜಯ ಹಾಗೂ ಸಹ ಕಲಾವಿದರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ‌ ಕೆ.ಬಿ ಸ್ವಾಗತಿಸಿದರು.ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ ಪ್ರಾರ್ಥಿಸಿದರು.ಉಪಾಧ್ಯಕ್ಷ ವಿರೇಶ ದಂಡೋತಿ ವಂದಿಸಿದರು.ಭೀಮಾಶಂಕರ ಶೆಟ್ಟಿ ,ಬಸವರಾಜ ಅನ್ವರಕರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ,ವಿರೇಶ ಹುಡುಗಿ,ಎಸ್.ಡಿ.ಸೇಡಂಕರ,ಮನೋಹರ ಬಡಶೇಷಿ,ಬಂಡಪ್ಪ ಕೇಸೂರ,ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ,ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ವಿನೋದ ಪಾಟೀಲ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಉಪಾಧ್ಯಕ್ಷೆ ಅನಿತಾ ನವಣಿ,ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ,ಲತಾ ತುಪ್ಪದ,ವಿಜಯಾ ದಂಡೋತಿ,ಗಂಗಾ ಅನ್ವರಕರ,ಗೀತಾ ‌ಸಿರಗಾಪೂರ, ಪಾರ್ವತಿ ಶೆಟ್ಟಿ,ವಿಜಯಾ ಚವ್ಹಾಣ,ಶಕುಂತಲಾ ಮರಡಿ ಸೇರಿದಂತೆ ವಿವಿಧ ಬಡಾವಣೆಯ ಅನೇಕ ಮಹಿಳೆಯರು, ಹಿರಿಯರು,ಸಾರ್ವಜನಿಕರು ಭಾಗವಹಿಸಿದ್ದರು.