ಜಗನ್ನಾಥ ಶೇರಿಕಾರ ಅವರಿಗೆ ಚಂದನ ಸುಗಂಧ ಪ್ರಶಸ್ತಿ‌ ಆಯ್ಕೆ

ಜಗನ್ನಾಥ ಶೇರಿಕಾರ ಅವರಿಗೆ ಚಂದನ ಸುಗಂಧ ಪ್ರಶಸ್ತಿ‌ ಆಯ್ಕೆ

ಜಗನ್ನಾಥ ಶೇರಿಕಾರ ಅವರಿಗೆ ಚಂದನ ಸುಗಂಧ ಪ್ರಶಸ್ತಿ‌ ಆಯ್ಕೆ

ಕಲಬುರಗಿ: ಸಾಹಿತಿ ಮತ್ತು ಹಿರಿಯ ಪತ್ರಕರ್ತ ಜಗನ್ನಾಥ ಸೇರಿಕಾರ ಅವರ ಸಾಮಾಜಿಕ‌ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಚಿಂಚೋಳಿ ತಾಲ್ಲೂಕಿನ ಚಂದನಕೇರಾದ ಭೃಂಗಿಪಾಚೇಶ್ವರ ಕಟ್ಟಿಮಠದ *ಚಂದನ ಸುಗಂಧ* ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.

ಜಗನ್ನಾಥ ಸೇರಿಕಾರ ಅವರುಪತ್ರಿಕೋದ್ಯಮ, ಸಾಹಿತ್ಯ, ಸಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗಾಗಿ‌ ವೀರೇಂದ್ರ ಪಾಟೀಲ ಜೀವನ ಚರಿತ್ರೆ ಬರೆದಿರುವ ಅವರು, ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅವರು ನಿರಂತರವಾಗಿ ಬರೆಯುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆ.  

ಅವರ ಮಾನವೀಯ ವರದಿಗಳು ಓದುಗರ ಹೃದಯ ಗೆದ್ದಿದ್ದು, ಅವರ ಬರವಣಿಗೆ ಶೈಲಿ ಓದುಗರಿಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಅವರು ನಿರ್ವಹಿಸಿದ ಪ್ರಾಮಾಣಿಕ ವರದಿ ಪ್ರಕ್ರಿಯೆ ಮತ್ತು ಬಿಕ್ಕಟ್ಟಿನ ಸಂಗತಿಗಳ ಕುರಿತು ಅವರ ಸವಿವರ ವರದಿ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.  

ಚಂದನ ಸುಗಂಧ ಪ್ರಶಸ್ತಿಯವು

ಸೇರಿಕಾರ ಅವರ ಸಾಧನೆಗೆ ಸಮರ್ಪಕ ಗೌರವ ಎಂದು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಅಭಿಪ್ರಾಯಪಟ್ಟಿದ್ದಾರೆ. ಜಗನ್ನಾಥ ಶೇರಿಕಾರ ಅವರಿಗೆ ಹಾರಕೂಡ ಮಠದ ಶ್ರೀಚನ್ನ ರತ್ನ, ಕಾರ್ಯನಿರತ ಪತ್ರಕರ್ತರ ಸಂಗನಬಸ್ಸಯ್ಯ ಸ್ಮರಣಾರ್ಥ ಜಿಲ್ಲಾ ಮಟ್ಟದ ಪ್ರಶಸ್ತಿ, ಅಣವಾರ ಗ್ರಾಮಸ್ಥರಿಂದ ಸೇವಾರತ್ನ, ಕೋಡ್ಲಿ ಗ್ರಾಮಸ್ಥರಿಂದ ಗ್ರಾಮೀಣಾಭಿವೃದ್ಧಿ‌, ಕರವೇ ಪ್ರಶಸ್ತಿ, ತಾಲ್ಲೂಕು ಆಡಳಿತದ ರಾಜ್ಯೋತ್ಸವ, ಕಲ್ಯಾಣ ಕಹಳೆ ದಿನ‌ಪತ್ರಿಕೆಯ ವಾರ್ಷಿಕ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಸೇವಾ ಸಂಘದ ಸಾಹಿತ್ಯ ಸೇವಾ ರತ್ನ, ಮಹಾದಾಸೋಹಿ ಕಲಬುರಗಿ ಶರಣವೇಶ್ವರ ಸಂಸ್ಥಾನದ ಶರಣರತ್ನ, ಭಾರತೀಯ ರೆಡ ಕ್ರಾಸ್ ಸಂಸ್ಥೆ ಗೌರವ ಪ್ರಶಸ್ತಿ, ಪಸ್ತಪುರ ಗ್ರಾಮಸ್ಥರಿಂದ ಪ್ರಸಾದಪುರ ರತ್ನ ಪ್ರಶಸ್ತಿಗಳು ಲಭಿಸಿವೆ 

ಶರಣಗೌಡ ಪಾಟೀಲ ಪಾಳಾ