ಉತ್ತಮ ಆಹಾರ ಸೇವಿಸಿ ರೋಗದಿಂದ ದೂರವಿರಿ - ಜಯಶ್ರೀ ಮತ್ತಿಮಡು.
ಉತ್ತಮ ಆಹಾರ ಸೇವಿಸಿ ರೋಗದಿಂದ ದೂರವಿರಿ - ಜಯಶ್ರೀ ಮತ್ತಿಮಡು.
ಶಹಾಬಾದ್ : ಒಳ್ಳೆಯ ಆಹಾರ ಸೇವನೆಯಿಂದ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಿ, ಮತ್ತು ರಾಸಾಯನಿಕ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ತಪ್ಪಿಸಲು ಸಾಧ್ಯ ಎಂದು ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಹೇಳಿದರು.
ಅವರು ಶಹಾಬಾದ ಬಿಜೆಪಿ ಮಂಡಲದ ಸೇವಾ ಪಾಕ್ಷಿಕ ಕಾರ್ಯಕ್ರಮದ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವಬ್ಬರು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ಕೊಬ್ಬಿನ ಅಂಶ ಇರುವ ಮತ್ತು ಅತಿಯಾಗಿ ಸಂಸ್ಕರಿಸಿದ ಆಹಾರವನ್ನೂ ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ, ಇವುಗಳಿಂದ ಜಾಗೃತವಾಗಿ ಇದ್ದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು, ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಉದ್ಯಮಿ ನರೇಂದ್ರ ವರ್ಮಾ ಮಾತನಾಡಿ ಬಡವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ, ತಜ್ಞ ವೈದ್ಯರು ಲಭ್ಯವಿದ್ದಾಗ ಇಂತಹ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ, ಆರೋಗ್ಯವೇ ಭಾಗ್ಯ ಎಂಬ ತತ್ವದಡಿ ಉತ್ತಮ ಚಿಕಿತ್ಸೆ ನೀಡುತ್ತಿರುವ ವೈದ್ಯರು ಬಡವರ ಬಂದುಗಳಾಗಿದ್ದಾರೆ ಇಂತಹ ನಿಸ್ವಾರ್ಥ ಸೇವೆಗೆ ನಾವೆಲ್ಲರೂ ಸದಾ ಬೆಂಬಲವಾಗಿ ನಿಲ್ಲಬೇಕು ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ ಮಾತನಾಡಿದರು.
ವೇದಿಕೆಯ ಮೇಲೆ ಡಾ. ಕಿಶನ್ ಜಾಧವ್, ಡಾ. ಸಂಜೀವ, ಡಾ. ಸವಿತಾ ಜಿಂಗಾಡೆ, ದಿನೇಶ ಯಲಶೆಟ್ಟಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಭಾಗೀರಥಿ ಗುನ್ನಾಪೂರ ಉಪಸ್ಥಿತರಿದ್ದರು.
126 ಕ್ಕು ಹೆಚ್ಚು ಜನರನ್ನು ಉಚಿತ ಆರೋಗ್ಯ ತಪಾಸಣೆ ಮಾಡಿ, ಔಷಧಿ ಮತ್ತು ಗುಳಿಗೆಗಳನ್ನು ನೀಡಲಾಯಿತು.
ಶಿಬಿರದಲ್ಲಿ ಮಹಾದೇವ ಗೊಬ್ಬೂರಕ, ಕನಕಪ್ಪ ದಂಡುಗುಳ್ಕರ, ಚಂದ್ರಕಾಂತ ಗೊಬ್ಬೂರಕ, ದಿನೇಶ ಗೌಳಿ, ನಾರಾಯಣ ಕಂದಕೂರ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ, ಜಯಶ್ರೀ ಸೂಡಿ, ನೀಲಮ್ಮ ಘಂಟ್ಲಿ, ನಗರ ಸಭೆ ಸದಸ್ಯರಾದ ರವಿ ರಾಠೋಡ, ಜಗದೇವ ಸುಬೇದಾರ, ಪಾರ್ವತಿ ಪವಾರ ಮತ್ತು ಕಾಶಣ್ಣಾ ಚನ್ನೂರ, ಶಿವಕುಮಾರ ತಳವಾರ, ಲೋಹಿತ ಮಳಖೇಡ, ನವೀನ ಸಿಪ್ಪಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ಸಿದ್ರಾಮ ಕುಸಾಳೆ ಸ್ವಾಗತಿಸಿದರು, ದೇವದಾಸ ಜಾಧವ ನಿರೂಪಿಸಿದರು, ಗೋವಿಂದ ಕುಸಾಳೆ ವಂದಿಸಿದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ