ಬೆಳೆ ಹಾನಿಗೆ ಪರಿಹಾರ ಒದಗಿಸಲು :ಸತೀಶ್ ವಾಸರೆ ಒತ್ತಾಯ

ಬೆಳೆ ಹಾನಿಗೆ ಪರಿಹಾರ ಒದಗಿಸಲು :ಸತೀಶ್ ವಾಸರೆ ಒತ್ತಾಯ

ಬೆಳೆ ಹಾನಿಗೆ ಪರಿಹಾರ ಒದಗಿಸಲು :ಸತೀಶ್ ವಾಸರೆ ಒತ್ತಾಯ

ಕಮಲನಗರ: ತಾಲೂಕಿನ ತಹಸಿಲ್ ಕಚೇರಿಯಲ್ಲಿ ಜಿಲ್ಲಾ ಸಂಭಾಜಿ ಬಿ ಗ್ರೇಡ್ ಜಿಲ್ಲಾ ಅಧ್ಯಕ್ಷರಾದ ಸತೀಶ್ ವಾಸರೆ ನೇತೃತ್ವದಲ್ಲಿ ಗಡಿಭಾಗದಲ್ಲಿ ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಎಂದ ಪರಿಹಾರ ಒದಗಿಸಲು ಆಗ್ರಹಿಸಿ ನಿನ್ನೆ ತಹಶೀಲ್ದಾರ್ ಅಮಿತ್ ಕುಮಾರ್ ಕುಲಕರ್ಣಿಯವರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

 ತದನಂತರ ಮಾತನಾಡಿ ತಾಲೂಕಿನ ಕಳೆದ ಅನೇಕ ದಿನಗಳಿಂದ ಸುರಿದ ಮಳೆಯಿಂದ ಬೆಳೆ ಹಾನಿ ಆಗಿರುವುದನ್ನು ಕಂಡು ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ಅಮೃತವಾಗಿ ಕೊಳೆಯುವಂತಾಗಿದೆ. ರೈತರು ಕಷ್ಟಪಟ್ಟು ಬೆಳೆದ ಉದ್ದು ಹೆಸರು ಸೋಯಾ ತೊಗರೆ ಅನೇಕ ಬೆಳೆಗಳು ಕೂಡ ರೈತರ ಕೈಯಲ್ಲಿ ಬರದಿರುವುದರಿಂದ ರೈತರ ಬದುಕಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಿರುವುದರಿಂದ ಕಣ್ಣೀರು ಸುರಿಸುವಂತಾಗಿದೆ. ಈ ಪ್ರಸ್ಥಿತಿಯನ್ನು ಕಂಡು ರೈತರ ಬಾಳಿಗೆ ನೆರವಾಗಲು ತಾವುಗಳು ಪ್ರತಿ ಕ್ವಿಂಟಲ್ ಕೆ ಸೋಯಾ ಬೆಳೆಗ್ಗೆ 8000ರೂ ಹಣವನ್ನು ಕೊಡಬೇಕು. ಹಣದಿಂದ ಮುಂದೆಯಾದರೂ ಕಡಲೆ ಬಿಳಿ ಜೋಳ ಬಿತ್ತನೆ ಮಾಡಲು ನೆರವಾಗುತ್ತದೆ ಎಂದು ಆಗ್ರಹಿಸಿದರು

ಈ ಸಂದರ್ಭದಲ್ಲಿ ಪ್ರಶಾಂತ್ ಬಿರಾದಾರ್ ಸಂಭಾಜಿ ಬಿರಾದಾರ್ ಪ್ರಶಾಂತ್ ಎನ್ ಬಿರಾದಾರ್ ಶ್ಯಾಮ್ ಮನೋಹರ್ ದಶರಥ ಬಿರಾದಾರ್ ಸಂತೋಷ್ ಬಿರಾದಾರ್ ಸಂಭಾಜಿ ಶ್ರೀಧರ್ ಬಿರಾದರ್ ರಾಮ್ ಜಾದವ್ ಜೀವನ್ ರಾವ್ ಮುಧಾಳೆ ತಾನಾಜಿ ಬಿರಾದಾರ್ ದೇವಿದಾಸ್ ಚಿಕ್ಲೇ ಸೈಯದ್ ಅಮೀರ್ ಸಾಬ್ ಇನ್ನಿತರು ಹಾಜರಿದ್ದರು.

ವರದಿ ಸಂಗಮೇಶ್ವರ ಎಸ್ ಮುರ್ಕೆ ಹೊಳೆಸಮುದ್ರ ತಾಲೂಕು ಕಮಲನಗರ