ಎಂ.ಎನ್.ರಮೇಶ ಗುಬ್ಬಿ

ಎಂ.ಎನ್.ರಮೇಶ ಗುಬ್ಬಿ

ಎ.ಎನ್. ರಮೇಶ್, ಗುಬ್ಬಿ

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಇವರು ವೃತ್ತಿಯಲ್ಲಿ ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತಿ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ಇವರದು ಪಳಗಿದ ಕೈ. ಜೊತೆಗೆ ನಟನೆ, ನಿರೂಪಣೆ, ನಿರ್ದೇಶನಕ್ಕೂ ಎತ್ತಿದ ಕೈ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನಗಳ ಸಂಕಲನ, ‘ಭಾವದಂಬಾರಿ’ ಎಂಬ ಕಥಾಸಂಕಲನ. “ಶಕ್ತಿ ಮತ್ತು ಅಂತ” ಎಂಬ ಅವಳಿ ನಾಟಕ ಸಂಕಲನ, “ಕಿಸ್ ಮಾತ್ರೆ” “ಸಂಸಾರವೆಂಬ ಹಾರ(ರ್)ಮೋನಿಯಮ್” ಎನ್ನುವ ಹಾಸ್ಯಗವನ ಸಂಕಲನಗಳು, “ಹೂವಾಡಿಗ” “ಕಾಡುವ ಕವಿತೆಗಳು” “ಮಾತು-ಮೌನಗಳ ನಡುವೆ..” “ಬುದ್ದ ನಗುತ್ತಿದ್ದಾನೆ” ಎಂಬ ಕವನ ಸಂಕಲನಗಳು ಪ್ರಕಟವಾಗಿದೆ. “ಆತ್ಮಾನುಸಂಧಾನÉ” ಕವನ ಸಂಕಲನ ಅಚ್ಚಿನ ಮನೆಯಲ್ಲಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ತ್ರಿವಳಿ ನಾಟಕಗಳ ಸಂಕಲನ ತಯಾರಿ ಹಂತದಲ್ಲಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ. ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದವರಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012 ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಹಾಗೂ ಸುರ್ವೆ ಪತ್ರಿಕೆವತಿಯಿಂದ “ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ” ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ, ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ “ಬಸವಜ್ಯೋತಿ” ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ “ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ”, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018, 2020, 2022 ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ “ಸ್ವರಚಿತ ಕವನ ವಾಚನ” ದಲ್ಲಿ ಪ್ರಥಮ ಬಹುಮಾನ,

ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ ಇವರಿಂದ 2014ರ “ಚುಟುಕು ಮುಕುಟ” ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ “ಯುವ ಪ್ರತಿಭಾ ಪುರಸ್ಕಾರ” ಪಡೆದಿರುತ್ತಾರೆ. “ಶಕ್ತಿ ಮತ್ತು ಅಂತ” ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ (ರಿ) ಇಂದ 2017 ನೇ ಸಾಲಿನ “ನೃಪ ಸಾಹಿತ್ಯ ಪ್ರಶಸ್ತಿ” ಲಭಿಸಿರುತ್ತದೆ. 2019 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮತ್ತು ಮಾಣಿಕ್ಯ ಪ್ರಕಾಶನ. ಹಾಸನ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕವಿ ಕಾವ್ಯಸಮ್ಮೇಳನದಲ್ಲಿ “ಕಾಡುವ ಕವಿತೆಗಳು” ಕವನ ಸಂಕಲನಕ್ಕೆ ರಾಜ್ಯಮಟ್ಟದ ಪ್ರತಿಷ್ಟಿತ “ಜನ್ನ” ಕಾವ್ಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರ “ಕಾಡುವ ಕವಿತೆಗಳು” ಕೃತಿಗೆ ಬೆಳಗಾವಿಯ ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ “ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ” ಲಭಿಸಿದೆ. 2020 ಮಾರ್ಚಿಯಲ್ಲಿ ‘ಲೇಖಿಕಾ ಸಾಹಿತ್ಯ ವೇದಿಕೆ’ ಯವರು ಆಯೋಜಿಸಿದ್ದ ಪುಸ್ತಕ ಪ್ರಶಸ್ತಿ ಕಾರ್ಯಕ್ರಮದಲ್ಲಿ “ಭಾವದ ಅಂಬಾರಿ” ಕಥಾ ಸಂಕಲನಕ್ಕೆ “ಪುಸ್ತಕ ಪ್ರಶಸ್ತಿ”. ಕನಕಶ್ರೀ ಪ್ರಕಾಶನ, ಬ್ಯಾಕೋಡ. ಬೆಳಗಾವಿ. ಇವರಿಂದ 2021 ರ ಮಾರ್ಚಿಯಲ್ಲಿ, ಧಾರವಾಡದ ರಂಗಾಯಣ ಸಭಾಭವನದಲ್ಲಿ ನಡೆದ ಕವಿ ಸಮ್ಮೇಳನದಲ್ಲಿ “ಕಾಡುವ ಕವಿತೆಗಳು” ಕೃತಿಗೆ “ಕನಕಶ್ರೀ ಸಾಹಿತ್ಯ ಪ್ರಶಸ್ತಿ” ಗೌರವ ಪುರಸ್ಕಾರ. ಇವರ “ಸಂಸಾರವೆಂಬ ಹಾರ(ರ್)ಮೋನಿಯಮ್” ಹಾಸ್ಯಗವನ ಸಂಕಲನಕ್ಕೆ ಗುರುಕುಲ ಕಲಾ ಪ್ರತಿಷ್ಟಾನ(ರಿ) ತುಮಕೂರು ಇವರಿಂದ ನೀಡಲಾಗುವ 2021 ನೇ ಸಾಲಿನ ರಾಜ್ಯ ಮಟ್ಟದ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿ ದೊರಕಿದೆ.