ಸಂವಿಧಾನ ಉಳಿದರೆ ಸಮಾನತೆ - ಡಾ.ಕೈಲಾಸ ಡೋಣಿ

ಸಂವಿಧಾನ ಉಳಿದರೆ ಸಮಾನತೆ - ಡಾ.ಕೈಲಾಸ ಡೋಣಿ

ಸಂವಿಧಾನ ಉಳಿದರೆ ಸಮಾನತೆ - ಡಾ.ಕೈಲಾಸ ಡೋಣಿ

ಕಲಬುರಗಿ: ಪ್ರಜಾಪ್ರಭುತ್ವ ಇಂದು ಅಪಮೌಲ್ಯವಾಗಿದೆ,ನಮ್ಮ ಜಾತಿ,ಮತ,ಧರ್ಮ,ಅಧಿಕಾರ,ಹುದ್ದೆಗಳಿಂದ ಕಳಚಿಕೊಂಡು ಅಹಂಮಿಕೆ ಮೀರಿ ಜಾತ್ಯಾತೀತ,ನಿಲುವು ಹೊಂದಬೇಕು ಇದಕ್ಕೆ ಬುದ್ಧ,ಬಸವ,ಅಂಬೇಡ್ಕರ್ ಚಿಂತನೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು,ನಾವು ಮುಂದಿನ ತಲೆಮಾರಿಗೆ ಮೌಲ್ಯಗಳನ್ನು ಉಳಿಸಬೇಕು ಸಂವಿಧಾನ ಉಳಿದರೆ ಪ್ರಜಾಪ್ರಭುತ್ವ, ಸಮಾನತೆ ಕಾಣಬಹುದು ಎಂದು ಯುವ ವಿಮರ್ಶಕ ಡಾ‌.ಕೈಲಾಸ ಡೋಣಿ ಅಭಿಪ್ರಾಯಪಟ್ಟರು.

                   ಮಹಾತ್ಮ ಜ್ಯೋತಿ ಬಾಪುಲೆ ಶಿಕ್ಷಣ ಸಂಸ್ಥೆಯ ಮಲ್ಲಿಕಾರ್ಜುನ ಖರ್ಗೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ಚಕೋರ ಸಾಹಿತ್ಯ ವೇದಿಕೆ ಕಲಬುರಗಿ ಹಮ್ಮಿಕೊಂಡ ಉಪನ್ಯಾಸ ಮಾಲೆ-೮:

ರಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಕುರಿತು ಉಪನ್ಯಾಸ ನೀಡುತ್ತ ಇಲ್ಲಿರುವ ಕೆಳಮಟ್ಟದ ಜನರಿಂದ ಮೆಲ್ಮಟ್ಟದ ವರಿಂದ ಎಲ್ಲರಿಗೂ ಒಂದೇ ಮತದಾನ ಹಕ್ಕಿದೆ.ನಮ್ಮಲ್ಲಿ ಬುದ್ಧರ ಪ್ರಬುದ್ಧತೆ,ಬಸವಣ್ಣನವರ ಸಮಾನತೆ,ಕನಕರ ರಾಗಿ ರಾಜ್ಯ,ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಮೇಲೆ ಪ್ರಜಾಪ್ರಭುತ್ವ ಬರಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಶಿಕ್ಷಣ ತಜ್ಞರು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಂಕರ ಕೊಡ್ಲಾ ಮಾತನಾಡಿ ನಾವು ಬದುಕುವ ಹಕ್ಕು ಪಡೆಯಬೇಕಾದರೆ ಮೊದಲು ಪ್ರಜಾಪ್ರಭುತ್ವ ಹಕ್ಕುಗಳು,ಕರ್ತವ್ಯ ನಾವು ಅರಿತು ನಡೆಯಬೇಕು ಎಂದರು.

ಹಾಡಿದರು.ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಸಾಹಿತ್ಯ ಅಕಾಡೆಮಿಯ ಯೋಜನೆ ಕಾರ್ಯ ಚಟುವಟಿಕೆ ಮತ್ತು ಚಕೋರ ವಿದ್ಯಾರ್ಥಿಗಳಿಗೆ ಪೂರಕ ಕಾರ್ಯ.ಅದರ ಜೊತೆಗೆ ಪ್ರಜಾಪ್ರಭುತ್ವ ಮೌಲ್ಯಗಳು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಸರಕಾರ.ಭಾರತದ ಸಂವಿಧಾನ ಬಹು ಮುಖ್ಯವಾಗಿದೆ.ಪ್ರತಿಯೊಬ್ಬ ವ್ಯಕ್ತಿಗೆ ಮೀಸಲಾತಿ ನೀಡಲಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಹಾಳಾಗುತ್ತಿದೆ ವಿದ್ಯಾರ್ಥಿಗಳು ಇತ್ತ ಗಮನ ಹರಿಸಬೇಕೆಂಬ ಉದ್ದೇಶ ಈ ಉಪನ್ಯಾಸವೆಂದರು.

ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಶ್ರೀ ಬಿ.ಎಸ್‌.ಮಾಲಿ ಪಾಟೀಲ ಮಾತನಾಡಿ ಭಾರತೀಯ ಪರಂಪರೆ ಬಹುತ್ವ ನೆಲೆ ಹೊಂದಿವೆ.ಸಮಾನತೆ,ಸ್ವಾತಂತ್ರ್ಯ, ಭಾತೃತ್ವ,ಸಹೋದರತೆ, ಮೂಲಕ ಕಾಪಾಡಿದಾಗ ಪ್ರಜಾಪ್ರಭುತ್ವ ಉಳಿದಿತು ಎಂದರು‌. ಮುಖ್ಯಗುರುಗಳಾದ

ವಿಜಯಲಕ್ಷ್ಮಿ ಇನಾಮದಾರ ವೇದಿಕೆ ಮೇಲೆ ಉಪಸ್ಥಿತಿ ಇದ್ದರು.

ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು.ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು.

ಡಾ.ಅವಿನಾಶ ದೇವನೂರು ವಂದಿಸಿದರು.