ಶ್ರೀ ಮಂತರೆಲ್ಲರೂ ಸುಖಿಗಳೆಂಬುದು ಭ್ರಮೆ

: ಶ್ರೀಮಂತರೆಲ್ಲ ಸುಖಿಗಳೆಂಬುದು ಭ್ರಮೆ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ ಇಪ್ಪತ್ತನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಲೋಕದ ಮಾನವರ ಭೌತಿಕ ಬದುಕು ಹೋರಾಟದ ಬದುಕಾಗಿರುವಂತೆ ಶರಣರ ಬದುಕು ಬರಿ ಉಪಜೀವನದ ಚಿಂತೆಯಿಂದ ಕೂಡಿದ ಬದುಕಾಗಿರಲಿಲ್ಲ .ಧನ ಕನಕ ವಜ್ರ ವೈಡೂರ್ಯ ಬೇಕೆಂದು ಹಪಹಪಿಸುವ ಲೋಕದ ಮಾನವರಿಗೆ ಬದುಕು ಕಾಠಿಣ್ಯದ ಬದುಕಾಗಿ ಕಾಣುತ್ತದೆ. ಶರಣರಿಗೆ ಯಾವ ಚಿಂತೆಗಳು ಇರಲಿಲ್ಲ, ಆದ್ದರಿಂದ ಅವರು ನಿಶ್ಚಿಂತೆಯ ಜೀವನ ಬದುಕಿದರು. ವಿಜ್ಞಾನದ ಪ್ರಕಾರ ಮಾನವರು ಹುಟ್ಟುವುದಕ್ಕಿಂತ ಮುಂಚೆ ಈ ಭೂಮಿ ಈ ಪ್ರಕೃತಿ ಹುಟ್ಟಿದೆ ಭೌತಿಕ ಪ್ರಪಂಚ ನಶಿಸಿ ಹೋಗಬಹುದು, ಬಯಲು ಶಾಶ್ವತವಾಗಿದೆ . ಈ ಪ್ರಪಂಚದಲ್ಲಿ ಪ್ರತಿಯೊಂದು ಬದಲಾವಣೆ ಹೊಂದುತ್ತದೆ ಅದುವೇ ಮಾಯೆಯಾಗಿದೆ. ಮಾಯೆ ಮನುಷ್ಯನೊಳಗಿದೆ ,ಮನುಷ್ಯ ಮಾಯೆಯೊಳಗಿದ್ದಾನೆ . ಮನುಷ್ಯನಿಗೆ ಜೀವನ ಅಶಾಶ್ವತವೆಂದು ಗೊತ್ತಿದೆ ,ಆದರೂ ಸಹ ಮಾನವ ತನ್ನ ಬದುಕಿನ ಬಗ್ಗೆ ಅತಿಯಾಗಿ ಚಿಂತಿಸುತ್ತಿರುತ್ತಾನೆ. ಬದುಕು ನಮ್ಮನ್ನು ಹಿಡಿದುಕೊಂಡಿದೆ ಎನ್ನುತ್ತಾರೆ, ಆದರೆ ಬದುಕಿಗೆ ನಾವೇ ಹಿಡಿದುಕೊಂಡಿದ್ದೇವೆ. ನಾನೆಂಬುದು ಮಾಯೆಯಾಗಿದೆ . ಕುಟುಂಬದಲ್ಲಿ ಯಜಮಾನ ಹಠ ಹಿಡಿಯುವುದು ಕೂಡ ಮಾಯೆಯಾಗಿದೆ. ಇಂಥ ಕಾರಣಗಳಿಂದಾಗಿಯೇ ಪ್ರಸ್ತುತ ಸಂದರ್ಭದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ . ಅತ್ತೆ -ಸೊಸೆ ಜಗಳ ತಂದೆ ತಾಯಿ ಮತ್ತು ಮಕ್ಕಳ ನಡುವಿನ ವಿರಸಗಳಿಗೆ ಅಹಂಕಾರದ ಭ್ರಮೆಯ ಭಾವವೇ ಕಾರಣವಾಗಿದೆ. ಈ ಭೂಮಿಯ ಮೇಲೆ ಮನುಷ್ಯನ ಬದುಕು ಶಾಶ್ವತವಲ್ಲ , ಅಸಂಖ್ಯಾತ ಜನ ಬದುಕಿ ಹೋಗಿದ್ದಾರೆ ಇನ್ನು ಮುಂದೆಯೂ ಅಸಂಖ್ಯಾತ ಜನ ಬದುಕುವವರಿದ್ದಾರೆ . ಕಾಶ್ಮೀರದ ದೊರೆ ಮಹದೇವ ಭೂಪಾಲ ಅರಸೊತ್ತಿಗೆಯನ್ನು ತೊರೆದು ಕಲ್ಯಾಣಕ್ಕೆ ಬಂದ .ಅವನಿಗೆ ಭೌತಿಕ ಉಪೋಗದ ಯಾವ ಕೊರತೆಯು ಇರಲಿಲ್ಲ ,ಆದರೆ ಅದು ಅವನಿಗೆ ಸುಖಿ ಬದುಕಾಗಿರಲಿಲ್ಲ .ಕಲ್ಯಾಣಕ್ಕೆ ಬಂದು ಮೋಳಿಗೆ ಮಾರಯ್ಯನಾಗಿ ಅಧ್ಯಾತ್ಮಿಕ ಬದುಕು ಬದುಕಿರುವುದು ಅವನಿಗೆ ನೆಮ್ಮದಿಯ ಬದುಕಾಗಿತ್ತು .
ಮೋಳಿಗೆ ಮಹಾದೇವಿ ರಾಣಿಯಾಗಿ ಬದುಕಿದವಳಾಗಿದ್ದಳು ,ಎಲ್ಲವನ್ನೂ ತೊರೆದು ಕಲ್ಯಾಣಕ್ಕೆ ಬಂದು ಸಾಮಾನ್ಯ ಮಹಿಳೆಯಂತೆ ಬದುಕಿದಳು. ಅವಳಿಗೆ ಯಾವುದೇ ಮೋಹಗಳಿರಲಿಲ್ಲ ಮೂಳಿಗೆ ಮಾರಯ್ಯ ದಂಪತಿಗಳು ದಾರಿಯಲ್ಲಿ ಚಲಿಸುವಾಗ ಮಾರಯ್ಯನಿಗೆ ಬಂಗಾರ ಕಂಡಿತು, ಹೆಂಡತಿಗೆ ಮೋಹವಾಗಬಾರದೆಂದು ಕಾಲಿನಿಂದ ಮುಚ್ಚಿದನು. ಅದನರಿತ ಮಹಾದೇವಿ ಗಂಡನಿಗೆ ಹೇಳುತ್ತಾಳೆ, ನಿನಗೆ ಅದು ಬಂಗಾರವೆಂಬ ಭಾವ ಮೋಹವಿರುವುದರಿಂದ ಮುಚ್ಚಿದೆ, ಆದರೆ ನನಗೆ ಅದು ಬಂಗಾರವೆಂಬ ಮೋಹ ಭಾವವಿಲ್ಲ ಎಂದು ತನ್ನ ಗಂಡನಿಗಿಂತ ನಿರ್ಲಿಪ್ತ ಭಾವ ತೂರಿದಳು .
ಶ್ರೀಮಂತರಿಗೆ ಸುಖವಿರುತ್ತದೆ ಎಂಬುದು ಭ್ರಮೆಯಾಗಿದೆ . ಅವರ ಮನಸ್ಸಿನ ವೇದನೆ ತುಮುಲಗಳು ಯಾರಿಗೂ ತಿಳಿದಿರುವುದಿಲ್ಲ .ಬಡವ ಮಾನಸಿಕ ಸುಖದಿಂದ ಬದುಕುತ್ತಾನೆ. ಬ್ರಿಟನ್ನಿನ ರಾಣಿ ಡಯಾನಾಗೆ ಅಪಾರ ಸಂಪತ್ತಿತ್ತು ,ಆದರೆ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು .ಅರಮನೆಯ ಸುಖದ ಸುಪ್ಪತ್ತಿಗೆಯ ರಾಣಿಗಿಂತ ಒಬ್ಬ ಬಡ ರೈತ ಮಹಿಳೆ ಸುಖವಾಗಿ ಇರುತ್ತಾಳೆ. ಅರಮನೆಯ ರಾಣಿಯರಿಗೆ ಸತಿ ಸಹಗಮನದ ಅನಿವಾರ್ಯತೆ ಇರುತ್ತದೆ. ಆದರೆ ಬಡ ರೈತನ ಹೆಂಡತಿಗೆ ಈ ಅನಿವಾರ್ಯತೆ ಇರುವುದಿಲ್ಲ .
ಮನುಷ್ಯ ಜೀವನಕ್ಕೆ ಹೆದರಿ ಬದುಕಬಾರದು ,ಅದು ಶಿವಮಯವಾದ ಬದುಕೆಂದು ಬದುಕಬೇಕು .ಎಲ್ಲವನ್ನು ತೊರೆದು ನಾನು ಜಗವ ಬಿಟ್ಟು ಹೋಗಲೇ ಬೇಕೆಂಬ ಸತ್ಯ ಅರಿತು ಬದುಕುವುದೇ ಜೀವನ . ಗುಬ್ಬಿ ಬೇರೆಯವರ ಮನೆಯಲ್ಲಿ ಗೂಡು ಕಟ್ಟಿ ತನ್ನ ಮನೆ ಎಂಬ ಭ್ರಮೆಯಲ್ಲಿರುವಂತೆ ,ಪರಮಾತ್ಮನ ಜಗದಲ್ಲಿ ಮನೆ ಕಟ್ಟಿದ ವ್ಯಕ್ತಿ ತನ್ನ ಮನೆ ಎಂಬ ಭ್ರಮೆಯಲ್ಲಿರುತ್ತಾನೆ. ಆದ್ದರಿಂದ ಸರ್ವ ಕೃತೃವಾದ ಪರಮಾತ್ಮನನ್ನು ನಂಬಿ ಧ್ಯಾನಿಸಿ ಪೂಜಿಸಿ ಬದುಕಬೇಕು ಎಂದರು .
ಪ್ರಸಾದ ದಾಸೋಹಿಗಳನ್ನು ಗೌರವಿಸಿ ಸತ್ಕರಿಸಲಾಯಿತು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ ಪಾಳಾ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸುರ ಅವರು ಹಾಜರಿದ್ದರು