ಡಾ. ಗಂಗಾಂಬಿಕೆ ಪಾಟೀಲ ಅವರಿಗೆ ಡಾ. ಬಿ.ಡಿ ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ೨೦೨೪
ಡಾ. ಗಂಗಾಂಬಿಕೆ ಪಾಟೀಲ ಅವರಿಗೆ ಡಾ. ಬಿ.ಡಿ ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ೨೦೨೪
ಸಮರೂಪ ನುಡಿ ಡಾ. ಗಂಗಾಂಬಿಕ ಪಾಟೀಲ ಅವರಿಗೆ ಡಾ. ಬಿ.ಡಿ ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ೨೦೨೪ ನೀಡಿ ಗೌರವಿಸಲಾಯಿತು. ಮಹಾದೇವಿಯಕ್ಕಗಳ ಸಮ್ಮೇಳನದ ಸಮಾರೂಪ ನುಡಿಗಳನ್ನಾಡುತ್ತ ಡಾ. ಗಂಗಾಂಬಿಕಾ ಪಾಟೀಲ ಅವರು ಬಿ.ಡಿ. ಜತ್ತಿಯವರು ದೇಶ ಕಂಡ ಅಪರೂಪದ ಆಧ್ಯಾತ್ಮ ರಾಜಕಾರಣಿಗಳಾಗಿದ್ದರು. ಆದ್ಯಾತ್ಮ ಮತ್ತು ರಾಜಕಾರಣ ಸಮ್ಮೀಳಿತವಾಗಿರುವುದು ವಿಸ್ಮಯದ ಸಂಗತಿಯಾಗಿದೆ ಎಂದರು.
ದೇಶದ ತುರ್ತು ಪರಿಸ್ಥತಿಯನ್ನು ತೆರವುಗೊಳಿಸಿದವರು ಡಾ. ಬಿ. ಡಿ. ಜತ್ತಿಯವರು ಸ್ತ್ರೀ ಮುಂದಾಳತ್ವಕ್ಕೆ ಬಿಜ ಬಿತ್ತಿದವರೆ ೧೨ನೇ ಶತಮಾನದ ಅಕ್ಕಮಹದೇವಿಯಾಗಿದ್ದಾಳೆ. ಬಸವ ಮತ್ತು ಅಲ್ಲಮರ ಪರಿಕಲ್ಪನೆಯಲ್ಲಿ ದೇವರು ಬ್ರಹ್ಮಂಡ ವ್ಯಾಪ್ತಿ ಹೊಂದಿದರೆ ಅಕ್ಕನ ಪರಿಕಲ್ಪನೆಯಲ್ಲಿ ದೇವರು ಶರಣ ಸತಿ ಲಿಂಗಪತಿಯಾಗಿದ್ದಾನೆ ಚನ್ನಮಲ್ಲಿಕಾರ್ಜುನ ದೇವರೆ ಅಕ್ಕಮಹಾದೇವಿಯ ಪರಿಕಲ್ಪನೆಯಲ್ಲಿ ಗಂಡನಾಗಿದ್ದಾನೆ.
ಶರಣೆಯರಾದ ನೀಲಾಂಬಿಕೆ ಅಕ್ಕಮಹಾದೇವಿಯವರು ಅತ್ಯಂತ ಏತ್ತರದ ಆಧ್ಯಾತ್ಮಿಕ ನಿಲುವನ್ನು ಹೊಂದಿದ್ದರು. ಇಂದಿನ ಸಂದರ್ಭದಲ್ಲಿ ಸ್ತಿçÃಯರ ಮುಂದಾಳತ್ವದಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತಿದೆ ಎಂದು ಅಧ್ಯಯನದ ಸಮೀಕ್ಷೆಗಳು ಹೇಳುತ್ತವೆ ಎಂದರು
ಹನ್ನೆರಡನೆ ಶತಮಾನದ ಅನುಭವ ಮಂಟಪದಲ್ಲಿ ೭೭೦ ಅಮರಗಣಂಗಳಲ್ಲಿ ೩೫ ಜನ ಮಹಿಳೆಯರಿಗೆ ಅವಕಾಶ ಬಸವಣ್ಣನವರು ನೀಡಿದ್ದರು. ಅಕ್ಕನಾಗಮ್ಮ ಮಹಿಳೆಯಾಗಿದ್ದರು ಖಡ್ಗಹಿಡಿದು ವಚನ ಸಾಹಿತ್ಯದ ರಕ್ಷಣೆ ಮಾಡಿದರು. ಇಂದಿನ ದೇಶದ ಹಣಕಾಸು ಸಚಿವೆ ಹೆಣ್ಣಾಗಿದ್ದು ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಸ್ತ್ರೀ ಶಕ್ತಿ ಸ್ವರೂಪಿಣಿಯಾಗಿದ್ದಾಳೆ, ಕುಟುಂಬ ಸಮಾಜ ದೇಶ ಸಧೃಡ ಸುಭದ್ರವಾಗಿರಬೇಕಾದರೆ ಸ್ತ್ರೀಯರ ಪಾತ್ರ ಮಹತ್ವದ್ದಾಗಿ ಮತ್ತು ಅದು ಪ್ರಗತಿಯೆಡೆಗೆ ಸಾಗುತ್ತದೆ ಎಂದರು. ಭಾರತದ ಹೆಣ್ಣುಮಕ್ಕಳು ಮೂಢನಂಬಿಕೆಗೆ ಗುರಿಯಾಗಬಾರದು ಎಂದು ಕರೆನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಶಾಂತಲಾ ನಿಷ್ಠಿಯವರು ಮಾತನಾಡುತ್ತ ಮಹಾದೇವಿಯಕ್ಕಗಳ ಸಮ್ಮೇಳನ ಭಕ್ತಿ, ಜ್ಙಾನ ದಾಸೋಹಗೈದಿದೆ ಎಂದರು. ಡಾ. ಜಯಶ್ರೀ ದಂಡೆಯವರು ಪ್ರಶಸ್ತಿ ಪತ್ರ ಓದಿದರು.
ವೇದಿಕೆಯ ಮೇಲೆ ಡಾ. ವಿಲಸವತಿ ಖುಬಾ ಅವ್ವನವರು, ಡಾ. ಸೀಮಾ ಪಾಟೀಲ ಡಾ. ಛಾಯಾ ಭರತನೂರ ಡಾ. ಕಲಾವತಿ ದೊರೆ. ಡಾ. ರೇಣುಕಾ ಹಾಗರಗುಂಡಗಿ, ಶ್ರೀಮತಿ ಚಿಟ್ಟಾ ಅವರು ಇದ್ದರು
ಡಾ. ನೀವೆದಿತಾ ಸ್ವಾಮಿ ಶ್ರೀಮತಿ ಜಯಶ್ರೀ ಕೊಣಿನ ಕಾರ್ಯಕ್ರಮ ನಿರೂಪಣೆ ಮಾಡಿದರು