ನಿಷ್ಕಳಂಕ ವ್ಯಕ್ತಿತ್ವ- ಶರಣಬಸಪ್ಪ ಬೆಣ್ಣೂರ.
ನಿಷ್ಕಳಂಕ ವ್ಯಕ್ತಿತ್ವ- ಶರಣಬಸಪ್ಪ ಬೆಣ್ಣೂರ.
ಕಲಬುರಗಿ: ನಗರದ ಎಸ್.ಬಿ. ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅಭಿನಂದನಾ ಹಾಗೂ "ಸಹಕಾರ ಜೋತಿ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶರಣಬಸಪ್ಪ ಎ. ಬೆಣ್ಣೂರ ಅವರನ್ನು ಭವ್ಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಗದ್ಗುರು ಸಾರಂಗದರ ದೇಸಿಕೇಂದ್ರ ಮಹಾಸ್ವಾಮಿಗಳು, “ಶರಣಬಸಪ್ಪ ಬೆಣ್ಣೂರ ಅವರು ನಾನಾ ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿದ್ದು ನಿಷ್ಕಳಂಕ ವ್ಯಕ್ತಿತ್ವಕ್ಕೆ ಮಾದರಿಯಾಗಿದೆ. ಅವರ ತಂದೆ ಅಣ್ಣಾರಾವ್ ಬೆಣ್ಣೂರ ಅವರು ಖಮರುಲ್ಲ ಇಸ್ಲಾಂ, ಎಸ್.ಕೆ. ಕಾಂತಾ, ಮಲ್ಲಿಕಾರ್ಜುನ್ ಖರ್ಗೆ, ಮಾಜಿ ದಿ.ಮುಖ್ಯಮಂತ್ರಿ ಧರ್ಮಸಿಂಗ್ ಮುಂತಾದ ನಾಯಕರೊಂದಿಗೆ ಒಡನಾಟ ಹೊಂದಿದ್ದ ಅವರ ಜೋತೆಗೂಡಿ ಸಮಾಜ ಸೇವೆ ಸಲ್ಲಿಸಿದ್ದಾರೆ” ಎಂದು ಪ್ರಶಂಸಿಸಿದರು.
ಮಾಜಿ ಸಚಿವ ಎಸ್.ಕೆ. ಕಾಂತಾ ಮಾತನಾಡಿ, “ಸಹಕಾರ ಇಲಾಖೆಯಲ್ಲಿ ಶರಣಬಸಪ್ಪ ಬೆಣ್ಣೂರ ರೈತರ ಮತ್ತು ಕಾರ್ಮಿಕರಿಗೆ ಯೋಜನೆಗಳ ಮೂಲಕ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಮಾತನಾಡಿ ಬೆಣ್ಣೂರ ಅವರು “ಕಾಮಧೇನು ಯೋಜನೆ ಮೂಲಕ ಯುವಕರಿಗೆ ಸಬಲೀಕರಣ ಮಾಡಿದರು ” ಎಂದು ಹೇಳಿದರು.
ಸಂಪಾದಕ ಗುಂಡೂರಾವ್ ಕಡಣಿ ಅವರಿಗೆ ಸಮಿತಿ ಅವರು ಗೌರವಿಸಿ ಸನ್ಮಾನಿಸಲಾಯಿತು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜಶೇಖರ್ ಶಿವಾಚಾರ್ಯರು (ಚೌದಾಪುರಿ ಮಠ), ಮಹಾಂತ ಶಿವಾಚಾರ್ಯ (ಕಡಗಂಚಿ), ನೇಲೋಗಿಯ ಶಿವಾನಂದ ಸ್ವಾಮೀಜಿ, ಡಾ. ಅಪ್ಪಾರಾವ್ (ದೇವಿಮುತ್ಯಾ ಶಕ್ತಿ ಪೀಠ ಸರಡಗಿ) ಸೇರಿದಂತೆ ಅನೇಕರ ಸಾನ್ನಿಧ್ಯ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನೀಲಕಂಠರಾವ್ ಮುಲಗೆ, ನ್ಯಾಯವಾದಿ ಎಂ.ಎನ್. ಪಾಟೀಲ, ಪ್ರಧಾನ ಸಂಪಾದಕ ಸುರೇಶ್ ನಂದಗಾಂವ, ಸೂರ್ಯಕಾಂತ ಪಾಟೀಲ ವೇದಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶರಣಬಸಪ್ಪ ಎ. ಬೆಣ್ಣೂರ ಹಾಗೂ ಸಂಗಮ್ಮ ಬೆಣ್ಣೂರ ದಂಪತಿಗಳನ್ನು ಶ್ರೀಗಳು, ಬಂಧು ಬಳಗ ಹಾಗೂ ಗೆಳೆಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಗೂಳಿ ರಾಜೇಶ್ ಚೌವ್ಹಾಣ್, (ಬೆಂಗಳೂರು), ಶರಣಗೌಡ ಪಾಟೀಲ ಪಾಳಾ ಸಿದ್ದಣಗೌಡ ಮಾಲಿ ಪಾಟೀಲ (ಕಡಣಿ), ಬಸವರಾಜ ಟೆಂಗಳಿ, ಶಿವಶರಣಪ್ಪ ಜಮಾದಾರ, ನಾಗರಾಜ ಗಂದಿಗುಡಿ, ಸಿದ್ದರಾಮ ರಾಜಮಾನೆ, ಬವಂತರಾವ ಕೋಳಕೂರ, ಸಂತೋಷ ಗುಡಿಮನಿ, ಕಾಂತ ಪಾಟೀಲ, ಉಮೇಶ್ ಸಿದ್ದಣಗೋಳ, ಶಂಕಣ್ಣ ಯಲ್ದಿ, ಬಾಬುರಾಯ ಶಿವರಾಯಗೋಳ, ನಾಗರಾಜ ಕಲ್ಲಾ ಸೇರಿದಂತೆ ಸಹಕಾರ ಸಂಘಗಳ ಅಧಿಕಾರಿಗಳು, ರೈತರು ಹಾಗೂ ಗಣ್ಯರು ಭಾಗವಹಿಸಿದ್ದರು.