ಕ.ಇ.ಅ.ಐತಿಹಾಸಿಕ ಪರಂಪರೆ ಉಳಿಸಿ

ಕ.ಇ.ಅ.ಐತಿಹಾಸಿಕ ಪರಂಪರೆ ಉಳಿಸಿ

ಕ.ಇ.ಅ.ಐತಿಹಾಸಿಕ ಪರಂಪರೆ ಉಳಿಸಿ  

ಕೆಂಭಾವಿ:

ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ನಮ್ಮ ಸಂಸ್ಕೃತೀಯ ಕುರುಹಗಳು ಅವುಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ್ದದ್ದು ನಮ್ಮೇಲ್ಲರ ಹೊಣೆಗಾರಿಕೆಯಾಗಿದೆ ಎಂದು ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಇತಿಹಾಸಕ್ಕೆ ಆಧಾರಗಳಾಗಿರುವ ಶಾಸನಗಳು, ಶಿಲ್ಪಗಳು , ನಾಣ್ಯಗಳು, ಕೋಟೆ ಕೊತ್ತಲಗಳು, ನಾಡಿನ ಗತವೈಭವ ಸಾರಿ ಸಾರಿ ಹೇಳುತ್ತಿವೆ ಇವುಗಳನ್ನು ರಕ್ಷಿಸಲು ಯುವಜನತೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯರಾದ ನಿಂಗನಗೌಡ.ದೇಸಾಯಿ ಪರಸನಹಳ್ಳಿಯವರು, ಐತಿಹಾಸಿಕ ಸ್ಥಳಗಳ ಹೊಳೆಯುಳಿಕೆಗಳನ್ನು ಹಾಗೂ ದೇವಾಲಯಗಳ ಜೀವನೋದ್ಧಾರಕ್ಕಾಗಿ ಹಾಗೂ ಅವುಗಳ ನಿರ್ವಹಣೆಗೆ ಸರ್ಕಾರಗಳು, ಸಾರ್ವಜನಿಕರು ಕೈಜೋಡಿಸಿದಾಗ ಇತಿಹಾಸ ಉಳಿಸಿ ಬೆಳೆಸಲು ಸಾಧ್ಯ ಎಂದರು. ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಜಿ ಎನ್ ರೂಡಲಬಂಡಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಡಾ ಯಂಕನಗೌಡ ಪಾಟೀಲ, ಶರಣಪ್ಪ ನಡಕೂರ, ಬಸವರಾಜ ಪಾಟೀಲ ಕೂಡ್ಲಿಗಿ, ಜಗದೀಶ್ ಎಂ ಹಂದಿಗನೂರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಕೆಂಭಾವಿ ಹಿರೇಮಠದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ವತಿಯಿಂದ ನಡೆದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯ ಕ್ರಮದಲ್ಲಿ ಬಿತ್ತಿ ಪತ್ರಿಕೆಗಳನ್ನು ಕೆಂಭಾವಿ ಹಿರೇಮಠದ ಪೂಜ್ಯರಾದ ಷ,ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರು ಹಾಗೂ ಸಂಶೋಧಕರಾದ ನಿಂಗನಗೌಡ ದೇಸಾಯಿ ಪರಸನಹಳ್ಳಿಯವರು ಮತ್ತು ಡಾ, ವೆಂಕನಗೌಡ ಪಾಟೀಲ ಶ್ರೀ ಶರಣಪ್ಪ ನಡಕೂರ ಮತ್ತು ನಿವೃತ್ತ ಶಿಕ್ಷಕರಾದ ಶ್ರೀ ಜಿ ಎನ್ ರೋಡಲ ಬಂಡಿ ಇದ್ದರು