ಭಕ್ತರ ಬಾಳಿಗೆ ಬೆಳಕಾಗುವರು ನಿಜವಾದ ಸ್ವಾಮಿಗಳು : ನಿಡುಮಾಮಿಡಿ ಶ್ರೀ
ಭಕ್ತರ ಬಾಳಿಗೆ ಬೆಳಕಾಗುವರು ನಿಜವಾದ ಸ್ವಾಮಿಗಳು : ನಿಡುಮಾಮಿಡಿ ಶ್ರೀ
ಕಲಬುರಗಿ: 'ಮತ್ತೊಬ್ಬರ ಹೆಗಲ ಮೇಲೆ ಮೆರೆಯುವವರು ಸ್ವಾಮಿಗಳಲ್ಲ. ಭಕ್ತರ ಬಾಳಿಗೆ ಬೆಳಕಾಗುವವರು ನಿಜವಾದ ಸ್ವಾಮಿಗಳು' ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.
ಕಲಬುರಗಿ ನಗರದ ಶಹಾಬಜಾರದ ಸುಲಫಲ ಮಠದಲ್ಲಿ ನಡೆದ ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಪಟ್ಟಾಧಿಕಾರದ ದಶಮಾನೋತ್ಸವ, ಜನ್ಮದಿನಾಚರಣೆ, ಮಹಾದ್ವಾರದ ಉದ್ಘಾಟನೆ,ಚನ್ನವೀರ ಶಿವಯೋಗಿಗಳ 70ನೇ ಪುಣ್ಯಸ್ಮರಣೆ,ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಗುರು ಎಂದರೆ ಸಂಸ್ಕೃತದಲ್ಲಿ ಎರಡು ಅರ್ಥಗಳಿವೆ. ಒಂದು ಬೆಳಕು , ಇನ್ನೊಂದು ಭಾರ. ಗುರು ಸಮಾಜಕ್ಕೆ ಬೆಳಕಾಗಬೇಕು. ಭಾರವಾಗಬಾರದು ಎಂದರು.
ಶಿವ ತತ್ವ ಮತ್ತು ಶರಣ ತತ್ವ ಸಮಾಜದ ಎರಡು ಕಣ್ಣುಗಳಿದ್ದಂತೆ .ಗುರು ವಿರಕ್ತರು ಇಬ್ಬರು ಒಂದಾಗಿ ನಡೆಯಬೇಕು ಎಂದರು.
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಪುರ್ ಮಾತನಾಡಿದರು. ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು,
ಶರಣಬಸವೇಶ್ವರ ಸಂಸ್ಥಾನದ ಮಹಾತಾಯಿ ದಾಕ್ಷಾಯಿಣಿ ಎಸ್ ಅಪ್ಪ ಮಾತನಾಡಿದರು. ನಂತರ ನಾಲವಾರ ಕೋರಿ ಸಿದ್ದೇಶ್ವರ ಸಂಸ್ಥಾನ ಮಠದ ತೋಟೇಂದ್ರ ಸ್ವಾಮೀಜಿ, ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರಿಗೆ 'ಕಲ್ಯಾಣ ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣಪ್ಪ ಕಮಕನೂರ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಮರನಾಥ ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವೀರಶೈವ ಮಹಾಸಭಾ ಜಿಲ್ಲಾ ಸಮಿತಿ ಅಧ್ಯಕ್ಷ ಶರಣಕುಮಾರ ಮೋದಿ,ಸ.ನೌ.ಸ.ಅ. ರಾಜು ಲೇಂಗಟಿ, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ, ಹಿರಿಯ ಸಾಹಿತಿ ಶಿವರಾಜ್ ಪಾಟೀಲ್ ಕುಲಾಲಿ, ಕಲ್ಯಾಣ ಪತ್ರಿಕೆ ಸಂಪಾದಕ ಶರಣಗೌಡ ಪಾಟೀಲ ಪಾಳಾ , ನಾಗಲಿಂಗಯ್ಯ ಮಠಪತಿ ಸೇರಿ ಹಲವರು ಭಾಗವಹಿಸಿದರು,
ಶಿವರುದ್ರಯ್ಯ ಗೌಡಗಾಂವ, ಅಣ್ಣಾರಾಯ ಶೆಳ್ಳಿಗಿ ಮತ್ತಿಮುಡು ತಂಡದವರಿಂದ ಸಂಗೀತ ಸೇವೆ ಸಲ್ಲಿಸಿದರು .
ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ ನಿರೂಪಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ • ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸ್ವಾಗತಿಸಿದರು.
.
ನಾಡಿನ ಮಠಮಾನ್ಯಗಳು ಅತ್ಯುತ್ತಮವಾಗಿ ಸಮಾಜ ತಿದ್ದುವ ಕೆಲಸ ಮಾಡುತ್ತಿವೆ .ಸರ್ಕಾರದ ಮಾಡುವ ಕೆಲಸ ಮಠಗಳು ಮಾಡುತ್ತಿವೆ ಎಂದು ಸುಲಫಲ್ಲ ಶ್ರೀಗಳಿಗೆ ಜನ್ಮದಿನ ಶುಭ ಕೋರಿದೆ,
ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಪುರ್
ಕಲ್ಯಾಣದ ಅನುಭವ ಮಂಟಪದ ಮಾದರಿಯಲ್ಲಿ ಮಠ ನಿರ್ಮಾಣ ಮಾಡಿ ಬಸವ ತತ್ವದ ಪ್ರಚಾರವನ್ನು ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾಡುತ್ತಿದ್ದಾರೆ.
ನಾಡೋಜ ಬಸವಲಿಂಗ ಪಟ್ಟದೇವರು, ಭಾಲ್ಕಿ ಹಿರೇಮಠದ