ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಡಾ. ಖರ್ಗೆಗೆ ಅವರಿಗೆ ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ) ವತಿಯಿಂದ ಮನವಿ

ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು  ಡಾ. ಖರ್ಗೆಗೆ ಅವರಿಗೆ ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ) ವತಿಯಿಂದ ಮನವಿ

ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಡಾ. ಖರ್ಗೆಗೆ ಅವರಿಗೆ ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ) ವತಿಯಿಂದ ಮನವಿ

ಕಲಬುರಗಿ: ದಿನಾಂಕ ೦೧/೦೮/೨೦೨೪ ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ೭ ಜನ ನ್ಯಾಯಧೀಶರ ನ್ಯಾಯಮೂರ್ತಿಗಳ ಫೀಠವು ಒಳಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ದಿನಾಂಕ: ೧೮/೧೦/೨೦೨೪ ರಂದು ನಡೆಯುವ ಸಚಿವ ಸಂಪುಟದಲ್ಲಿ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ಮಾದಿಗ ಸಮಾಜ (ರಿ) ವತಿಯಿಂದ ಎ.ಐ.ಸಿ.ಸಿ. ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋದ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. 

ದಿನಾಂಕ:೦೧/೦೮/೨೦೨೪ ರಂದು ಮೂಲಕ ತಮ್ಮಲ್ಲ ಭಾರತದ ಸರ್ವೋಚ್ಛ ನ್ಯಾಯಾಲಯದ ೭ ಜನ ನ್ಯಾಯಧೀಶರ ನ್ಯಾಯಮೂರ್ತಿಗಳ ಫೀಠವು ಒಳಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಲು ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಜನಾಂಗಕ್ಕೆ ಆಯಾ ರಾಜ್ಯಗಳಿಗೆ ಒಳ ಮೀಸಲಾತಿ ವರ್ಗಿಕರಣವನ್ನು ಅನುಷ್ಠಾನಗೊಳಿಸಲು ಸುಪ್ರೀಂ ಕೋರ್ಟ ನೀಡಿರುವ ಆದೇಶದಂತೆ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಅತೀ ಶೀಘ್ರವೇ ಒಳ ಮೀಸಲಾತಿ ವರ್ಗೀಕರಣವನ್ನು ಸುಪ್ರಿಂ ಕೋರ್ಟ ಭಾರತದ ಸಂವಿಧಾನದ ಸಂವಿಧಾನಿಕವಾಗಿ ಪೀಠವು ಪರಿಶಿಷ್ಟ ಜಾತಿ ಸಮುದಾಯದವರಿಗೆ ಸಾಮಾಜೀಕವಾಗಿ, ಆರ್ಥಿಕವಾಗಿ ಅತಿ ಹಿಂದುಳಿದ ಉಪಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗೆ ನೀಡಿರುತ್ತದೆ. ಅದರಂತೆ ಪರಿಶಿಷ್ಟ ಜಾತಿಗಳು ಸಾಮಾಜೀಕವಾಗಿ, ಆರ್ಥಿಕವಾಗಿ, ಏಕರೂಪಿಯಾಗಿ ಎಂದು ಸುಪ್ರಿಂ ಕೋರ್ಟಿನ ೭ ಜನ ಮುಖ್ಯ ನ್ಯಾಯಮೂರ್ತಿಗಳ ಸಂವಿಧಾನಿಕ ಪಿಠವು ಅಭಿಪ್ರಾಯಪಟ್ಟಿದೆ. ಸುಮಾರು ೪೦ ವರ್ಷಗಳ ಬೇಡಿಕೆಯಾದಂತಹ ನ್ಯಾಯಮೂರ್ತಿ ಏ.ಜೆ. ಸದಾಶಿವ ಆಯೋಗದ ಒಳ ಮೀಸಲಾತಿ ವರ್ಗೀಕರಣಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳು ಪಕ್ಷದ ಹೈಕಮಾಂಡ ನಾಯಕರ ಜೋತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿರುತ್ತಾರೆ.

ಆದಕಾರಣ ತಾವುಗಳು ದಯಪರವಾಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ಶೀಘ್ರವೆ ಕರೆಯಲು ಮಾನ್ಯ ಮುಖ್ಯಮಂತ್ರಿಗಳಗೆ ಸೂಕ್ತ ನಿರ್ದೇಶನ ತೆಗೆದುಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮತ್ತು ಒಳ ಮೀಸಲಾತಿ ವರ್ಗಿಕರಣ ಅನುಷ್ಠಾನಗೊಳಿಸಬೇಕು ಭಾರತ ದೇಶದ ಸರ್ವೋಚ್ಛ ನ್ಯಾಯಾಲಯದ ಐತಿಹಾಸಿಕ ತೀರ್ಪು ಆದೇಶವನ್ನು ಪಾಲನೆ ಮಾಡಲು ಆದೇಶ ಮಾಡಬೇಕು ಮತ್ತು ಮರುಪರಿಶೀಲನಾ ಅರ್ಜಿಗಳನ್ನು ಪರಿಶಿಲಿಸಲಾಗಿದೆ. ಆದರೆ ಅರ್ಜಿಗಳಲ್ಲಿ ಇಂದಿನ ತೀರ್ಪಿನಲ್ಲಿನ ದೋಷಗಳಿಗೆ ಎಂಬುವುದು ಕಂಡು ಬಂದಿಲ್ಲ. ಸುಪ್ರಿಂ ಕೋರ್ಟ ನಿಯಮವಳಿಗಳು ೨೦೧೩ ರ ಆದೇಶ 47ರ ನಿಯಮ ೧ ರ ಅಡಿಯಲ್ಲಿ ಪರಿಶೀಲನೆಗಾಗಿ ಯಾವುದೇ ಅರ್ಜಿದಾರ ಅನುಮತಿಸಲಾಗಿಲ್ಲ. ಎಲ್ಲಾ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ ಹೇಳಿದೆ. ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ನೇಮಕಾತಿ ಮತ್ತು ಮುಂಬಡ್ತಿಗಳನ್ನು ತಡೆಹಿಡಿಯಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ಚಂದ್ರಕಾAತ ಕೆ. ನಾಟಕಾರ, ಜಿಲ್ಲಾಧ್ಯಕ್ಷ ಸಿದ್ಧಲಿಂಗ ಸಿ. ಕಟ್ಟಿಮನಿ, ಮಾದಿಗ ಸಮಾಜ ಹಿರಿಯ ಮುಖಂಡ ಮಲ್ಲಪ್ಪ ಚಿಗನೂರ, ಜಾನಪ್ಪಾ ಶಿವನೂರ, ಅಶೋಕ ಜಗದಾಳೆ, ಸುದರ್ಶನ ನಂಬಿ, ಅರ್ಜುನ ಮೇತ್ರ ಸೇರಿದಂತೆ ಇತರರು ಇದ್ದರು.