ಔರಾದನಲ್ಲಿ ಗಮನ‌‌‌‌ ಸೆಳೆದ ಆರ್‌ಎಸ್‌ಎಸ್‌ ಪಥಸಂಚಲನ

ಔರಾದನಲ್ಲಿ ಗಮನ‌‌‌‌ ಸೆಳೆದ ಆರ್‌ಎಸ್‌ಎಸ್‌ ಪಥಸಂಚಲನ

ಔರಾದನಲ್ಲಿ ಗಮನ‌‌‌‌ ಸೆಳೆದ ಆರ್‌ಎಸ್‌ಎಸ್‌ ಪಥಸಂಚಲನ

ಸ್ವಯಂ ಸೇವಕರ ಹುಮ್ಮಸ್ಸು ಹೆಚ್ಚಿಸಿದ ಶಾಸಕ ಪ್ರಭು ಚವ್ಹಾಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಔರಾದ(ಬಿ) ಪಟ್ಟಣದಲ್ಲಿ ಮಂಗಳವಾರ ಆರ್‌ಎಸ್‌ಎಸ್‌ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು.

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸಂಘದ ಧಿರಿಸಿನಲ್ಲಿ ಕೈಯಲ್ಲಿ ಲಾಠಿ ಹಿಡಿದು ಪಥಸಂಚಲನದ ಕೊನೆಯವರೆಗೂ ಭಾಗವಹಿಸಿ ಸ್ವಯಂ ಸೇವಕರ ಹುಮ್ಮಸ್ಸು ಹೆಚ್ಚಿಸಿದರು. ಪ್ರಮುಖರಾದ ಕಿರಣ ಉಪ್ಪೆ, ಹಣಮಂತರಾವ ಪಾಟೀಲ, ನಾಗೇಶ‌‌ ಚನ್ನಾರೆಡ್ಡಿ, ವಿಜಯಮಹಾಂತೇಶ ಸೇರಿದಂತೆ ಅನೇಕ ಗಣ್ಯರು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು. 

ಪಟ್ಟಣದ ಬಸವನಗಲ್ಲಿಯ ಅಗ್ನಿ ಬಸವಣ್ಣ ದೇವಸ್ಥಾನದ ಹತ್ತಿರದಿಂದ ಆರಂಭಗೊಂಡ ಪಥ ಸಂಚಲನವು ಪಟ್ಟಣದ ಗಾಂಧಿ ಚೌಕ್, ಶೆಟಕಾರ ಗಲ್ಲಿ, ಪಾಂಡುರಂಗ ಮಂದಿರ, ದೇಶಮುಖ ಗಲ್ಲಿ, ಹನುಮಾನ ಮಂದಿರ, ಅಮರೇಶ್ವರ ಮಂದಿರ, ಬಸವೇಶ್ವರ ವೃತ್ತ, ಭವಾನಿ ಮಂದಿರ, ಅಮರೇಶ್ವರ ಕಾಲೋನಿ, ಎಪಿಎಂಸಿ ವೃತ್ತ, ಚನ್ನಬಸವೇಶ್ವರ ವೃತ್ತದ ಮಾರ್ಗವಾಗಿ ಅಮರೇಶ್ವರ ಕಾಲೇಜು ಆವರಣದಲ್ಲಿ ಸಂಪನ್ನಗೊಂಡಿತು.

ಪಥ ಸಂಚಲನದಲ್ಲಿ ಗಣವೇಷಧಾರಿ ಸ್ವಯಂ ಸೇವಕರು ವಾದ್ಯಕ್ಕೆ ತಕ್ಕಂತೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಾಲು ಸಾಲಾಗಿ ಅಚ್ಚುಕಟ್ಟಾಗಿ ನಡೆದ ಪಥ ಸಂಚಲನವನ್ನು ವೀಕ್ಷಿಸಿದರು. ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಿ ಪಥ ಸಂಚಲನವನ್ನು ಜನರು ಸ್ವಾಗತಿಸಿದರು. ಗಣವೇಷಧಾರಿಗಳ ಮೇಲೆ ಪುಷ್ಪಗಳ ಮಳೆಗರೆದು, ಜಯಘೋಷ ಮೊಳಗಿಸಿದರು. ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ವಿಶೇಷ ಉಪನ್ಯಾಸ ನೀಡಿದ ಸಂಘದ ಪ್ರಮುಖರಾದ ನಾಗೇಶ ರೆಡ್ಡಿ ಮಾತನಾಡಿ, ನೂರರ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಸಮಾಜವನ್ನು ಜಾಗೃತಗೊಳಿಸುವುದು, ಯುವ ಜನತೆಯಲ್ಲಿ ದೇಶಭಕ್ತಿ ಮೂಡಿಸುವುದು ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವುದರ ಜೊತೆಗೆ ಭವ್ಯ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೋಟ್ಯಂತರ ಯುವಕರಿಗೆ, ಶಿಸ್ತು, ದೇಶಭಕ್ತಿ, ಸೇವಾ ತತ್ಪರತೆಯ ಪಾಠ ಹೇಳಿಕೊಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರರ ಸಂಭ್ರಮ. ಈ ನೂರು ವರ್ಷಗಳ ಸೇವೆ ಮತ್ತು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.

ದೇಶ ಸೇವೆಯ ಮೂಲಕ ಮಾನವ ಸೇವೆಯ ಸಾರ್ಥಕ ಹಾದಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಔರಾದ ಪಟ್ಟಣದಲ್ಲಿಂದು ವಿಜಯದಶಮಿ ಉತ್ಸವ ಪ್ರಯುಕ್ತ ಹಮ್ಮಿಕೊಂಡ ಪಥಸಂಚಲನದಲ್ಲಿ ಭಾಗವಹಿಸುವ ಸೌಭಾಗ್ಯ ನನ್ನದಾಗಿತ್ತು.

ಪ್ರಭು ಬಿ.ಚವ್ಹಾಣ, ಶಾಸಕರು ಔರಾದ(ಬಿ)