ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ ಕುರಿತು ವಿಚಾರ ಸಂಕಿರಣ ಜರುಗಿತು

ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ ಕುರಿತು ವಿಚಾರ ಸಂಕಿರಣ ಜರುಗಿತು
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಕಲಬುರಗಿಯ ಸಹಯೋಗದಲ್ಲಿ ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ ಎಂಬ ವಿಷಯದ ಕುರಿತಂತೆ ಮಾರ್ಚ್ 20, 2025 ರಂದು ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟಕರಾಗಿ ಮತ್ತು ಪ್ರಧಾನ ಭಾಷಣಕಾರರಾಗಿ ಖ್ಯಾತ ಇತಿಹಾಸಕಾರ ಪ್ರೊ. ಎಸ್. ಚಂದ್ರಶೇಖರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಅಪ್ಪರಾವ್ ಅಕ್ಕೋಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪ್ರೊ. ವಿಕ್ರಮ ವಿಸಾಜಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊಂಡು, ಹೈದರಾಬಾದ್ ಕರ್ನಾಟಕವು ಬೌದ್ಧಿಕತೆಗೆ ಪೋಷಕವಾಹಿಯಾಗಿದ್ದರೂ, ಸಾಂಸ್ಕೃತಿಕ ಪರಂಪರೆಯು ಇಲ್ಲಿಯ ಜನಜೀವನಕ್ಕೆ ಹೆಚ್ಚು ಮಹತ್ವ ನೀಡಿದ ಕುರಿತು ನುಡಿಗಳನ್ನಾಡಿದರು.
ಪ್ರಧಾನ ಭಾಷಣಕಾರ ಪ್ರೊ. ಎಸ್. ಚಂದ್ರಶೇಖರ, ಚರಿತ್ರೆಕಾರನಾದವನು ಚರಿತ್ರೆಯನ್ನು ದಾಖಲಿಸುವ ಸಂದರ್ಭದಲ್ಲಿ ನಿರ್ಣಾಯಕನಂತೆ ವರ್ತಿಸಬಾರದು ಎಂಬ ವಾಕ್ಯದಿಂದ ತಮ್ಮ ಭಾಷಣ ಆರಂಭಿಸಿ, ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆಗಳ ಕುರಿತು ಪ್ರಬಂಧವನ್ನು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶಿವಗಂಗಾ ರುಮ್ಮಾ, ಕನ್ನಡ ವಿಭಾಗದ ಮುಖ್ಯಸ್ಥರು ವಹಿಸಿದ್ದರು. ಪ್ರೊ. ಆರ್.ಆರ್. ಬಿರಾದಾರ, ಮಾನ್ಯ ಕುಲಸಚಿವರು ಮತ್ತು ಡಾ. ವೀರಶೆಟ್ಟಿ, ಹಿರಿಯ ಸಹಾಯಕ ನಿರ್ದೇಶಕರು ಸೇರಿದಂತೆ ಕನ್ನಡ ವಿಭಾಗದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.