ಕಮಲನಗರ ತಾಲೂಕಿನ ಮದನೂರ ಶಾಲೆಯಲ್ಲಿ ಗ್ರಾಮಸಭೆ
ಕಮಲನಗರ ತಾಲೂಕಿನ ಮದನೂರ ಶಾಲೆಯಲ್ಲಿ ಗ್ರಾಮಸಭೆ
ಕಮಲನಗರ:ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸುವುದು.ಶಾಲಾ ಶಿಕ್ಷಣದಲ್ಲಿ ಸಾಮಾಜಿಕ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು.
ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಮಾನತೆ ಮತ್ತು ಸೇರ್ಪಡೆಯನ್ನು ಖಚಿತಪಡಿಸುವುದು.ಶಿಕ್ಷಣದಲ್ಲಿ ಔದ್ಯೋಗೀಕರಣವನ್ನು ಉತ್ತೇಜಿಸುವುದು.
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯಿದೆ, 2009ರ ಅನುಷ್ಟಾನದಲ್ಲಿ ರಾಜ್ಯಗಳನ್ನು ಬೆಂಬಲಿಸುವುದು.ಶಿಕ್ಷಕರ ತರಬೇತಿಗಾಗಿ ನೋಡಲ್ ಏಜನ್ಸಿಯಾಗಿ ಎಸ್.ಸಿ.ಇ.ಆರ್.ಟಿ.ಗಳು/ರಾಜ್ಯ ಶಿಕ್ಷಣ ಸಂಸ್ಥೆಗಳು ಮತ್ತು ಡಯಟ್ ಅನ್ನು ಬಲಪಡಿಸುವುದು ಮತ್ತು ಉನ್ನತೀಕರಿಸುವುದು. ಸಮುದಾಯ ಸಹಭಾಗಿತ್ವ -ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಶಾಲೆಗಳಿಗೆ ತರುವುದು. ಇತರೆ ಇಲಾಖೆಗಳೊಂದಿಗೆ ಸಮನ್ವಯತೆ.ಈ ಎಲ್ಲಾ ಕೆಲಸ ಪ್ರಗತಿಯಲ್ಲಿದೆ ಎಂದು ತಾಲೂಕಾ ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಮಾತನಾಡಿದರು.
ಕಮಲನಗರ ತಾಲೂಕಿನ ಮದನೂರ ಗ್ರಾಮದ ಸರಕಾರಿ ಮಾದರಿ ಶಾಲೆ ಮತ್ತು ಇನ್ನೋಂದು ಸರಕಾರಿ ಫ್ರೌಢ ಶಾಲೆ ಮದನೂರ ಶಾಲೆಗಳಲ್ಲಿ ಶಾಲಾ ಸಭೆಯನ್ನು ನಡೆಸಲಾಯಿತು.
ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಜಿಲ್ಲಾ ಪಂಚಾಯತಿ ಬೀದರ್ ಗ್ರಾಮ ಪಂಚಾಯತ್ ಮದನೂರ ಗ್ರಾಮದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾಕಾರ್ಯಕ್ರಮವ್ಯವಸ್ಥಾಪಕರಾದ ಶ್ರೀ ದೇವದಾಸ ಮುಸ್ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದರು.
ಶ್ರೀ ಹಣಮಂತ ರಾಯ ಕೌಟಗೆ ಸಹಾಯಕ ನಿರ್ದೆಶಕರು, ಗ್ರಾಮ ಪಂಚಾಯತ್ ಅಧ್ಯಕ್ಷ ರು ಹಾಗೂಈ ಸಭೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ರೀ ಪ್ರಕಾಶ ಬೇಂಬಳಗೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಉಮಾಕಾಂತ ಮೆತ್ರೆ ಸದಸ್ಯರು 18 ಇನ್ನೋರ್ವ ಸರಕಾರಿ ಫ್ರೌಢ ಶಾಲೆಯ ಮುಖ್ಯ ಗುರು ಗಳಾದ ಶ್ರೀಮತಿ ಮಮತಾಜ ಬಾಗವಾನ ಎಸ್ ಡಿ ಎಮ್ ಸಿ ಅದ್ಯಕ್ಷ ರಾದ ಶ್ರೀ ಅಪ್ಪಾರಾವ ಗುಂಡಪ್ಪಾ ಬಳಕೆ ಉಪಸ್ಥಿತಿಯಲ್ಲಿದ್ದರು. ಮತ್ತು ಶಾಲೆಯ ಸಹಶಿಕ್ಷಕರು ಶ್ರೀ ಪ್ರಶಾಂತ ಮಠಪತಿ.ಶ್ರೀಮತಿ ಗೀತಾ ಸಜ್ಜನಶೆಟ್ಟಿ ಫ್ರೌಢ ಶಾಲೆಯ ಶಿಕ್ಷಕರು ಶ್ರೀಮತಿ ಕೌಶಲ್ಯ ಎಸ್ ಶ್ರೀ ಸೂರ್ಯಕಾಂತ ಬಿರಾದರ ಶ್ರೀಮತಿ ಪದ್ಮಾವತಿ ಬೌರಾ ಶ್ರೀಮತಿ ಇಂದು ಮತಿ ಕಾಳೆ ಸುನೀತಾ ಬಾಬುರಾವ ಪೋಷಕರು.ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್ ಶೇಷರಾವ್ ಮೇತ್ರೆ. ಈ ಶಾಲಾ ಸಭೆಗೆ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.
ಸಮಗ್ರ ಶಿಕ್ಷಣ ಕರ್ನಾಟಕ ಶಾಲೆಯಲ್ಲಿ ಶಿಕ್ಷಣ ವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು.ಈ ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಸವಿಸ್ತಾರವಾಗಿ ಹೇಳಿದರು.ಮತ್ತು ಮೇಳು ಕೀಳು ಎಂಬ ಭಾವನೆಗಳನ್ನು ಇರಬಾರದು. ಎಲ್ಲರು ಸಮಾನರು ಸಹ ಬಾಳ್ವೆ ಯಿಂದ ಶಿಕ್ಷಣ ವನ್ನು ಪಡೆಯಿರಿ. ಮತ್ತು. ಮಧ್ಯಾಹ್ನದ ಬಿಸಿ ಊಟದ ಬಗ್ಗೆ ಸಹ ಮಾತನಾಡಿದರು.ಅಡುಗೆ ಸರಿಯಾಗಿ ಮಾಡಿ ,0.03 ಜನ ಮಾಡುವ ಅಡುಗೆ 71 ಜನ ಊಟ ಮಾಡುತ್ತಾರೆ. ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ವನ್ನು ನೀಡಿರುತ್ತಾರೆ. ಸಹ ಪಠ್ಯ ಚಟುವಟಿಗೆಗಳನ್ನು ಕೈಗೊಂಡು ನೀಡಿರುತ್ತಾರೆ. ಬಹುಮಾನವನ್ನು ಸಹ ನೀಡಲಾಯಿತು.ಶಾಲೆಯ ವಾತಾವರಣ. ಶಾಲಾ ಆವರಣದಲ್ಲಿ ಸುಮಾರು 150 ಸಸಿಗಳನ್ನು ನೆಟ್ಟಿರುತ್ತಾರೆ. ತಮ್ಮ ಎಲ್ಲಾ ಶಿಕ್ಷಕರು ಎಲ್ಲಾ ದಾಖಲಾತಿಗಳು ಸಮರ್ಪಕವಾಗಿ ನಿರ್ವಹಿಸಿರುತ್ತಾರೆ.
ಶಾಲೆಗೆ ಮೂಲಭೂತ ಸೌಕರ್ಯಬೇಕು. ಕಲರಿಂಗ . ಶಾಚಾಲಯ ಬಗ್ಗೆ ಎಂದು ಹೇಳುತ್ತಾ ಶ್ರೀ ಆನಂದ ಎಸ್ ಎಚ್ ತಮ್ಮ ಮಾತುಗಳಿಗೆ ವಿರಾಮ ಹಾಕಿದರು.
ಸ್ವಾಗತ ಶ್ರೀಮತಿ ಸುನೀತಾ ಬಾಬುರಾವ ಮಾಡಿದರು. ಇಂದುಮತಿ ಕಾಳೆ ವಂದನಾರ್ಪಣೆ ಮಾಡಿದರೆ, ಸೂರ್ಯಕಾಂತ್ ಬಿರಾದರ್ ನಿರೂಪಣೆ ಮಾಡಿದರು.ಈ ಶಾಲಾ ಸಭೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು.