ಕಲಬುರಗಿ ಜಿಲ್ಲಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಕಾಳಗಿಯಲ್ಲಿ ಅಕ್ರಮ ಗಾಂಜಾ ವಶ

ಕಲಬುರಗಿ ಜಿಲ್ಲಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಕಾಳಗಿಯಲ್ಲಿ ಅಕ್ರಮ ಗಾಂಜಾ ವಶ

ಕಲಬುರಗಿ ಜಿಲ್ಲಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ ಕಾಳಗಿಯಲ್ಲಿ ಅಕ್ರಮ ಗಾಂಜಾ ವಶ

ಕಲಬುರಗಿ: ಜಿಲ್ಲೆಯ ಪೊಲೀಸರು ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ, ಮಾದಕ ವಸ್ತುಗಳ ಮಾರಾಟ ಮತ್ತು ಕಳ್ಳ ಸಾಗಾಣಿಕೆ ಪತ್ತೆ ಹಚ್ಚಿದ್ದು, ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೆಘಣ್ಣನವರ , ಶಂಕರಗೌಡ ಪಾಟೀಲ್ ಪೊಲೀಸ್ ಉಪಾಧೀಕ್ಷಕರು ಶಹಾಬಾದ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಜಗದೇವಪ್ಪಾ ಪಾಳಾ ಸಿ.ಪಿ.ಐ. ಕಾಳಗಿ, ಚಂದ್ರಶೇಖರ ತಿಗಡಿ ಸಿಪಿಐ ಚಿತ್ತಾಪೂರ ವೃತ್ತ, ತಿಮ್ಮಯ್ಯ ಪಿ.ಎಸ್.ಐ (ಕಾ&ಸು) ಕಾಳಗಿ ಪೊಲೀಸ್ ಠಾಣೆ ಮತ್ತು ಕಾಳಗಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹುಸೇನ ಹೆಚ್.ಸಿ 199. ನಸಿರಮೀಯಾ ಹೆಚ್.ಸಿ 116, ಸಂಗಮೇಶ ಸಿಪಿಸಿ-307 ಅಂಬರೀಶ ಸಿಪಿಸಿ-324 ಬಸಪ್ಪ ಸಿಪಿಸಿ-347, ಶಿವರಾಜ ಕೆ.ಜಿ ಸಿಪಿಸಿ-459 ಶ್ರೀಶೈಲ್ 4-336 ಮಾರುತಿ ໖໖-302 -599 -299 ರವರನ್ನೊಳಗೊಂಡ ಒಂದು ತಂಡ ರಚಿಸಲಾಗಿತ್ತು

ಈ ತಂಡವು ದಿನಾಂಕ 13/02/2025 ರಂದು ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಗಿ ಕೂಡ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಲಕ್ಷ್ಮಣ ನಾಯಕ ತಾಂಡಾದ ಹತ್ತಿರ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ (ಕಾ&ಸು) ಕಾಳಗಿ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಯವರು ಸ್ಥಳಕ್ಕೆ ಹೋಗಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರುವ ವ್ಯಕ್ತಿಗಳಾದ 01) ಚಂದ್ರಕಾಂತ @ ಪಪ್ಪು ತಂದೆ ಹರಿಶ್ಚಂದ್ರ ಚವ್ಹಾಣ 40 ವರ್ಷ ಸಾಃ ಲಕ್ಷ್ಮಣ ನಾಯಕ ತಾಂಡಾ 02) ಮಲ್ಲಯ್ಯ ತಂದೆ ಮಹಾಬಳೇಶ್ವರ ಪ್ಯಾಟೀಮನಿ ಸಾ:ಕೋಡ್ಲಿ ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು, ಪರಿಶೀಲಿಸಿ ಇವರಿಂದ 18 ಪ್ಯಾಕೇಟಗಳಲ್ಲಿ ಇದ್ದ ಒಟ್ಟು 40 ಕೆ.ಜಿ ಗಾಂಜಾ ಅ.ಕಿ 40,00,000/- ರೂ ಮತ್ತು ಗಾಂಜಾ ಸಾಗಾಟ ಮಾಡುವ 5,00,000/-  

45.50,000/- 

ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ನಿಮಿತ್ಯ ಕಾಳಗಿ ಪೊಲೀಸ್ ಠಾಣೆ ಗುನ್ನೆ ನಂ.10/2025 ಕಲಂ.20(ಬಿ) (II)ಸಿ ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ಈ ಪ್ರಕರಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧನಕ್ಕೊಳಪಡಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡದ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.