ಒಳಮೀಸಲಾತಿಗಾಗಿ ಮಾದಿಗ ಒಕ್ಕೂಟ ಪ್ರತಿಭಟನೆ ನಡೆಸಿ ಮನವಿ

ಒಳಮೀಸಲಾತಿಗಾಗಿ ಮಾದಿಗ ಒಕ್ಕೂಟ ಪ್ರತಿಭಟನೆ ನಡೆಸಿ ಮನವಿ

ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಒಳಮೀಸಲಾತಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ

ಕಲಬುರಗಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಡಾ.ಬಾಬುಜಗಜಿವನರಾಮ್ ರಾಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಬೃಹತ್ ಪ್ರತಿಭಟನೆ ಮೇರವಣ ಗೆ ಮುಖಾಂತರ ಮಾದಿಗ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿದರು. 

ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೆ, ದಿನಾಂಕ: 01-08-2024 ರಂದು ಭಾರತೆ ದೇಶನ ಸರ್ವೋಚ್ಚ ನ್ಯಾಯಾಲಯವು 7 ಜನ ನ್ಯಾಯಮೂರ್ತಿಗಳ ಪೀಠವು ಆಯಾ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಅಂಗೀಕರಿಸಲು ತೀರ್ಪನ್ನು ನೀಡಿದ್ದು, ಈಗಾಗಲೇ ಹರ್ಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ಸ್ವಾಗತಿಸಿ, ತಕ್ಷಣ ಸಚಿವ ಸಂಪುಟ ಕರೆದು, ಸಚಿವ ಸಂಪುಟದಲ್ಲಿ ಚರ್ಚಿಸಿ ತಕ್ಷಣ ಒಳಮೀಸಲಾತಿ ಜಾರಿಮಾಡುತ್ತೇವೆಂದು ಹೇಳಿಕೆ ನೀಡಿದ್ದನ್ನು ಕರ್ನಾಟಕ ರಾಜ್ಯದ ಮಾದಿಗ ಸಂಘಟನೆಗಳು ಸ್ವಾಗತಿಸುತ್ತಾ, ಅದರಂತೆ ನಮ್ಮ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯಿಂದ ಪ್ರಾರಂಭವಾದ ಒಳಮೀಸಲಾತಿ ಹೋರಾಟವನ್ನು ಕಲಬುರಗಿ ಜಿಲ್ಲೆಯ ಸಚಿವ ಸಂಪುಟದಲ್ಲಿಯೇ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಕಲಬುರಗಿ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿ ಹೋರಾಟವನ್ನು ಮುಕ್ತಾಯಗೊಳಿಸುವಿರೆಂದು ಭಾವಿಸಿರುತ್ತೇವೆ.

ಈ ಹಿಂದೆ ಒಳಮೀಸಲಾತಿ ವರ್ಗೀಕರಣಕ್ಕೆ ಹೋರಾಟ ಮಾಡುವ ಸಂದರ್ಭದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ರವರು ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳ ಆರ್ಥಿಕ, ಶೈಕ್ಷಣ ಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳವಣ ಗೆಗಳ ಕುರಿತು ಸಮೀಕ್ಷೆ ನಡೆಸುವುದಕ್ಕೆ ಆಯೋಗ ರಚಿಸಲಾಯಿತು. ಆಗ ಶ್ರೀ.ಎನ್.ವೈ. ಹನುಮಂತಪ್ಪನವರಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಆದರೆ, ಅವರು ಕೆಲವು ದಿನಗಳ ನಂತರ ರಾಜೀನಾಮೆ ನೀಡಿದ ಪ್ರಯುಕ್ತ,

ಶ್ರೀ ಹೆಚ್.ಜಿ. ಬಾಲಕೃಷ್ಣ ರವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಬೇಕೆಂದಾಗ, ಅವರು ಕೆಲವು ದಿನದಲ್ಲಿ ನಿಧನ ಹೊಂದಿದ್ದರು. ಅದರಿಂದಾಗಿ ಸಮೀಕ್ಷೆ ನೆನೆಗುದಿಗೆ ಬಿದ್ದಿತು. ನಂತರ ಜೆ.ಡಿ.ಎಸ್. ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದಾಗ, ಆಗೀನ ಮುಖ್ಯಮಂತ್ರಿ, ಶ್ರೀ ಎನ್.ಧರ್ಮಸಿಂಗ್ ರವರು ನ್ಯಾಯಮೂರ್ತಿ, ಎ.ಜೆ.ಸದಾಶಿವ ರವರ ಆಯೋಗವನ್ನು ರಚಿಸಿತು. ದಿನಾಂಕ: 25-09-2005ರಂದು ರಚನೆಗೊಂಡ ಆಯೋಗವು, ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಪ್ರವಾಸ ಮಾಡಿ, ಎಲ್ಲರೊಂದಿಗೆ ಚರ್ಚಿಸಿ, ಬುದ್ದಿಜೀವಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಭಿಪ್ರಾಯ ನೀಡುವಂತೆ ಅವಕಾಶ ಕಲ್ಪಿಸಿ, ಅದರಂತೆ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಪಡೆದು 195 ಪ್ರಶ್ನಾವಳಿಗಳಂತೆ ಸಮೀಕ್ಷೆ ಪ್ರಾರಂಭಿಸಿತು.

ಅದಕ್ಕೆ ಆಗೀನ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್.ಯಡಿಯೂರಪ್ಪನವರು ಆರ್ಥಿಕ ನೆರವು ನೀಡಿ ಸಮೀಕ್ಷೆ ಚುರುಕುಗೊಳಿಸಲು ಅನುವು ಮಾಡಿಕೊಟ್ಟಿತು, ನಂತರ ಆಯೋಗ 200 ಪುಟಗಳ ವರದಿಯನ್ನು ಸಿದ್ದಪಡಿಸಿ, ಅಸ್ಪೃಶ್ಯ ಜಾತಿಗಳ ಜನಗಣತಿ ನಡೆಸಿ, ಜಾತಿವಾರು ಶಿಕ್ಷಣ, ಉದ್ಯೋಗ, ಕೃಷಿ, ಬಡತನ ವಾಣ ಜ್ಯ ಮತ್ತು ಕೈಗಾರಿಕೋದ್ಯಮ ಹಾಗೂ ರಾಜಕೀಯ ಸ್ಥಾನಮಾನಗಳಂತೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ ನಂತರ ಶೇ. 33.47% ರಷ್ಟಿರುವ ಎಡಗೈ ಗುಂಪಿಗೆ ಶೇ. 6% ರಂತೆ, 32% ರಷ್ಟಿರುವ ಬಲಗೈ ಗುಂಪಿಗೆ ಶೇ. 5% ರಂತೆ, ಇತರೆ ಉಪಜಾತಿಗಳಿಗೆ ಶೇ. 3% ರಂತೆ, ಅಲೆಮಾರಿ ಅಸ್ಪೃಶ್ಯರಿಗೆ ಶೇ. 1% ರಂತೆ ಮೀಸಲಾತಿ ನಿಗಧಿಪಡಿಸಿ ಆಯೋಗ ಸರ್ಕಾರಕ್ಕೆ ದಿನಾಂಕ: 14-06-2011 ರಂದು ಆಗೀನ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದಗೌಡರಿಗೆ ವರದಿ ಸಲ್ಲಿಸಿ ಇಲ್ಲಿಯವರೆಗೆ ಸುಮಾರು 13 ವರ್ಷ ಗತಿಸಿದರೂ ನ್ಯಾಯಮೂರ್ತಿ ಎ.ಜೆ. ಸದಾಶಿವ ರವರ ಆಯೋಗದ ವರದಿಯನ್ನು ಯಾವುದೇ ಸರ್ಕಾರ ಅಂಗೀಕಾರ ಮಾಡಲು ಮೀನಾಮೇಷ ಎಣ ಸುತ್ತಿರುವುದರ ಮರ್ಮ ಏನೆಂಬುದು ಇಲ್ಲಿಯವರೆಗೆ ಅರ್ಥವಾಗಿರುವುದಿಲ್ಲ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಗದ ವರದಿಯನ್ನು ಅನುಷ್ಟಾನಗೊಳಿಸುವಂತೆ ಆಗ್ರಹಿಸಿ, ಛಲವಾದಿ ಮತ್ತು ಮಾದಿಗರು ಹಲವಾರು ರೀತಿಯ ಹೋರಾಟಗಳನ್ನು ರೂಪಿಸಿ ಸುವರ್ಣಸೌಧ ಚಲೊ, ಹೋರಾಟದಲ್ಲಿ ಪೊಲೀಸ ಲಾಟಿಯಿಂದ ಸುಮಾರು 50 ಜನರಿಗೆ ಮೂಳೆ ಮುರಿದು, ನಂತರ ಬೃಹತ ಪ್ರತಿಭಟನೆಗಳು ರಾಜ್ಯದಾದ್ಯಂತ ಜನಾಂದೋಲನ ರ್ಯಾಲಿ, ತಮಟೆ ಚಳುವಳಿ, ದೆಹಲಿ ಚಲೋ, ಕಾಲ್ನಡಿಗೆ ಜಾಥಾ, ಮತ್ತು ಹುಬ್ಬಳ್ಳಿಯಲ್ಲಿ ಮಾದಿಗರ ಐತಿಹಾಸಿದ್ದೆ ಸಮಾವೇಶ.

ಕೂಡಲಸಂಗಮದಿAದ ಕಾಲ್ನಡಿಗೆ ಜಾಥಾ ಸೇರಿದಂತೆ, ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಹಲವಾರು ರೀತಿಯ ಹೋರಾಟಗಳನ್ನು ಮಾಡಿದರೂ ಕೂಡಾ ಸರ್ಕಾರ ಇದರ ಬಗ್ಗೆ ಯಾವುದೇ ಗಮನ ಹರಿಸದಿರುವುದು ಮಾದಿಗ ಸಮಾಜದ ಹೋರಾಟಗಳಿಗೆ ನ್ಯಾಯ ಸಿಗದಂತಾಗಿದೆ. ಮತ್ತು ರಾಜ್ಯದಲ್ಲಿ ಎಲ್ಲಾ ಸರ್ಕಾರಗಳು ಇಲ್ಲಿಯವರೆಗೆ ಒಳಮೀಸಲಾತಿ ಬಗ್ಗೆ ಚರ್ಚಿಸಿದಾಗ ಕಾನೂನು ಅಡೆ-ತಡೆ ನೆಪವೊಡ್ಡಿ ಎಲ್ಲಾ ಮುಖ್ಯಮಂತ್ರಿಗಳು ದಿನದೂಡುತಾ ಬಂದಿದ್ದು ಆದರೆ, ಈಗ ದೇಶದ ಸರ್ವೋಚ್ಚ ನ್ಯಾಯಾಲಯದ 7 ಜನರ ಪೀಠವು ಸದರಿ ಒಳಮೀಸಲಾತಿ ಅಂಗೀಕಾರವು ಆಯಾ ರಾಜ್ಯಗಳಿಗೆ ಜಾರಿ ಮಾಡುವ ಹೊಣೆ ಹೊರಿಸಿದ್ದು, ಇದರಿಂದ ಇದ್ದ ಕಾನೂನು ತೊಡಕುಗಳು ನಿವಾರಣೆಯಾದಂತಾಗಿದೆ. ಈಗಲಾದರೂ ಬೇರೆ ರಾಜ್ಯ ಸರ್ಕಾರಗಳಂತೆ ಕರ್ನಾಟಕ ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯಲ್ಲಿ ದಿನಾಂಕ: 17-09-2024ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ 2323 ಈ ಒಮ್ಮತದ ನಿರ್ಣಯ ಕೈಗೊಂಡು ಒಳಮೀಸಲಾತಿ ಶೀಘ್ರವೇ ಅನುಷ್ಟಾನಗೊಳಿಸಬೇಕೆಂದು ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಮನವಿ ಮಾಡಿಕೋಮಡಿದ್ದಾರೆ. 

ಈ ಸಂದರ್ಭದಲ್ಲಿ ಶ್ಯಾಮ ನಾಟೀಕರ್, ಲಿಂಗರಾಜ ತಾರಫೈಲ್, ಭೀಮಣ್ಣ ಬಿಲ್ಲವ್, ಪರಮೇಶ್ವರ ಖಾನಾಪೂರ, ದಸರಥ ಕಲಗುರ್ತಿ, ರಾಜು ವಾಡೇಕರ್, ಬಾಬು ಸುಂಠಾಣ, ಮಲ್ಲಿಕಾರ್ಜುನ ಜಿನಕೇರಿ, ರಾಜು ಕಟ್ಟಿಮನಿ, ಮಲ್ಲಪ್ಪ ಚಿಗನೂರು, ದತ್ತು ಭಾಸಗಿ ಸೇರಿದಂತೆ ಇತರರು ಇದ್ದರು.