ಸಗರ ಪಟ್ಟಣ ಪಂಚಾಯತ,ಸಚಿವ ದರ್ಶನಾಪುರಗೆ - ಬಸನಗೌಡ ಸುಬೇದಾರ ಅಭಿನಂದನೆ
ಸಗರ ಪಟ್ಟಣ ಪಂಚಾಯತ,ಸಚಿವ ದರ್ಶನಾಪುರಗೆ - ಬಸನಗೌಡ ಸುಬೇದಾರ ಅಭಿನಂದನೆ
ಶಹಪುರ : ತಾಲೂಕಿನ ಸಗರ ಗ್ರಾಮದ ಜನರ,ಬಹುದಿನಗಳ ಬೇಡಿಕೆಯಾಗಿದ್ದ,ಸಗರ ಗ್ರಾಮ ಪಂಚಾಯಿತಿಯನ್ನು,ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ,ಮೂಲ ಕಾರಣಿಭೂತರಾದ,ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆಯ ಸಚಿವರಾದ, ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ,ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಬಸನಗೌಡ ಸುಬೇದಾರ ಅಭಿನಂದನೆಗಳು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಗರ ಪಟ್ಟಣ ಪಂಚಾಯತಗೆ ಹೆಚ್ಚಿನ ಅನುದಾನ ಹರಿದು ಬರಲಿದ್ದು,ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬ ತಮ್ಮ ಆಶಯ ವ್ಯಕ್ತಪಡಿಸಿದರು,ನಿನ್ನೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕ ನಂತರವೇ ಸಚಿವರು ನನಗೆ ಫೋನ್ ಮೂಲಕ ಸಂಪರ್ಕಿಸಿ ವಿಷಯ ಪ್ರಸ್ತಾಪಿಸಿದಾಗ ನನಗೆ ತುಂಬಾ ಸಂತೋಷವಾಯಿತು ಎಂದು ಹರುಷ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ವೇಗವಾಗಿ ಸಗರ ಪಟ್ಟಣವಾಗಿ ಬೆಳೆಯುತ್ತಿದೆ, ಅಭಿವೃದ್ಧಿ ಕೆಲಸಗಳು ಇನ್ನೂ ಆಗಬೇಕಾಗಿದೆ,ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಗೆ ಪ್ರತಿಯೊಬ್ಬ ನಾಗರೀಕರ ಸಹಕಾರ ಅತ್ಯಗತ್ಯ ಎಂದು ನುಡಿದರು,ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಮಾನಪ್ಪ ವಠಾರ,ಮಾಜಿ ಪಂಚಾಯತಿ ಸದಸ್ಯ ವಾಸುದೇವ್ ವಠಾರ ಹರ್ಷ ವ್ಯಕ್ತಪಡಿಸಿ ಸಚಿವ ದರ್ಶನಾಪುರ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.
