ತಳವಾರ್ ಸಮುದಾಯದ ಹೋರಾಟಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ

ತಳವಾರ್ ಸಮುದಾಯದ ಹೋರಾಟಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ

ತಳವಾರ್ ಸಮುದಾಯದ ಹೋರಾಟಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲ

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಡೆಯುತ್ತಿರುವ ಅಖಿಲ ಕರ್ನಾಟಕ ಮಾಹರ್ಷಿ ವಾಲ್ಮೀಕಿ ತಳವಾರ್ ಸಮಾಜ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ತಳವಾರ್ ಸಮಾಜದ ವಿವಿಧ ಬೇಡಿಕೆಗಳ ಆಗ್ರಹಿಸಿ ಅನಿರ್ದಿಷ್ಟವಾದಿ ಧರಣ ಸತ್ಯಾಗ್ರಹ ನಡೆಯುತ್ತಿರುವ ನಾಲ್ಕನೇ ದಿನದ ಧರಣ ಸತ್ಯಾಗ್ರಹಕ್ಕೆ ರಾಷ್ಟ್ರೀಯ ಸಮಾಜ ಪಕ್ಷ ಬೆಂಬಲಿಸಿತು. 

ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ ಮಾತನಾಡಿ ತಳವಾರ್ ಸಮುದಾಯದ ನ್ಯಾಯಯುತವಾದ ಬೇಡಿಕೆಯಾಗಿರುವ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಮತ್ತು ಸರ್ಕಾರಿ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿದರು ತಳವಾರ್ ಸಮುದಾಯದ ಜನರಿಗೆ ಯಾವುದೇ ಅನಾವಶ್ಯಕ ದಾಖಲೆಗಳನ್ನು ಕೇಳದೆ ಸರಿಯಾದ ಪ್ರಮಾಣದಲ್ಲಿ ಕಾಸ್ಟ್ ಸರ್ಟಿಫಿಕೇಟ್ ದಾಖಲತಿಗಳನ್ನು ನೀಡಬೇಕು ಹಾಗೂ ಸರ್ಕಾರಿ ನೌಕರರಿಗೆ ಈಗಾಗಲೇ ನಾಲ್ಕು ವರ್ಷಗಳ ಕಳೆದಿದ್ದು ಇವಾಗಲಾದರೂ ನೌಕರರಿಗೆ ಸಿಂಧುತ್ವಗಳನ್ನು ತಡ ಮಾಡದೆ ನೀಡಬೇಕು ಎಂದು ಸರ್ಕಾರಕ್ಕೆ ಹಾಗು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದರು. 

ಒಂದು ವೇಳೆ ನೀಡದೆ ಹೋದಲ್ಲಿ ರಾಜ್ಯದಲ್ಲಿ ತಳವಾರ್ ಸಮುದಾಯದ ಜೊತೆಗೆ ರಾಷ್ಟ್ರಿಯ ಸಮಾಜ ಪಕ್ಷ ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದು ನುಡಿದರು ಈ ಸಂದರ್ಭದಲ್ಲಿ ಮುಖಂಡರಾದ ಶರಣಬಸಪ್ಪ ದೊಡ್ಮನಿ, ಜಿಲ್ಲಾಧ್ಯಕ್ಷರಾದ ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರು, ಅಯ್ಯಪ್ಪ ಸಿಂದಗಿ, ಮಾಂತೇಶ್ ಅವರಾದಿ, ವಿಜಯ್ ಕುಮಾರ್ ಬೋರಗಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.