ಪ್ರಥಮ ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಮತ್ತು ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪುನಶ್ಚೇತನ ಕಾರ್ಯಕ್ರಮ

ಪ್ರಥಮ ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಮತ್ತು ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪುನಶ್ಚೇತನ ಕಾರ್ಯಕ್ರಮ
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸಾಯತ್ತದಲ್ಲಿರುವ ಪಿ.ಜಿ. ಸಭಾಂಗಣದಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಮತ್ತು ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಲ್ಲಮಪ್ರಭು ಪಾಟೀಲ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಂತ್ರಜ್ಞಾನದ ಮೂಲಕ ಪ್ರಗತಿಯನ್ನು ಸಾಧಿಸಿ ದೇಶಕ್ಕೆ ಕೀರ್ತಿಯನ್ನು ತರಬೇಕು ಎಂದರು. ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಚರಿತ್ರೆಯನ್ನು ಓದಿ ಅಭಿವೃದ್ಧಿಪಥದಲ್ಲಿ ಸಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಬುರ್ಗಿಯ ಚೌಕ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರಾದ ರಾಘವೇಂದ್ರ ಭಜಂತ್ರಿ ಅವರು ವಿದ್ಯಾರ್ಥಿಗಳು ಶಿಸ್ತಿನಿಂದ ಹಾಗೂ ತಾಳ್ಮೆಯಿಂದ ಓದಿ ಜ್ಞಾನವನ್ನು ಪಡೆದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದರು.
ಪುನಶ್ಚೇತನ ಕಾರ್ಯಕ್ರಮದಲ್ಲಿ ಮೊದಲನೆಯ ಅಧಿವೇಶನದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾಲೇಜಿನ ಕಲಾವಿದ ವಿಭಾಗದ ಡಾ.ವಿಜಯ ಕುಮಾರ್ ಸಾಲಿಮನಿ ಅವರು ಬಿ.ಎ ಕಲಾ ವಿಭಾಗದ ಕೋರ್ಸ ವಿಷಯದ ಬಗ್ಗೆ ಮಾತನಾಡಿದರು. ಬಿ.ಎಸ್ ಸಿ ಕೋರ್ಸ್ ವಿಷಯದ ಬಗ್ಗೆ ವಿಜ್ಞಾನ ವಿಭಾಗದ ಡೀನರಾದ ಡಾ.ದೌಲಪ್ಪ ಬಿ ಹೆಚ್ ಅವರು ಮಾತನಾಡಿದರು.
ಬಿಕಾಂ ರಿಟೇಲ ಆಪರೇಷನ್ ವಿಷಯಕುರಿತು ಡಾ.ಸುಜಾತಾ ದೊಡ್ಡಮನಿ ಅವರು ಮಾತನಾಡಿದರು. ವೇದಿಕೆಯ ಮೇಲೆ ವಾಣಿಜ್ಯ ವಿಭಾಗದ ಡೀನರಾದ ಡಾ.ರಾಜಕುಮಾರ ಸಲಗರ, ಡಾ. ರವೀಂದ್ರಕುಮಾರ ಭಂಡಾರಿ, ಡಾ.ರಾಜಶೇಖರ್ ಮಡಿವಾಳ ಹಾಗೂ ಅಜಯಸಿಂಗ್ ತಿವಾರಿ, ವಿಜಯಲಕ್ಷ್ಮಿ.ಬಿ, ಶಿವಾನಂದ ಸ್ವಾಮಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಎರಡನೇ ಅಧಿವೇಶನದಲ್ಲಿ ಪರೀಕ್ಷಾ ವಿಭಾಗದ ವಿವರವನ್ನು ಕುರಿತುಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಡಾ ಟಿ.ವಿ ಅಡಿವೇಶ ಅವರು ಮಾತನಾಡಿದರು. ಮಹಾವಿದ್ಯಾಲಯದ ವ್ಯವಸ್ಥೆಯ ಮಾಹಿತಿ ಹಾಗೂ ಕಛೇರಿ ಮಾಹಿತಿಯನ್ನು ಕಾಲೇಜಿನ ಪ್ರಥಮ ದರ್ಜೆ ಸಹಾಯಕರಾದ ಜಯಶ್ರೀ ಅವರು ಮಾತನಾಡಿದರು. ಕಾಲೇಜಿನ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಎನ್. ಎಸ್. ಎಸ್,ಏನ್. ಸಿ. ಸಿ, ರೋವರ್ಸ್ ಮತ್ತು ರೇಂಜರ್ಸ್, ಡಾ. ಬಿ. ಆರ್. ಅಂಬೇಡ್ಕರ ವೇದಿಕೆ,ಕ್ರೀಡಾ ಗ್ರಂಥಾಲಯ ಕುರಿತು ಡಾ. ಬಲಭೀಮ್ ಸಾಂಗ್ಲಿ, ಡಾ. ಶಿವಲಿಂಗಪ್ಪ ಬಿ ಪಾಟೀಲ, ಡಾ. ವಿಜಯಕುಮಾರ ಗೋಪಾಳೆ, ಡಾ. ಸುರೇಶ ಮಾಳೇಗಾಂವ, ಡಾ. ಅಜ್ರಾಪರ್ವಿನ್, ಡಾ.ರಮೇಶ್ ಪೋತೆ, ಡಾ. ಬೆಣ್ಣೂರ ವಿಶ್ವನಾಥ ಡಾ.ರಾಬಿಯಾ ಇಫತ್ ಇವರೆಲ್ಲರೂ ಮಾತನಾಡಿದರು.
ಮೂರನೇ ಅಧಿವೇಶನದಲ್ಲಿ ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಮಂತ ಹೊಳ್ಕರ ಅವರು ವ್ಯಕ್ತಿತ್ವ ವಿಕಾಸನ ಮತ್ತು ಸಮಯ ಪರಿಪಾಲನೆ ಕುರಿತು ಮಾತನಾಡಿದರು. ಬಿ.ಎ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಲ್ಲಿಕಾರ್ಜುನ ಸಾರ್ವಕರ ಅವರು ಮಾತನಾಡಿದರು.
ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮೇರಿ ಮಾಥ್ಯೂಸ್ ಅವರು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಹಿಸಿದರು. ಈ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಬಸಂತ ಸಾಗರ, ಡಾ. ಮೀನಾಕ್ಷಿ ಹುಗ್ಗಿ, ಡಾ. ರವಿ ಬೌಧೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಗಳಾದ ಡಾ. ನಸೀಮ್ ಫಾತಿಮಾ, ಪ್ರೊ. ಶ್ರೀದೇವಿ ರಾಠೋಡ, ಡಾ. ಶಂಕರ ರಾಠೋಡ ರೆಡ್ ರಿಬ್ಬನ್ ಕ್ಲಬ್ ಅಧಿಕಾರಿಗಳಾದ ಡಾ. ಶ್ಯಾಮಲಾ ಸ್ವಾಮಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಅಮಿತ ಬೂದಿಹಾಳ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಾದೇವರಾಜ ಪ್ರಾರ್ಥಿಸಿದರು. ಡಾ. ರಾಬಿಯಾ ಇಫತ್ತ್ ಸ್ವಾಗತಿಸಿದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ರಾಜಶೇಖರ ಮಡಿವಾಳ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ರವೀಂದ್ರಕುಮಾರ ಬಂಡಾರಿ ಅವರು ವಂದಿಸಿದರು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಡಾ. ಬಲಭೀಮ ಸಾಂಗ್ಲಿ ಅವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿತರ ವರ್ಗದವರು ಮತ್ತು ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.ಈ ಕಾರ್ಯಕ್ರಮದ ವರದಿಯನ್ನು ಕಾಲೇಜಿನ ಪತ್ರಿಕಾ ಸಂಯೋಜಕರಾದ ಡಾ. ನಾಗಪ್ಪ ಗೋಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.