ಸಂಭ್ರಮದ ಪಲ್ಲಕ್ಕಿ ಉತ್ಸವ : ಈ ಆಶ್ರಮ ಶ್ರೀ ಕ್ಷೇತ್ರವಾಗಲಿ :ಸಿದ್ದಲಿಂಗ ಶ್ರೀಗಳು

ಸಂಭ್ರಮದ ಪಲ್ಲಕ್ಕಿ ಉತ್ಸವ : ಈ ಆಶ್ರಮ ಶ್ರೀ ಕ್ಷೇತ್ರವಾಗಲಿ :ಸಿದ್ದಲಿಂಗ ಶ್ರೀಗಳು

ಸಂಭ್ರಮದ ಪಲ್ಲಕ್ಕಿ ಉತ್ಸವ : ಈ ಆಶ್ರಮ ಶ್ರೀ ಕ್ಷೇತ್ರವಾಗಲಿ :ಸಿದ್ದಲಿಂಗ ಶ್ರೀಗಳು. 

ಶಹಾಬಾದ : - ಜನ ಸಾಮಾನ್ಯರು ತಮ್ಮ ಕಷ್ಟ ಗಳನ್ನು ಹೊತ್ತು ಕೊಂಡು ಶ್ರೀ ಗಳ ಆಶ್ರಮಕ್ಕೆ ಬರುತ್ತಾರೆ ಈ ಆಶ್ರಮ ಎಲ್ಲವನ್ನೂ ಪರಿಹಾರ ಮಾಡುವ ಶ್ರೀ ಕ್ಷೇತ್ರವಾಗಲಿ ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಅವರು ಹಳೇ ಶಹಾಬಾದನ ರಾಯಚೋಟಿ ವೀರಭದ್ರೇಶ್ವರ ಆಶ್ರಮ ಉದ್ಘಾಟಿಸಿ ಮಾತನಾಡಿದರು.

ಹೊರವಲಯದಲ್ಲಿ ಪಾಳು ಬಿದ್ದಿದ್ದ ಸ್ಥಳದಲ್ಲಿ ಶ್ರೀ ಶಂಕ್ರಯ್ಯ ಸ್ವಾಮಿಗಳು ಆಶ್ರಮ ನಿರ್ಮಿಸಿ ಕೈಲಾಸ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಶ್ರೀಮಠ ಇನ್ನಷ್ಟು ಎತ್ತರಕ್ಕೆ ಬೆಳೆದು, ಭಕ್ತರ ಕಷ್ಟಗಳನ್ನು ದೂರ ಮಾಡಲಿ. ಸಾಕ್ಷಾತ್ ರಾಯಚೋಟಿ ವೀರಭದ್ರೇಶ್ವರ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಹಾರೈಸಿದರು.

ಪೀಠಾಧಿಪತಿ ಶ್ರೀ ಶಂಕ್ರಯ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ ಶ್ರೀಮಠದಲ್ಲಿ - ರುದ್ರಾಭಿಷೇಕ, ಬಿಲ್ವಾರ್ಚನೆ, ಗಾಯತ್ರಿ ಹೋಮ ನಡೆಯಿತು. ಬಳಿಕ - ಶ್ರೀಮಠದಿಂದ ಲಕ್ಷ್ಮೀ ಗಂಜ್‌ನ ಶ್ರೀ ರೇಣುಕಾಚಾರ್ಯ ದೇವಸ್ಥಾನದಿಂದ ರಾಯಚೋಟಿ ವೀರಭದ್ರೇಶ್ವರ ಆಶ್ರಮದ ವರೆಗೆ ಅಪಾರ ಭಕ್ತರೊಂದಿಗೆ ಭವ್ಯ ಪಲ್ಲಕ್ಕಿ ಮೆರವಣಿಗೆ ಜರುಗಿತು. 

ಪಲ್ಲಕ್ಕಿ ಮೆರವಣಿಗೆಯಲ್ಲಿ ಮಾರ್ಗದ ಮಧ್ಯದಲ್ಲಿ ಯುವಕರಿಂದ ಸಂಗೀತ ಕ್ಕೆ ತಕ್ಕಂತೆ ಹೆಜ್ಜೆಯೊಡನೆ ಲೇಜಿಮ್ ಮಾಡಿದರು, 

ಪುರವಂತರಿಂದ 12 ಅಡಿ ಉದ್ದದ ಕಬ್ಬಿಣದ ಸರಳನ್ನು ಕೈಯಲ್ಲಿ ಶಸ್ತ್ರ ಸೇವೆ ಸಲ್ಲಿಸಿದರು.

ಆಶ್ರಮದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. 

ಉದ್ಘಾಟನ ಸಮಾರಂಭದಲ್ಲಿ ಮಳಖೇಡ ಸ್ವಾಮೀಜಿಗಳು, ಪ್ರಮುಖರಾದ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಡಾ.ಗುಂಡಣ್ಣ ಬಾಳಿ, ಭೀಮರಾವ ಸೂಗೂರ, ಶರಣಬಸಪ್ಪ ಕೋಬಾಳ, ಅಣವೀರ ಇಂಗಿನಶೆಟ್ಟಿ, ಡಾ.ವಿನೋದ ಕೌಲಗಿ, ವಿಶ್ವಾರಾಧ್ಯ ಬಿರಾಳ, ಭೀಮರಾವ ಮೇಟಿ, ಸೂರ್ಯಕಾಂತ ಕೋಬಾಳ, ಸದಾನಂದ ಕುಂಬಾರ, ಶರಬು ಪಟ್ಟೇದಾರ ಸೇರಿದಂತೆ ಅನೇಕರು ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು.

ವರದಿ ನಾಗರಾಜ್ ದಂಡವತಿ