ಆಳಂದದಲ್ಲಿ ಶಿವರಾತ್ರಿ ಅಂಗವಾಗಿ ಶಿವಮಾಲೆ ಧಾರಣೆ
ಆಳಂದದಲ್ಲಿ ಶಿವರಾತ್ರಿ ಅಂಗವಾಗಿ ಶಿವಮಾಲೆ ಧಾರಣೆ
ಆಳಂದ ಪಟ್ಟಣದ ರೇವಣಸಿದ್ದೇಶ್ವರ ಮಂದಿರದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತಿಭಾವದಿಂದ ಶಿವಮಾಲೆ ಧಾರಣೆ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ
1. ಈರಣ್ಣ ಭೀಮಣ್ಣ ಹತ್ತರಕಿ – ಶ್ರೀ ರಾಮ್ ಸೇನೆ ತಾಲೂಕು ಅಧ್ಯಕ್ಷರು
2. ರವಿ ಶಾಂತಪ್ಪ ಹತ್ತರಕಿ
3. ಕರಣ ದೇವಿಚಂದ ರಾಥೋಡ್
4. ಚನ್ನಬಸಪ್ಪಾ ಜೀವರಾಜ್ ಬುರಾಣಪುರ
5. ರಾಜಕುಮಾರ್ ಪಂಡಿತ ಹತ್ತರಕಿ
6. ಬಸವರಾಜ್ ಭೀಮಾಶಂಕರ್ ಅಂಬೆವಾಡ
ಇವರು ಶಿವಮಾಲೆ ಧರಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಕಿರಣ ಜಾಧವ, ಬಾಬುಶ್ಯಾ ಹತ್ತರಕಿ, ಮಹೇಶ್ ಬೋಸ್ಲೆ, ಅಜಯ್ ರಾಠೋಡ್, ಸಿದ್ದು ವಾಡಿ, ಸೋಮೇಶ್ ಹಿರೋಳಿ, ತುಕ್ಕಪ್ಪ ಹೊನ್ನೂರಿ, ಮಲ್ಲು ಕರಲಗಿ ಮುಂತಾದವರು ಉಪಸ್ಥಿತರಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಶಿವರಾತ್ರಿ ಹಬ್ಬದ ಅಂಗವಾಗಿ ಮಂದಿರದಲ್ಲಿ ವಿಶೇಷ ಪೂಜೆ, ಅರ್ಚನೆ ಹಾಗೂ ಭಜನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಿತು.
ವರದಿ: ಡಾ. ಅವಿನಾಶ .S. ದೇವನೂರ
