ಪಾಲಿಕೆಯ ಹಳೆಯ ಬಿಲ್ಡಿಂಗ್‌ಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ಭೇಟಿ
ಪಾಲಿಕೆಯ ಹಳೆಯ ಬಿಲ್ಡಿಂಗ್‌ಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಚಿನ ಶಿರವಾಳ ಭೇಟಿ
ಕಲಬುರಗಿ: ಮಹಾನಗರ ಪಾಲಿಕೆಯ ಹಳೆಯ ಬಿಲ್ಡಿಂಗ್‌ಗೆ ಪಾಲಿಕೆಯ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಚಿನ ಶಿರವಾಳ ಅವರು ಶೇ.24.10% ಶಾಖೆಯ ಉಗ್ರಾಣ ಶಾಖೆಗೆ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ಮಾಡಿದಾಗ, ಅಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‌ಗಳು, ಬ್ಯಾಂಡ್ ಸೆಟ್‌ಗಳು ಮತ್ತು ಇತರೆ ಸಾಮಗ್ರಿಗಳನ್ನು ಸುಮಾರು ವರ್ಷಗಳಿಂದ ಫಲಾನುಭವಿಗಳಿಗೆ ವಿತರಿಸದೇ ಇರುವುದನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರು. ಸದರಿ ಶಾಖೆಯು ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣ ಕಾರ್ಯಕ್ರಮಗಳು ಇವುಗಳ ಕುರಿತಾಗಿದ್ದು, ನಮ್ಮ ರಾಜ್ಯ ಸರ್ಕಾರವು ಆ ವರ್ಗದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಅನುಕೂಲ ಮಾಡುವ ದೃಷ್ಟಿಯಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದು, ಇಂತಹ ಸಮುದಾಯ ಆಧಾರಿತ ಯೋಜನೆಗಳನ್ನು ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗಾಗಿ ಅನುಷ್ಠಾನಗೊಳಿಸಿ, ಕಾಲೋಚಿತಗೊಳಿಸುವುದು ಅವಶ್ಯಕವಾಗಿರುತ್ತದೆ. ಆದರೆ ಆ ಶಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ಕಲ್ಯಾಣದ ಕುರಿತು ಯಾವುದೇ ಕಾಳಜಿ ಇಲ್ಲದಿರುವುದು ಮತ್ತು ಬೇಜವಾಬ್ದಾರಿತನ ಹೊಂದಿರುವನ್ನು ನೋಡಿ ತುಂಬಾ ಖೇದ ವ್ಯಕ್ತಪಡಿಸಿದರು.
ಮುಂದುವರೆದು, ಮಾನ್ಯ ಅಧ್ಯಕ್ಷರು ನಾನು ಈಗಾಗಲೇ ಮಾನ್ಯ ಆಯುಕ್ತರಿಗೆ ಟಿಪ್ಪಣ ನೀಡಿ, ಶೇ. 24.10% ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರನ್ನು ಬದಲಾವಣೆ ಮಾಡಿ ಆ ಜಾಗದಲ್ಲಿ ಪ.ಜಾ./ಪ.ಪಂ. ಸಮುದಾಯ ಆಧಾರಿತ ಯೋಜನೆಗಳ ಕುರಿತು ಉತ್ತಮ ಅನುಭವ ಹಾಗೂ ಜ್ಞಾನವುಳ್ಳ ನುರಿತ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಸದರಿ ಶಾಖೆಯ ಉಗ್ರಾಣ ಶಾಖೆಯಲ್ಲಿ ಫಲಾನುಭವಿಗಳಿಗೆ ವಿತರಿಸದೇ ಹಾಗೆಯೇ ಬೇಕಾಬಿಟ್ಟಿ ಇರಿಸಿರುವ ಅಧಿಕಾರಿ/ಸಿಬ್ಬಂದಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡುತ್ತೆನೆ ಎಂದು ಸಚಿನ ಹೇಳಿದರು. ಈ ಸಂದರ್ಭದಲ್ಲಿ ರವಿ ರಾಠೋಡ, ಖುಸರೋ ಜಾಗಿರದಾರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.