ಪುಸ್ತಕಗಳು ನಮ್ಮ ಜ್ಞಾನದ ಬುನಾದಿ, ಅರಿವಿನ ಸಂಕೇತ : ಡಾ. ಮಾನಸ ಅಭಿಮತ
ಪುಸ್ತಕಗಳು ನಮ್ಮ ಜ್ಞಾನದ ಬುನಾದಿ, ಅರಿವಿನ ಸಂಕೇತ : ಡಾ. ಮಾನಸ ಅಭಿಮತ
ಯಾದಗಿರಿಯ ಕನ್ನಡ ಸಾಹಿತ್ಯ ಭವದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸರವರು ಇದು ಯುವ ಜನರಿಗೆ ತಲುಪಬೇಕಾಗಿರುವ ಒಂದು ಅಭಿಯಾನವಾಗಿದ್ದು, ಪುಸ್ತಕಗಳು ನಮ್ಮ ಜ್ಞಾನದ ಬುನಾದಿ, ಅರಿವಿನ ಸಂಕೇತವಾಗಿವೆ ಅವುಗಳು ಗಾಂಧಿ, ಕಲಾಂ ನಂತವರನ್ನು ಸಮಾಜಕ್ಕೆ ನೀಡಿವೆ ಅದಕ್ಕಾಗಿ ನಮ್ಮ ಪ್ರಾಧಿಕಾರದಿಂದ ಒಂದು ವಿನೂತನ ಕಾರ್ಯವನ್ನು ಕೈಗೊಂಡಿದ್ದೇವೆ. ಬಾನು ಮುಸ್ತಾಕ್ ಅವರ ಕೃತಿ ಬೂಕರ್ ಪ್ರಶಸ್ತಿ ಪಡೆದ ಒಂದೇ ದಿನದಲ್ಲಿ 5 ಕೋಟಿ ಹಣ ಗಳಿಸಿ ದಾಖಲೆ ಮಾಡಿದೆ ಪುಸ್ತಕಗಳಿಗೆ ಅತ್ಯಂತ ಅಘಾದವಾದ ಮಾನ್ಯತೆ ನೀಡಿದರೆ ಅವು ನಮ್ಮ ಮನ ಮನೆಗಳ ಸಂಸ್ಕಾರವನ್ನು ಬದಲಿಸಬಲ್ಲವು ಈಗಾಗಲೇ ಈ ವರ್ಷದ ಜನವರಿ ತಿಂಗಳಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಮನೆಯಲ್ಲಿ ಲಕ್ಷ ಯೋಜನೆಯ ಮೊದಲ ಗ್ರಂಥಾಲಯ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರದ 224 ಹಾಲಿ ಶಾಸಕರು, ಸಚಿವರು, ವಿಧಾನಪರಿಷತ್ ಸದಸ್ಯರು, ಲೋಕಸಭಾ ಸದಸ್ಯರುಗಳ ಮನೆಗಳಲ್ಲೂ ಅಸ್ತಿತ್ವಕ್ಕೆ ಬರುತ್ತದೆ. ತನ್ಮೂಲಕ ಅವರ ಅನುಯಾಯಿಗಳ ಮನೆಗಳಿಗೂ ವಿಸ್ತರಣೆಯಾಗುತ್ತದೆ.
ಆ ನಂತರ ಹೆಸರಾಂತ ಚಲನಚಿತ್ರ ಹಾಗೂ ಕಿರುಚಿತ್ರಗಳ ನಟನಟಿಯರ, ನಿರ್ದೇಶಕರ, ನಿರ್ಮಾಪಕರ ಮನೆಗಳಲ್ಲೂ ಸ್ಥಾಪಿಸಿ ಅವರ ಮೂಲಕ ಅವರ ಅಭಿಮಾನಿಗಳಿಗೆ ಕರೆಕೊಡಿಸಲಾಗುತ್ತದೆ. ಇದರ ಜೊತೆಜೊತೆಗೆ ಆಸಕ್ತ ಸಮಸ್ತ ಶ್ರೀಸಾಮಾನ್ಯರ ಮನೆಗಳಲ್ಲು ಅನುಷ್ಠಾನಕ್ಕೆ ಬರುತ್ತಾ ಹೋಗುತ್ತದೆ. ಅವರಿಗಿಷ್ಟವಾದ ಪುಸ್ತಕಗಳನ್ನು ಅವರಿಂದಲೇ ತರಿಸಿ, ಅವರ ಮೆಚ್ಚಿನ ಸಾಹಿತಿಗಳಿಂದ ಅವರ ಮನೆಯಲ್ಲಿ ಉದ್ಘಾಟಿಸಿ, ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಪತ್ರವನ್ನು ಕೊಡಿಸಲಾಗುತ್ತದೆ.
ಹೀಗೆ ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ಅದರ ವಾರಸುದಾರರನ್ನು ಗೌರವಿಸುವ, ಉತ್ತೇಜಿಸುವ ಸಲುವಾಗಿ ಪ್ರಾಧಿಕಾರ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಗೂ 4 ಜನ ವಿದ್ವಾಂಸರುಗಳ ಹೆಸರಿನಲ್ಲಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ , ಹಾ.ಮಾ. ನಾಯಕ ಪ್ರಶಸ್ತಿ, ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಒಟ್ಟು 4 ಪ್ರಶಸ್ತಿಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ವಾರ್ಷಿಕ ಪ್ರಶಸ್ತಿಗಳನ್ನು ಪುಸ್ತಕ ದಿನಾಚರಣೆಯ ದಿನದಂದು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪ್ರದಾನ ಮಾಡಿಸುವ ಯೋಜನೆ ಇದೆ ಎಂದರು. ಹೀಗೆ ಸ್ಥಾಪನೆಗೊಂಡ ಗ್ರಂಥಾಲಯಗಳ ನಿರಂತರ ಬೆಳವಣಿಗೆ ಹಾಗೂ ಕ್ರಿಯಾಶೀಲತೆಗೆ ಪುಸ್ತಕ ಪ್ರಾಧಿಕಾರವು ಜಿಲ್ಲಾಮಟ್ಟದಲ್ಲಿ ಗ್ರಂಥಾಲಯ ಜಾಗೃತಸಮಿತಿ ಸದಸ್ಯರುಗಳನ್ನು ನೇಮಿಸುತ್ತದೆ. ಆ ಸದಸ್ಯರುಗಳು ಪುಸ್ತಕ ಪ್ರೇಮಿಗಳಾಗಿದ್ದು, ಮನೆಗೊಂದು ಗ್ರಂಥಾಲಯದವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುತ್ತಾರೆ. ಹೊಸ ಗ್ರಂಥಾಲಯಗಳನ್ನು ಸ್ಥಾಪಿಸುವುದು, ಹೊಸದಾಗಿಬಂದ ಪುಸ್ತಕಗಳನ್ನು ಅವರ ಗಮನಕ್ಕೆ ತರುವುದು. ಅವರ ಊರುಗಳಿಗೆ ಯಾರಾದರೂ ಗಣ್ಯರು, ಸಾಹಿತಿಗಳು, ಕಲಾವಿದರು ಬಂದರೆ, ಅವರನ್ನು ಗ್ರಂಥಾಲಯದ ಮನೆಗಳಿಗೆ ಕರೆದೊಯ್ದು ಮಾತನಾಡಿಸುವುದು, ಅವರೂರಿನ ಯಾರಾದರೂ ಸಾಹಿತಿಗಳಿಗೋ, ಕಲಾವಿದರಿಗೋ ಯಾವುದಾದರೂ ಪ್ರಶಸ್ತಿಗಳು ಬಂದ ಸಂದರ್ಭದಲ್ಲಿ ಅಥವಾ ಯಾರಾದರೂ ಹೊಸ ಪುಸ್ತಕ ಪ್ರಕಟಿಸಿದಲ್ಲಿ ಅದರ ಬಗ್ಗೆ ಗ್ರಂಥಾಲಯದ ಮನೆಗಳಲ್ಲಿ ಕಿರುಪರಿಚಯದ ಸಭೆ ಸಮಾರಂಭ ಮಾಡುವುದು ಈ ನಮ್ಮ ಸಮಿತಿ ಸದಸ್ಯರುಗಳ ಪ್ರೀತಿಯ ಕಾಯಕ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಗ್ರಂಥಾಲಯ ಜಾಗೃತ ಸಮಿತಿಯ ಸಂಚಾಲಕರನ್ನಾಗಿ ಪ್ರಕಾಶ ಅಂಗಡಿ ಕನ್ನೆಳ್ಳಿಯವರನ್ನು, ಸದಸ್ಯರುಗಳಾಗಿ ಡಾ. ಭೀಮರಾಯ ಲಿಂಗೇರಿ, ಡಾ. ರವೀಂದ್ರ ಹೊಸಮನಿ, ಶ್ರೀಮತಿ ಭಾಗ್ಯದೋರೆ, ಶ್ರೀಮತಿ ನೀಲಮ್ಮ ಮಲ್ಲೆ, ದೇವಿಂದ್ರ ಹುಲ್ಕಲ್(ಜೆ), ಸಂತೋಷ್ ಸತ್ಯಂಪೇಟ, ಕನಕಪ್ಪ ವಾಗಣಗೇರಿ, ನೀಲಕಂಠ ಹೊನ್ಕಲ್, ಮಲ್ಲಿಕಾರ್ಜುನ ಕೊಠಗೀರಿಯವರನ್ನು ನೇಮಿಸಿ ಅರ್ಹತಾ ಪತ್ರವನ್ನು ವಿತರಿಸಲಾಯಿತು.
ವೇದಿಕೆ ಮೇಲೆ ಕಸಾಪ ಜಿಲ್ಲಾಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ ಮಠಪತಿ, ಶಹಾಪುರ ಕಸಾಪ ತಾಲ್ಲೂಕು ಅಧ್ಯಕ್ಷರಾದ ಡಾ.ರವಿಂದ್ರನಾಥ ಹೊಸಮನಿ ಹಾಗೂ ಪುಸ್ತಕ ಪ್ರಾಧಿಕಾರದ ಶ್ರೀನಿವಾಸ್ ಕರಿಯಪ್ಪನವರ, ಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ ಕನ್ನಳ್ಳಿ ಇದ್ದರು,
ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ, ಸಾಹಿತಿ ಡಾ.ಗಾಳೆಪ್ಪ ಪೂಜಾರಿ, ಎಸ್.ಎಸ್. ನಾಯಕ್, ಮಹಾದೇವಪ್ಪಗೌಡ ತುಮಕೂರು, ಸಿ.ಎಂ.ಪಟ್ಟೇದಾರ್, ಬಸವರಾಜ ಮೊಟನಳ್ಳಿ, ಚನ್ನಪ್ಪಗೌಡ ಠಾಣಗುಂದಿ , ದೇವರಾಜ ನಾಯಕ ವರ್ಕನಳ್ಳಿ, ದ್ವೀತಿಯ ದರ್ಜೆ ಗುತ್ತಿಗೆದಾರ ಮರಿಲಿಂಗ ಬಂದಳ್ಳಿ, ದೊಡ್ಡಮಾನಪ್ಪ ನಾಟೇಕರ್, ಕು. ಸಂಗೀತ ಹುಲ್ಕಲ್, ಡಾ.ಭೀಮರಾಯ ಲಿಂಗೇರಿ ನಿರೂಪಿಸಿ ವಂದಿಸಿದರು,
