ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ರೆಡ್ ಕ್ರಾಸ್ ಸಂಸ್ಥೆ

ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ರೆಡ್ ಕ್ರಾಸ್ ಸಂಸ್ಥೆ

ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ರೆಡ್ ಕ್ರಾಸ್ ಸಂಸ್ಥೆ

ಕಲಬುರಗಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ (IRCS) ವಿಪತ್ತು ಪರಿಹಾರ, ಆರೋಗ್ಯ ರಕ್ಷಣೆ, ರಕ್ತದಾನ ಮತ್ತು ದುರ್ಬಲರಿಗೆ ಸಹಾಯ ಮಾಡುವುದರ ಜೊತೆಗೆ ಯುವ ರೆಡ್ ಕ್ರಾಸ್ ಮೂಲಕ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತದೆ ಎಂದು ಪತ್ರಕರ್ತ-ಲೇಖಕ ಡಾ.‌ಶಿವರಂಜನ ಸತ್ಯಂಪೇಟೆ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ, ಹೈದರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿಪೂರ್ವ ಕಾಲೇಜಿನ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಸೇವೆಯ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಕಲಬುರಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಉಪ ಸಮಿತಿ ಸಂಚಾಲಕ ಡಾ. ಎಸ್.ಎಸ್. ಹತ್ತಿ ಮಾತನಾಡಿ, ದೇಶಾದ್ಯಂತ 700 ಕ್ಕಿಂತ ಹೆಚ್ಚು ಶಾಖೆಗಳನ್ನು

ಹೊಂದಿರುವ ರೆಡ್ ಕ್ರಾಸ್ ಸಂಸ್ಥೆ ಒಂದು ಸ್ವಯಂಸೇವಕ ಮಾನವೀಯಸಂಸ್ಥೆಯಾಗಿದೆ ಎಂದರು.

ಕಲಬುರಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸೆ ತರಬೇತುದಾರ ಡಾ.‌ಸಂಗಮೇಶ ಕೇರಿ ವಿಶೇಷ ಉಪನ್ಯಾಸ ನೀಡಿ, ಆರೋಗ್ಯ ರಕ್ಷಣೆಗೆ ಅಗತ್ಯವಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯೆ ಶಿಲ್ಪಾ ಅಲ್ಲದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಪ್ರಸ್ತಾವಿಕ ಮಾತನಾಡಿದರು. ಸಂಸ್ಥೆಯ ಸಂಚಾಲಕ ಕಲ್ಗಾಣಕುಮಾರ ಶೀಲವಂತ ವೇದಿಕೆಯಲ್ಲಿದ್ದರು.

ತೇಜಸ್ವಿನಿ, ಪವಿತ್ರಾ ಪ್ರಾರ್ಥನೆಗೀತೆ ಹಾಡಿದರು. ವಿಜಯಲಕ್ಷ್ಮೀ ಶಾಬಾದಿ ಸ್ವಾಗತಿಸಿದರು. ಅಶ್ವಿನಿ ಪಾಟೀಲ ನಿರೂಪಿಸಿದರು. ಕೃಷ್ಣವೇಣಿ ಪಾಟೀಲ ವಂದಿಸಿದರು.

ಎಚ್ ಕೆ ಇ ಸಂಸ್ಥೆಯ ಮಾಧ್ಯಮ ಸಂಯೋಜಕ ಐ.ಕೆ. ಪಾಟೀಲ,ಮಲ್ಕಮ್ಮ ಬಿ. ಪಾಟೀಲ, ಆನಂದ ಕೊಪ್ಪದ, ಡಾ. ಪಾಂಡುರಂಗ ಸೇರಿದಂತೆ ಅನೇಕರಿದ್ದರು.