ಹನಿ ಟ್ರ್ಯಾಪ್ ಪ್ರಕರಣ ಯಳಸಂಗಿ ಸೇರಿ 6 ಜನ ಬಂಧನ
ಹನಿ ಟ್ರ್ಯಾಪ್ ಪ್ರಕರಣ ಯಳಸಂಗಿ ಸೇರಿ 6 ಜನ ಬಂಧನ
ಕಲಬುರಗಿ: ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿ ಆರು ಜನರಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಯುವತಿಯರನ್ನು ಬಳಸಿ ಕೊಂಡು ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣದ ಆರೋಪದಡಿ, ಶ್ರೀಕಾಂತ ರೆಡ್ಡಿ ಸೇರಿದಂತೆ ಮಂಜು ಭಂಡಾರಿ, ಉದಯಕುಮಾರ ಖಣಗೆ, ಅರವಿಂದ ಕಮಲಾಪುರ ಮತ್ತು ಸಂತೋಷ ಪಾಲನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹನಿಟ್ರ್ಯಾಪ್ ಆರೋಪದಡಿ ಮಹಾರಾಷ್ಟ್ರ ಮೂಲದ ಸಂತ್ರಸ್ತೆ ಯುವತಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದರು.
'ಪ್ರಭುಲಿಂಗ ಹಿರೇಮಠ ರಾಜು ಲೇಂಗಟಿನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆಯಲ್ಲಿ ಲಭ್ಯವಾದ ಸಾಕ್ಷಾಧಾರ, ಮತ್ತು ಸಂತ್ರಸ್ತೆಯರ ಹಾಗೂ ಬಂಧಿತ ಇಬ್ಬರು ಆರೋಪಿಗಳ ಹೇಳಿಕೆಯನ್ನು ಆಧರಿಸಿ . ಉಳಿದ ಆರು ಜನರನ್ನು ಬಂಧಿಸಲಾಗಿದೆ' ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು.
ಹನಿಟ್ರ್ಯಾಪ ನಿಂದ ಯಾವುದೇ ನೌಕರರು ಮತ್ತು ಉದ್ದಿಮೆಗಳು ಬಂದು ದೂರು ನೀಡಿದರೆ . ದೂರು ಗೌಪ್ಯವಾಗಿಟ್ಟು , ವಿಚಾರಣೆ ಮಾಡುತ್ತೀವಿ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪಬಸಪ್ಪ ಎಸ್.ಡಿ.ತಿಳಿಸಿದರು.
ದಲಿತ ಸೇನೆ ಅಧ್ಯಕ್ಷರಾಗಿರುವ ಯಳಸಂಗಿಯವರರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡುಹೋದರು.
ಪೊಲೀಸ್ ವಾಹನ ಹತ್ತುವ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಯಳಸಂಗಿ ಅವರು ಕೆಲವು ಕುತಂತ್ರಗಳು ನಮ್ಮ ಮೇಲೆ ಸುಳ್ಳು ದಾಖಲು ಪ್ರಕರಣ ಮಾಡಿದ್ದಾರೆ. ಉಸ್ತುವಾರಿ ಸಚಿವರಿಗೆ ಕಳಂಕ ಬರಬಾರದು ಅನ್ನೋ ಉದ್ದೇಶದಿಂದ ನಾವೇ ಖುದ್ದಾಗಿ ಪೊಲೀಸರಿಗೆ ಶರಣಾಗಿದ್ದೇವೆ. ಕಾನೂನು ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.