ಜಾಗಕ್ಕಾಗಿ ಗಲಾಟೆ : ಕೊಲೆಯಲ್ಲಿ ಅಂತ್ಯ!

ಜಾಗಕ್ಕಾಗಿ ಗಲಾಟೆ : ಕೊಲೆಯಲ್ಲಿ ಅಂತ್ಯ!

ಜಾಗಕ್ಕಾಗಿ ಗಲಾಟೆ ;ಕೊಲೆಯಲ್ಲಿ ಅಂತ್ಯ!

ಕಲಬುರಗಿ: ಕಲಬುರಗಿ ನಗರ ಹೊರವಲಯದ ಆಜಾದಪುರ ಗ್ರಾಮದಲ್ಲಿ ನಿವೇಶನದ ಕುರಿತು ಇಬ್ಬರ ಮಧ್ಯ ಕಲಹ ಉಂಟಾಗಿ ಗಲಾಟೆ ಎಲ್ಲಿ ಗಾಯಗೊಂಡಿದ್ದ ಚಂದ್ರಕಾಂತ ಜಮಾದರ್ (48) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಈ ಪ್ರಕರಣ ಇಬ್ಬರು ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದೆ .

ಕೊಲೆಯಾದ ವ್ಯಕ್ತಿ ಚಂದ್ರಕಾಂತ್ ಜಮಾದಾರ, ಮೃತರಿಗೆ ಪತ್ನಿ ಜಗದೇವಿ ಐದುಜನ ಮಕ್ಕಳಿದ್ದಾರೆ.

ಮನೆ ಬಳಿ ಇರುವ ಹತ್ತು ಅಡಿ ಜಾಗದ ವಿಚಾರವಾಗಿ ಗ್ರಾಮದ ಮೌನೇಶ್ ಗುತ್ತಿಗೆದಾರ್ ಹಾಗೂ ಚಂದ್ರಕಾಂತ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

 ಈ ಘಟನೆಗೆ ಸಂಬಂಧಿಸಿದಂತೆ ಮೌನೇಶ್ ಗುತ್ತೆದಾರ್ ಸೇರಿದಂತೆ ನಾಲ್ಕೈದು ಜನರ ವಿರುದ್ಧ ದೂರು ನೀಡಿದ್ದಾರೆ.

"ಪ್ರತಿ ದೂರು ದಾಖಲು' ಸುನಿತಾ ಅವರು ಕೂಡ ಪ್ರತಿ ದೂರು ದಾಖಲಿಸಿದ್ದಾರೆ. 

ಚಂದ್ರಕಂತ್ ಅವರು ನಮ್ಮೊಂದಿಗೆ ಪದೇಪದೇ ಜಗಳ ಮಾಡುತ್ತಿದ್ದರು. ನಮ್ಮನ್ನು ಕೈ ಹಿಡಿದು ಹೇಳಿದ್ದಾರೆ ಎಂದು ಸುನಿತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣಳು ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.