ವೃದ್ಧೆಯ ಆತ್ಯಾಚಾರ ವೆಸಗಿ ಪರಾರಿಯಾಗಿದ್ಧ ಆರೋಪಿಗೆ ಹೆಡೆಮುರಿ ಕಟ್ಟಿದ ಪೊಲೀಸರು

ವೃದ್ಧೆಯ ಆತ್ಯಾಚಾರ ವೆಸಗಿ ಪರಾರಿಯಾಗಿದ್ಧ ಆರೋಪಿಗೆ 

ಹೆಡೆಮುರಿ ಕಟ್ಟಿದ ಪೊಲೀಸರು 

ಚಿಂಚೋಳಿ : (ಕಲಬುರಗಿ ಜಿಲ್ಲೆ) 80 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ವೆಸಗಿ, ಬೆಳ್ಳಿ ಸರ ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ನೆರೆಯ ತೆಲಂಗಾಣ ರಾಜ್ಯ ಹೈದ್ರಾಬಾದಿನಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವೀಯಾದರು.

ನ. 18 ರಂದು ತಾಲೂಕಿನ ಗ್ರಾಮವೊಂದರ ವೃದ್ಧೆಯ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿ, ಐನೋಳಿ ಗ್ರಾಮದವನಾಗಿದ್ದ, ಈತನು ಕುಟುಂಬಕ್ಕೆ ಬೇಡವಾದ ವ್ಯಕ್ತಿಯಾದರಿಂದ ಊರಿಂದ ಊರಿಗೆ ಅಡ್ಡಾಡುವ ಅಲೆಮಾರಿಯಾಗಿದ್ದ. ಹೀಗಾಗಿ ಇವನ ವಶಕ್ಕೆ ಪಡೆಯುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೆ ಡಿವೈಎಸ್ ಪಿ ಸಂಗಮನಾಥ ಹಿರೇಮಠ ಅವರ ಕಣ್ಣುಗಾವಲಿನಲ್ಲಿ ಚಿಂಚೋಳಿ ಸಿಪಿಐ ಕಪೀಲದೇವ, ಪಿಎಸ್ಐ ಗಂಗಮ್ಮ ಜಿನಕೇರಿ, ಮಡಿವಾಳಪ್ಪ ಬಾಗೋಡಿ, ವೆಂಕಟೇಶ ನಾಯಕ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದ್ದರಿಂದ 12 ದಿನಗಳಲ್ಲಿ ಆರೋಪಿ ತಯಾಬ್ ಮೀರಾನಶಾ ಫಕ್ಕಿರನನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿ ಕಂಡರು. ಈ ಆರೋಪಿಯ ಮೇಲೆ ನೆರೆಯ ತೆಲಂಗಾಣ ರಾಜ್ಯದ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿ, ಬಂಧನದ ವಾರೆಂಟ ಜಾರಿ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗೆ ಶುಕ್ರುವಾರ ಬೆಳಿಗ್ಗೆ ಹೈದ್ರಾಬಾದಿನಲ್ಲಿ ವಶಕ್ಕೆ ಪಡೆದುಕೊಂಡು ಕರೆತಂದು ಪೊಲೀಸ್ ನಿಯಮಗಳ ಪಾಲನೆ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತ್ತು ಎಂದು ಮೂಲಗಳು ತಿಳಿಸಿವೆ.