ಮತ್ತೆ ನಿಜವಾಯಿತು ಮಾಲಗತ್ತಿ ಶ್ರೀಗಳ ಭವಿಷ್ಯವಾಣಿ

ಮತ್ತೆ ನಿಜವಾಯಿತು ಮಾಲಗತ್ತಿ ಶ್ರೀಗಳ ಭವಿಷ್ಯವಾಣಿ
ಶಹಾಬಾದ್ : ತಾಲೂಕಿನ ಸುಕ್ಷೇತ್ರ ಮಾಲಗತ್ತಿಯ ಶ್ರೀ ಹಿರೋಡೇಶ್ವರ ದೇವಸ್ಥಾನದ ಪೂಜ್ಯರಾದ ಶ್ರೀ ಚನ್ನಬಸವ ಶರಣರು, ನವದೆಹಲಿ ವಿಧಾನಸಭೆ ಚುನಾವಣೆ ಕುರಿತು ಚುನಾವಣೆ ದಿನವೇ ನುಡಿದ ಭವಿಷ್ಯ ನಿಜವಾಗಿದೆ. ಕಳೆದ ಬುಧವಾರ ಮಧ್ಯಾಹ್ನ 1.15 ನಿಮಿಷಕ್ಕೆ ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿತ್ತು. ಇತ್ತ ಕಲಬುರಗಿಯಲ್ಲಿ ಭಕ್ತರೊಬ್ಬರು ಮಾಲಗತ್ತಿಯ ಪೂಜ್ಯರಾದ ಚನ್ನಬಸವ ಶರಣರಿಗೆ ದೆಹಲಿ ವಿಧಾನಸಭೆ ಫಲಿಂತಾಂಶ ಏನಾಗಲಿದೆ ಎಂದು ಪ್ರಶ್ನಿಸಿದ್ದರು, ಕೂಡಲೇ ದೆಹಲಿ ಚುನಾವಣೆಯಲ್ಲಿ ಬಿಜೆಪಿ 45ಕ್ಕೂ ಹೆಚ್ಚು ಸ್ಥಾನ ಪಡೆದು ನಿಚ್ಚಳ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳದಂತೆ ಶನಿವಾರ ಸಂಜೆ ಹೊರ ಬಿದ್ದ ಫಲಿತಾಂಶದಲ್ಲಿ ಬಿಜೆಪಿ 48 ಸ್ಥಾನ ಪಡೆದಿದೆ. ಈ ಕುರಿತು ವಿಡಿಯೋ ಸಹ ಜಾಲತಾಣದಲ್ಲಿ ಹೊರಬಂದಿತ್ತು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ ಜಾಧವ ಅವರ ಗೆಲುವು, ಇತ್ತಿಚೇಗೆ ನಡೆದ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ಕಲಕೋಟ ಅಭ್ಯರ್ಥಿಯ ಗೆಲುವು ಸೇರಿ ಅನೇಕ ಗ್ರಾಪಂ, ಜಿಪಂ, ವಿಧಾನಸಭೆ ಚುನಾವಣೆಗಳ ಕುರಿತು ನಿಖರವಾಗಿ ಗೆಲುವಿನ ಅಂತರ ಸಹಿತ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ