ಪೂಜಾ ಖೇಡ್ಕರ್‌ನ್ನು ಕೇಂದ್ರ ಸರ್ಕಾರ ಐ.ಎ.ಎಸ್‌ನಿಂದ ವಜಾಗೊಳಿಸಿದೆ .
ಪೂಜಾ ಖೇಡ್ಕರ್‌ನ್ನು ಕೇಂದ್ರ ಸರ್ಕಾರ ಐ.ಎ.ಎಸ್‌ನಿಂದ ವಜಾಗೊಳಿಸಿದೆ .
ನವದೆಹಲಿ ಅಧಿಕಾರ ದುರ್ಬಳಕೆ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಉದ್ಯೋಗ ಪಡೆದು ವಂಚನೆ ಮಾಡಿದ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸರ್ಕಾರ ಐಎಎಸ್‌ನಿಂದ ವಜಾಗೊಳಿಸಿದೆ.
ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೂಜಾ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಗಳಿಂದ ತಕ್ಷಣವೇ ಜಾರಿಗೆ ಬರುವಂತೆ ಬಿಡುಗಡೆಗೊಳಿಸಲಾಗಿದೆ.
ಪೂಜಾ ಅವರು ಯುಪಿಎಸ್‌ಸಿ ನೇಮಕಾತಿಯಲ್ಲಿನ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಅಂಗವೈಕಲ್ಯ ಮೀಸಲಾತಿ ಅಡಿಯಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿ ವಂಚನೆ ಮಾಡಿರುವುದು ಕಂಡು ಬಂದಿತ್ತು. ಆದ್ದರಿಂದ ಅವರ ಆಯ್ಕೆಯನ್ನು ರದ್ದುಗೊಳಿಸಿದ್ದ ಯುಪಿಎಸ್‌ಸಿ, ಅವರು ಜೀವನ ಪರ್ಯಂತ ಮತ್ತೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳದಂತೆ ನಿಷೇಧಿಸಲಾಗಿದೆ.
ಸೆ. 6ರಂದು ಕೇಂದ್ರ ಸರ್ಕಾರವು ಐಎಎಸ್ (ಪ್ರೊಬೇಷನ್ ) 1954ರ ನಿಯಮ 12ರ ಅಡಿಯಲ್ಲಿ ಜಾರಿಗೆ ಬರುವಂತೆ ಪೂಜಾ ಅವರನ್ನು ಐಎಎಸ್ ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿವ ವರದಿ ಜಾರಿಗೆ.