|| ಆಗಸ್ಟ್ 31 ರಂದು "ಧರ್ಮಸ್ಥಳ ಸತ್ಯ ಯಾತ್ರೆ

|| ಆಗಸ್ಟ್ 31 ರಂದು "ಧರ್ಮಸ್ಥಳ ಸತ್ಯ ಯಾತ್ರೆ"||
ಕಲಬುರಗಿ : ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳ ವತಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ತಿಳಿಸಿದರು.
ಇದೇ ಭಾನುವಾರ 31 ರಂದು ಧರ್ಮಸ್ಥಳಕ್ಕೆ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷರಾದ ನೀಖಿಲ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದನಾಯಕರು ಕಾರ್ಯಕರ್ತರಯ ಭೇಟಿ ನೀಡಲಿದ್ದೇವೆ.ಧರ್ಮಸ್ಥಳಕ್ಕೆ ಅಪಮಾನ ಆಗುವ ತರ ಕೆಲವೊಂದು ಹೆಜ್ಜೆ ಈ ಸರ್ಕಾರ ಇಟ್ಟಿದೆ. ನಮ್ಮ ಪಕ್ಷ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
800 ವರ್ಷಗಳ ಇತಿಹಾಸವಿರುವ ಪುಣ್ಯಕ್ಷೇತ್ರ ಧರ್ಮಸ್ಥಳ. ಕೋಟ್ಯಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಹೋಗ್ತಾರೆ. ಧರ್ಮಸ್ಥಳದಲ್ಲಿ ಧರ್ಮ, ನ್ಯಾಯವಿದೆ ಇಂತಹ ಶ್ರೀ ಕ್ಷೇತ್ರ ಬಗ್ಗೆ ಪಿತೂರಿ ನಡೆದಿದೆ. ಇದರ ಹಿಂದೆ ಒಂದು ಸಂಘಟನೆ ಇದೆ ಎಂದು ಆರೋಪಿಸಿದರು
ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ತನಿಖೆ ಯಾವ ರೀತಿ ಮಾಡಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆಯಿದೀಯ.?ಇದರ ಹಿಂದೆ ಯಾರಿದ್ದಾರೆ. ಈ ಎಪಿಸೋಡ್ ಹಿಂದೆ ಇರುವ ಕಥೆ, ಚಿತ್ರಕಥೆ, ನಿರ್ಮಾಪಕ ಯಾರು ಅಂತ ಪತ್ತೆ ಮಾಡಬೇಕು. ಇದನ್ನ ಪತ್ತೆ ಮಾಡಬೇಕಾದರೆ ಎನ್ಐಎ ತನಿಖೆ ನಡೆಯಬೇಕು. ಧರ್ಮಸ್ಥಳ ಮಂಜುನಾಥನಿಗೆ ಕೋಟ್ಯಾಂತರ ಭಕ್ತರು ಇದ್ದಾರೆ. ನಾವು ಅವರ ಜೊತೆ ಇದ್ದೇವೆ ಎಂದು ಅವರು ಹೇಳಿದರು.
ಧರ್ಮಸ್ಥಳ ಯಾತ್ರೆಯಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಾತೀತವಾಗಿ ಈ ಯಾತ್ರೆ ಕೈಗೊಂಡಿದ್ದೇವೆ. ಇದ್ರಲ್ಲಿ ಯಾವುದೇ ರಾಜಕೀಯವಿಲ್ಲ. ಧರ್ಮಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತೇವೆ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಕ್ಕೆ ಒಂದುವರೆ ತಿಂಗಳಿಂದ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಅವರ ಕುಟುಂಬದವರು ತಾಳ್ಮೆಮತ್ತೆ ಸಹನೆಯಿಂದ ನಡೆದುಕೊಂಡಿದ್ದಾರೆ. ನಾವು ಅವರ ಜೊತೆ ನಿಲ್ಲುತ್ತೇವೆ ಹೆಗ್ಗಡೆ ಕುಟುಂಬಕ್ಕೆ ಜೆಡಿಎಸ್ ಬೆಂಬಲವಿದೆ ಎಂದರು.
ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ರಾಜ್ಯ ಸರ್ಕಾರ ಎಡೆ ಮಾಡಿಕೊಟ್ಟಿದೆ. ತರಾತುರಿಯಲ್ಲಿ ಎಸ್ಐಟಿ ರಚನೆ ಮಾಡಿದೆ. ಧರ್ಮಸ್ಥಳ ವಿಚಾರವಾಗಿ ಒಂದು ತಂಡವಾಗಿ ಪಿತೂರಿ ಮಾಡಿದ್ದನ್ನು ನೋಡಿದ್ದೇವೆ. ಒಬ್ಬ ಹೇಳಿಕೆಯನ್ನ ಪರಿಗಣಿಸಿ ಎಸ್ಐಟಿ ಯನ್ನ ಯಾಕೆ ರಚನೆ ಮಾಡಿದ್ರು.? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ಕ್ ಮ್ಯಾನ್ ಬಂದು ಒಂದು ಬುರುಡೆ ಇದೆ.ಅನೇಕ ಕೊಲೆಗಳಾಗಿವೆ ಅಂತ ಹೇಳಿದ್ರೆ. ಅವನ ಮಾತು ಕೇಳಿ ಸರ್ಕಾರ ಎಸ್ಐಟಿ ರಚನೆ ಮಾಡ್ತಾರೆ. 17 ಕಡೆ ಅಗಿದಿದ್ದಾರೆ, ಆ ನಂತರ ಮಾಸ್ಕ್ ಮ್ಯಾನ್ ಉಲ್ಟಾ ಹೊಡೆದಿದ್ದಾನೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಧರ್ಮಸ್ಥಳ ಬಗ್ಗೆ ಯೂಟ್ಯೂಬರ್ಸ್ ಗಳು ನಿರಂತರವಾಗಿ ಸುದ್ದಿ ಮಾಡಿದ್ದಾರೆ. ಇದರ ಹಿಂದೆ ಹಣ ಖರ್ಚು ಮಾಡಿದರ ಬಗ್ಗೆ ತನಿಖೆ ಆಗಬೇಕು. ಅದರಲ್ಲಿ ಸರ್ಕಾರ ಅರ್ಥ ಸತ್ಯ ಹೇಳಿದೆ ಚರ್ಚೆ ಮಾಡುತ್ತಿದ್ದಾರೆ. ಆದರೆ ಸರ್ಕಾರ 1% ಎಸ್ಐಟಿ ತನಿಖೆ ಬಗ್ಗೆ ಸತ್ಯ ಹೇಳಿಲ್ಲ. ಈ ಷಡ್ಯಂತ್ರದ ಹಿಂದೆ ಇರೋರನ್ನ ಪತ್ತೆ ಮಾಡಬೇಕಾದ್ರೆ ಎನ್ಐಎ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಆಗಸ್ಟ್ 31ರಂದು ಧರ್ಮಸ್ಥಳ ಸತ್ಯ ಯಾತ್ರೆ ಆರಂಭವಾಗುತ್ತೆ. ಮೊದಲಿಗೆ ಹಾಸನದಲ್ಲಿ ಸೆಂಟರ್ ಮಾಡಿದ್ದೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ. ಅಲ್ಲಿ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನೇತ್ರಾವತಿಗೆ ಹೋಗಿ ಅಲ್ಲಿಂದ ಪಾದಯಾತ್ರೆ ಮಾಡ್ತೇವೆ. ಅಲ್ಲಿ ವೇದಿಕೆ ರಚನೆ ಮಾಡಿದ್ದೇವೆ. ಅಲ್ಲಿಂದ ಕೆಲವು ಸಂದೇಶ ನೀಡುತ್ತೇವೆ ಎಂದು ತಿಳಿಸಿದರು.