ಹಜರತ್ ಟಿಪ್ಪು ಸುಲ್ತಾನರ ಆದರ್ಶ ಉಳಿಸಿ ಬೆಳಸೋಣಾ: ಕಾಂಬಳೆ

ಹಜರತ್ ಟಿಪ್ಪು ಸುಲ್ತಾನರ ಆದರ್ಶ ಉಳಿಸಿ ಬೆಳಸೋಣಾ: ಕಾಂಬಳೆ

ಹಜರತ್ ಟಿಪ್ಪು ಸುಲ್ತಾನರ ಆದರ್ಶ ಉಳಿಸಿ ಬೆಳಸೋಣಾ: ಕಾಂಬಳೆ 

ಆಳಂದ: ದಕ್ಷ ಮತ್ತು ಆದರ್ಶ ಆಳ್ವಿಕೆ ನೀಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನರ ಅವರು ತತ್ವಾದರ್ಶಗಳನ್ನು ಎಲ್ಲರೂ ಉಳಿಸಿ ಬೆಳೆಸೋಣಾ ಎಂದು ಪುರಸಭೆ ಮಾಜಿ ಸದಸ್ಯ ಸುನಿಲ ಹಿರೋಳಿಕರ್ ಹೇಳಿದರು. 

ಪಟ್ಟಣದ ಮಟಕಿ ರಸ್ತೆಯಲ್ಲಿನ “ಟಿಪ್ಪು ಸುಲ್ತಾನ್ ಚೌಕ್‌ನಲ್ಲಿ ಗುರುವಾರ ಟಿಪ್ಪು ಸುಲ್ತಾನ ಚೌಕ್ ಕಮೀಟಿಯಿಂದ ಆಚರಿಸಿದ ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಇಂದು ಕೆಲವರು ಟಿಪ್ಪುವನ್ನು ವಿವಾದ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಇತಿಹಾಸ ಸತ್ಯವನ್ನು ಮರೆಮಾಚಲಾರದು. ಟಿಪ್ಪು ಧರ್ಮನಿರಪೇಕ್ಷತೆಯ ಪ್ರತೀಕ. ಶೃಂಗೇರಿ ಶಂಕರಾಚಾರ್ಯರಿಗೆ ರಕ್ಷಣೆ ಕೊಟ್ಟವರು, ಹಿಂದೂ ದೇವಾಲಯಗಳಿಗೆ ದಾನ ನೀಡಿದವರು ಇದೇ ಟಿಪ್ಪು. ಆದ್ದರಿಂದ ಟಿಪ್ಪುವನ್ನು ಒಡೆಯುವ ಯತ್ನಗಳು ಯಶಸ್ವಿಯಾಗುವುದಿಲ್ಲ. ನಾವು ಎಲ್ಲರೂ ಒಗ್ಗೂಡಿ ಟಿಪ್ಪುವಿನ ಆದರ್ಶಗಳನ್ನು ಎತ್ತಿಹಿಡಿಯೋಣ. ಎಂದರು. 

ಮುಖಂಡ ತಯಬಲಿ ಶೇಖ್ ಅವರು ಮಾತನಾಡಿ, ಪ್ರೀತಿಯಿಂದ ಕಟ್ಟಿಕೊಟ್ಟ ರಾಜ. ಇಂದಿಗೂ ಜನರ ಮನದಲ್ಲಿ ಟಿಪ್ಪು ಇದ್ದಾರೆ. ಇಂಥಹ ಧೀರ ರಾಜನ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ಶಾಲಾ ಮಕ್ಕಳಿಗೆ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಚುವ ಮೂಲಕ ಟಿಪ್ಪುವಿನ ಸೇವಾ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ. ಟಿಪ್ಪು ಕಮಿಟಿ ಈ ರೀತಿ ಪ್ರತಿ ವರ್ಷವೂ ಈ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಇದಕ್ಕೆ ಎಲ್ಲಾ ಸಮುದಾಯದ ಜನರ ಸಹಕಾರ ಇದೆ. ಇದೇ ನಮ್ಮ ಆಳಂದದ ಸಾಮರಸ್ಯ ಎಂದು ನಾನು ದೃಢವಾಗಿ ನಂಬಿದ್ದೇನೆ. ಎಂದು ಹೇಳಿದರು.  

ಆರಂಭದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪ್ರಮುಖರಿಂದ ಪೂಜೆ ಸಲ್ಲಿಸಲಾಯಿತು. ನಂತರ ಸರ್ಕಾರಿ ಸಿಪಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಚೌಕ್ ಕಮಿಟಿ ಅಧ್ಯಕ್ಷ ಸೈಯದ್ ಜಾಕೀರ್, ಸಲೀಂ ಜಮಾದಾರ್, ಅಜಗರಅಲಿ ಹವಾಲ್ದಾರ್, ಮುಸ್ತಫಾ, ಮುಖಂಡ ಮಹಾದೇವ ಕಾಂಬಳೆ, ಮಲ್ಲಿಕಾರ್ಜುನ್ ಬೋಳಣಿ, ಮೊಹಮ್ಮದ್ ರಫೀಕ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.