ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿ -ಅಟ್ಟೂರ

ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿ -ಅಟ್ಟೂರ

ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿ -ಅಟ್ಟೂರ

ವಂಚನೆಗೊಳಿಸಿದ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಹೂಡಿಕೆದಾರರಿಗೆ ಸರಕಾರ ಹಣ ನೀಡಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್ (AIYF) ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು. ನಗರದ ಜಿಲ್ಲಾಧಿಕಾರಿ ಗಳ ಕಾರ್ಯಾಲಯದ ಮುಂದೆ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ಅಸಹಕಾರ ಹೋರಾಟಕ್ಕೆ ಬೆಂಬಲಿಸಿ ಮಾತನಾಡುತ್ತಾ 2019 ರಲ್ಲಿ ಸಂಸತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರನ್ವಯ ಸರ್ವಾನುಮತದಿಂದ ಜಾರಿಗೆ ತಂದಿದೆ. ಮೋಸದ ಕಂಪನಿಗಳು ಮತ್ತು ಸೊಸೈಟಿಗಳಲ್ಲಿ ಕಳೆದು ಹೋದ ಠೇವಣಿ ಮತ್ತು ಮರುಪಾವತಿಸಲಾಗುತ್ತದೆ. ಅರ್ಜಿದಾರರು 180 ದಿನಗಳಲ್ಲಿ ಮೂರು ಪಟ್ಟು ಮರುಪಾವತಿ ಪಡೆಯಲು ಕಾನೂನು ಬದ್ಧ ಹಕ್ಕನ್ನು ನೀಡಿದ್ದಾರೆ. ಈ ಕಾಯ್ದೆ ಅನ್ವಯ ಸಾರ್ವಜನಿಕರಿಗೆ ಸರ್ಕಾರ ಹಣ ಮರುಪಾವತಿಸಬೇಕು. ಕಂಪನಿಗಳ ಭರವಸೆ ಮೇಲೆ ಸಾರ್ವಜನಿಕರು ಹಣವನ್ನು ಹೂಡಿದ್ದಾರೆ ದೇಶಾದ್ಯಂತ ಸಾವಿರಾರು ಕೋಟಿ ಜನ ಹಣವನ್ನು ಠೇವಣಿ ಮಾಡಿ ಕಷ್ಟದಲ್ಲಿದ್ದಾರೆ ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಹಣ ನೀಡಬೇಕು ಹಾಗೂ ಹಣ ಪಡೆದ ಕಂಪನಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಹೋರಾಟಕ್ಕೆ ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ರಾಷ್ಟ್ರ ಮಟ್ಟದಲ್ಲಿ ಚರ್ಚಿಸಿ ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು. ಹೋರಾಟದಲ್ಲಿ ವೈ. ಎಸ್ ತಳವಾರ ಬಳ್ಳುಂಡಗಿ, ಶ್ರೀಶೈಲ ಪಾಟೀಲ, ನಿವೃತ್ತ ಶಿಕ್ಷಕರಾದ ನೀಲಕಂಠಯ್ಯ ಹಿರೇಮಠ, ವಿಠ್ಠಲ ಕುಂಬಾರ, ಶಿವಶರಣಪ್ಪ ಖೋಬರೆ, ಸಿದ್ದರಾಮ ಹಣಮಶೆಟ್ಟಿ,ಎ ಎನ ಪರೀಟ, ವೀರಣ್ಣ ಮಡಿವಾಳ, ಕಮಲಾ ಕೋರೆ, ಸುಭದ್ರಾಬಾಯಿ ಕಾಂಬಳೆ, ಚಂದ್ರಕಾಂತ ಕಲಶೆಟ್ಟಿ, ಜಯರಾಜ್ ಎಸ್ ಮುಗುಳಿ, ಸಿ ಕೆ ನಾಟಿಕಾರ, ಪರ್ವತಯ್ಯ ಸಾಲಿಮಠ, ವಿಜಯಕುಮಾರ ಶೆಟ್ಟಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು