ಮಕ್ಕಳ ಆರೋಗ್ಯ ಒಳ್ಳೆದಾಗಿರಬೇಕಾದರೆ ಕ್ರೀಡಾಕೂಟ ಬಹಳ ಮಹತ್ವದ್ದು
ಮಕ್ಕಳ ಆರೋಗ್ಯ ಒಳ್ಳೆದಾಗಿರಬೇಕಾದರೆ ಕ್ರೀಡಾಕೂಟ ಬಹಳ ಮಹತ್ವದ್ದು
ಕಮಲನಗರ: ವಾರ್ಷಿಕ ಕ್ರೀಡಾಕೂಟ 2024 -25 ನೇ ಸಾಲಿನ ಡಾಕ್ಟರ್ ಚನ್ನಬಸವ ಪಟ್ಟದೇವರ ಗುರುಕುಲ್ ಖೇಡ್ ಸಂಗಮದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಶಾಲೆಯ ಮುಖ್ಯ ಗುರುಗಳು ಸಂಜು ಕುಮಾರ್ ಮುಖ್ಯ ವಹಿಸಿಕೊಂಡರು.
ಅತಿಥಿಗಳಾಗಿ ಯಶವಂತ ಬಿರಾದಾರ್ ಹಾಗೂ ಬಸವರಾಜ್ ಪಾಟೀಲ್ ಹಾಗೂ ಶರಣಪ್ಪ ಬಿರಾದಾರ್ ಭಾಗವಹಿಸಿದರು.
ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡು ಮಕ್ಕಳ ಆರೋಗ್ಯಕ್ಕೆ ಕ್ರೀಡಾಕೂಟ ಬಹಳ ಮುಖ್ಯ ಎಂದು ಬಸವರಾಜ ಪಾಟೀಲ್ ನುಡಿದರು.
ತಮ್ಮ ಶಾಲೆಯ ಮಕ್ಕಳು ಪ್ರತಿ ವರ್ಷ ಈ ಕ್ರೀಡಾಪಟುವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಾ ಇದ್ದೀರಿ ತಮ್ಮ ಮಕ್ಕಳು ಪ್ರತಿ ವರ್ಷ ತಮ್ಮ ಶಾಲೆಯಿಂದ ಹುಬ್ಬಳಿ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಜೇತರಾಗುತ್ತಿದ್ದಾರೆ ಎಂದು ಯಶವಂತ ಬಿರಾದಾರ್ ಮಾತನಾಡಿದರು.
ಅದೇ ರೀತಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಮುಖ್ಯ ಗುರುಗಳು ಮಕ್ಕಳ ವಾರ್ಷಿಕ ಕ್ರೀಡಾಕೂಟ ಮಕ್ಕಳ ದೈಹಿಕ ಮಾನಸಿಕ ಬಲಪಡಿಸುತ್ತದೆ ಅದಕ್ಕಾಗಿ ಎಲ್ಲಾ ಮಕ್ಕಳು ಚೆನ್ನಾಗಿ ವಿಜೇತರಾಗಿ ಎಂದು ಹಾರೈಸಿದರು.
ಕಾರ್ಯಕ್ರಮ ನಿರೂಪಣೆ ರೇಷ್ಮಾ ಮಾಡಿದರು. ಸಂಗೀತಾ ಮೇಡಂ ಅವರು ಸ್ವಾಗತ ಮಾಡಿದರು.
ಈ ಸಂದರ್ಭದಲ್ಲಿ ಶಾಲೆ ಸಿಬ್ಬಂದಿ ವರ್ಗದವರು ಪಾಲಕರು ಉಪಸ್ಥಿತಿಯಲ್ಲಿದ್ದರು.