ಯಲ್ಲಾಲಿಂಗೇಶ್ವರ ಮಠದಲ್ಲಿ 40 ನೇ ಪುಣ್ಯ ಸ್ಮರಣೆ ಮತ್ತು ಶಿಕ್ಷಕ- ಕವಿ ಸಮ್ಮೇಳನ-15 ಮತ್ತು 16ರಂದು

ಯಲ್ಲಾಲಿಂಗೇಶ್ವರ ಮಠದಲ್ಲಿ 40 ನೇ ಪುಣ್ಯ ಸ್ಮರಣೆ ಮತ್ತು ಶಿಕ್ಷಕ- ಕವಿ ಸಮ್ಮೇಳನ-15 ಮತ್ತು 16ರಂದು

ಯಲ್ಲಾಲಿಂಗೇಶ್ವರ ಮಠದಲ್ಲಿ 40 ನೇ ಪುಣ್ಯ ಸ್ಮರಣೆ ಮತ್ತು ಶಿಕ್ಷಕ- ಕವಿ ಸಮ್ಮೇಳನ-15 ಮತ್ತು 16ರಂದು

ಬಸವಕಲ್ಯಾಣ: ಸಸ್ತಾಪೂರ ಶ್ರೀಯಲ್ಲಾಲಿಂಗೇಶ್ವರ ಆನಂದಾಶ್ರಮದಲ್ಲಿ ಲಿಂ.ಪೂಜ್ಯ ಶ್ರೀ ಯಲ್ಲಾಲಿಂಗೇಶ್ವರರ 40 ನೇ ಪುಣ್ಯ ಸ್ಮರಣೋತ್ಸವ, ಪೂಜ್ಯ ಮಹಾದೇವಿ ತಾಯಿ ಅವರ 61 ಹುಟ್ಟು ಹಬ್ಬದ ಪ್ರಯುಕ್ತ ಪ್ರಥಮ ಶಿಕ್ಷಕ ಕವಿಸಮ್ಮೇಳನವನ್ನು ಆಯೋಜಿಸಲು ಜನೇವರಿ 15 ಮತ್ತು 16 ರಂದು ಜರುಗಲಿದೆ ಎಂದು ಮಠದ ಪೀಠಾಧಿಪತಿ ಪೂಜ್ಯ ಮಹಾದೇವಿ ತಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

       ಸಸ್ತಾಪೂರ ಮತ್ತು ಸುತ್ತಮುತ್ತಲಿನ, ಕರ್ನಾಟಕ, ಆಂಧ್ರ,ತೆಲಂಗಾಣ,ಮಹಾರಾಷ್ಟ್ರ ದಿಂದ ಭಕ್ತಾದಿಗಳು ಆಗಮಿಸಲಿದ್ದು ಪೂಜ್ಯರು,ರಾಜಕೀಯ ಮುಖಂಡರು, ಸಾಹಿತಿ,ಕವಿ,ಲೇಖಕರು, ಭಕ್ತಾದಿಗಳು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ವ್ಯವಸ್ಥಾಪಕ ನಾಗಶೆಟ್ಟಿ( ಗೌಡಪ್ಪ) ಪಾಟೀಲ ತಿಳಿಸಿದರು.

       ಎರಡು ದಿವಸಗಳ ಕಾಲ ಭಕ್ತಿ,ಆಧ್ಯಾತ್ಮ, ಚಿಂತನೆ ಜೊತೆಗೆ ಶಿಕ್ಷಕ- ಕವಿಗಳ ಮೇಲೆ ಬೆಳಕು ಚೆಲ್ಲಲಿವೆ.ಕವಿ ಗೋಷ್ಠಿ, ಚಿಂತನಾ ಗೋಷ್ಠಿ, ಉದ್ಘಾಟನೆ, ಸಮಾರೋಪ

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ, ಸನ್ಮಾನ ಪ್ರದಾನ ಮಾಡಲಾಗುವುದು ಎಂದು ಸಂಯೋಜಕ ಡಾ.ಗವಿಸಿದ್ಧಪ್ಪ

ಪಾಟೀಲ ತಿಳಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಕವಿ,ಶಿಕ್ಷಕರು ಪಾಲ್ಗೊಳ್ಳಲು ಕರೆ ನೀಡಿದರು.ಶಿವಕುಮಾರ ಮಡಿವಾಳಪ್ಪ,

ಸಿದ್ರಾಮಪ್ಪ ಗುದಗೆ,ಗ್ರಾ.ಪಂ.ಅಧ್ಯಕ್ಷ ಬ್ರಹ್ಮಾರೆಡ್ಡಿ ವೀರಾರೆಡ್ಡಿ ಕೊಂತಾಮೆ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕುಂದಡೆ,ಪ್ರಕಾಶ ಪಾಟೀಲ,ಬಾಲಾಜಿರೆಡ್ಡಿ ತೇಕಲೆ,ಪ್ರೊ.ಬಿಠ್ಠಲ ಬಿರಾದಾರ,ಡಾ.ಸಂಜುಕುಮಾರ ನಡುಕರ,ಸಿದ್ದರಾಮ ಜಮಾದಾರ ಮುಂತಾದವರಿದ್ದರು.

ಶಿಕ್ಷಕ- ಕವಿ ಸಮ್ಮೇಳನಾಧ್ಯಕ್ಷರಾಗಿ ಶಿವರಾಜ ಡಿ.ಮೇತ್ರೆ ಆಯ್ಕೆ:

ಶಿವರಾಜ ಅವರು ಮೂಲತಃ ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿಯವರು.ಟಿ.ಸಿ.ಎಚ್.ಮುಗಿಸಿ, 

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಬಸವಕಲ್ಯಾಣ ತಾಲೂಕಿನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದರು. ಹುಮನಾಬಾದ ತಾಲೂಕಿನ ಧುಮ್ಮನಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ,ಮುಖ್ಯಗುರುಗ ಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು.ತಾಲೂಕಾ ಸರ್ಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘದ ಕೋಶಾಧ್ಯಕ್ಷರಾಗಿ,ಎಲ್ಲ ಸಮಸ್ಯೆ ಸವಾಲುಗಳನ್ನು ಎದುರಿಸಿದವರು.ಇವರ ಸೇವೆಗೆ ರಾಜ್ಯ ಮಟ್ಟದ ಚನ್ನಬಸವಣ್ಣ ಶಿಕ್ಷಕ ಪ್ರಶಸ್ತಿ ಲಭಿಸಿದೆ.

   ವಿದ್ಯಾರ್ಥಿ ದೆಸೆಯಿಂದಲೇ ಕವನ ಬರೆಯುವ‌ ಅಭ್ಯಾಸ

ರೂಢಿಸಿಕೊಂಡರು.ಆದರೆ ಪ್ರಕಟ ಮಾಡಲಿಲ್ಲ.ಅವರ ಪತ್ನಿ ಶಕುಂತಲಾ ಅವರು ಅಳಿದುಳಿದ ಎಲ್ಲಾ ಕವನ ಡಿಟಿಪಿ ಮಾಡಿ ಕೊಟ್ಟಾಗ ಕಾವ್ಯ ಬುಗ್ಗೆ ಎಂಬ ಕವನ ಸಂಕಲನ ಹೊರ ಬಂದಿದೆ.ನೂರಾರು ಕವನ,ಆಧುನಿಕ ವಚನಗಳನ್ನು ರಚಿಸಿದ್ದಾರೆ.ಲೇಖನಗಳು ಬಿಡಿ ಬಿಡಿಯಾಗಿ ಪ್ರಕಟವಾಗಿವೆ

ಆಧುನಿಕ ವಚನ ಸಂಕಲನ,ಕಾವ್ಯ ಸಂಗ್ರಹ ಪ್ರಕಟಣೆ ಹಂತದಲ್ಲಿವೆ.

         ‌ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ,ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾಗಿ ದಲಿತ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿ ಉತ್ತಮ ಸಂಘಟಕರೆಂದು ಗುರುತಿಸಿಕೊಂಡವರು.ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ೧೦ ಮತ್ತು ೧೧ ನೇ ಸಮ್ಮೇಳನದಲ್ಲಿ ಸನ್ಮಾನಕ್ಕೊಳಪಟ್ಟಿದ್ದಾರೆ.ಕಲ್ಯಾಣ ಕರ್ನಾಟಕ ಉತ್ಸವ,ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಸಮ್ಮೇಳನದಲ್ಲಿ ಕವನ ವಾಚಿಸಿದ್ದಾರೆ.ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ.ಸರಳ,ಸಜ್ಜನಿಕೆ,ಕ್ರಿಯಾಶೀಲ ವ್ಯಕ್ತಿ.

ಅವರನ್ನು ಪ್ರಥಮ ಶಿಕ್ಷಕ- ಕವಿಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ