ಬಾಲಕಾರ್ಮಿಕತೆ ನಿಯಂತ್ರಣಕ್ಕೆ ಜನಜಾಗೃತಿ ಅವಶ್ಯಕ : ಸಿದ್ದಲಿಂಗ ಬಾಳಿ.

ಬಾಲಕಾರ್ಮಿಕತೆ ನಿಯಂತ್ರಣಕ್ಕೆ ಜನಜಾಗೃತಿ ಅವಶ್ಯಕ : ಸಿದ್ದಲಿಂಗ ಬಾಳಿ.
ಕಲಿಯುವ ವಯಸ್ಸಿನಲ್ಲಿ ಮಕ್ಕಳ ದುಡಿಮೆ ಆತoಕಾರಿ ಬೆಳವಣಿಗೆಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಹಾಗೂ ಜನಜಾಗೃತಿ ಅವಶ್ಯಕವಾಗಿದೆ ಎಂದು ಶಿಕ್ಷಕ ಸಿದ್ದಲಿಂಗ ಬಾಳಿ ಹೇಳಿದರು. ಅವರು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ, ಆಟ, ವಿರಾಮ, ಆಹಾರ ಎಲ್ಲಾ ರೀತಿಯ ಹಕ್ಕಗಳನ್ನು ಪಡೆಯಬೇಕು ಇಲ್ಲವಾದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಬಡತನ ನೆಪಮಾಡಿಕೊಂಡು ಬಾಲಕಾರ್ಮಿಕತನಕ್ಕೆ ಇಳಿಯುವ ಮಕ್ಕಳು ತಮ್ಮ ಎಲ್ಲಾ ಮಕ್ಕಳ ಹಕ್ಕುಗಳಿಂದ ವoಚಿತರಾಗುತ್ತಿದ್ದಾರೆ ಅದನ್ನು ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 12 ನ್ನು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕರಾದ ಈಶ್ವರಗೌಡ ಪಾಟೀಲ್, ಶಿವಕುಮಾರ್ ಸರಡಗಿ ಹಾಗೂ ವಿಜಯಲಕ್ಷ್ಮಿ ಪೂಜಾರಿ ಉಪಸ್ಥಿತರಿದ್ದರು.