ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನಾ
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನಾ
ಕಲಬುರಗಿ: ಮಹಾತ್ಮಾ ಬಸವೇಶ್ವರನಗರದ ಓಕಳಿ ವಿದ್ಯಾ ಮಂದಿರ ಶಾಲೆಯ "ಮಂಗಳದೀಪ ಬೆಳ್ಳಿಮಂಟಪ" ಸಭಾಂಗಣದಲ್ಲಿ ವ್ಯಕ್ತಿತ್ವ ವಿಕಾಸ ಎಜುಕೇಷನ್ ಸೊಸಾಯಿಟಿ (ರಿ) ಓಕಳಿ ವಿದ್ಯಾ ಮಂದಿರ, ಕನ್ನಡ ಕಾನ್ವೆಂಟ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಹಾತ್ಮಾ ಬಸವೇಶ್ವರ ನಗರ, 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ಓಕಳಿ ವಿದ್ಯಾಮಂದಿರ ವ್ಯ.ವಿ.ಶಿ.ಸಂಸ್ಥೆಯ ಸದಸ್ಯರಾದ ಕವಿತಾ ಜೆ. ಪಾಟೀಲ, ಭಾರತಿ ಹುಡುಗಿಕರ, ಶಶಿಕಲಾ ಜೆ. ಪಾಟೀಲ, ವಿಕಾಸ ಜೆ. ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮೇಘನಾ ವಿ. ಪಾಟೀಲ ಓಕಳಿ, ಜಯರಾಜ ಬಿ. ಪಾಟೀಲ್ ಓಕಳಿ ಸೇರಿದಂತೆ ಇತರರು ಇದ್ದರು.
