ವಿದ್ಯಾರ್ಥಿನಿಯರ ಸರ್ವತೊಮುಖ ಬೆಳವಣಿಗೆಗೆ ಪೋಷಕ-ಶಿಕ್ಷಕರ ಸಭೆ ಅಗತ್ಯ – ಡಾ. ಮೋಹನರಾಜ
ವಿದ್ಯಾರ್ಥಿನಿಯರ ಸರ್ವತೊಮುಖ ಬೆಳವಣಿಗೆಗೆ ಪೋಷಕ-ಶಿಕ್ಷಕರ ಸಭೆ ಅಗತ್ಯ – ಡಾ. ಮೋಹನರಾಜ
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಶನಿವಾರ ಅಗಸ್ಟ್ ೩೧, ೨೦೨೪ ರಂದು ಮಹಾವಿದ್ಯಾಲಯದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿನಿಯರ ಪೋಷಕ-ಶಿಕ್ಷಕರ ಸಭೆ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಶಿಕ್ಷಣ ಮತ್ತು ಕಲಿಕೆಯ ಜೊತೆಗೆ, ಪೋಷಕ -ಶಿಕ್ಷಕರ ಸಭೆ ಕೂಡ ಅತ್ಯಗತ್ಯ ಭಾಗವಾಗಿದೆ. ಇದು ಕಲಿಕೆಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿನಿಯ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪೋಷಕ-ಶಿಕ್ಷಕರ ಸಭೆಯು ಶೈಕ್ಷಣಿಕ ಪ್ರಗತಿ, ತರಗತಿ ಮತ್ತು ಮನೆಯಲ್ಲಿ ವೀಕ್ಷಣೆ, ಮೌಲ್ಯಮಾಪನಗಳು ಮತ್ತು ಶಿಕ್ಷಕರು, ಸ್ನೇಹಿತರು, ಇತ್ಯಾದಿಗಳೊಂದಿಗೆ ಅವರ ಸಂವಹನವನ್ನು ಹಂಚಿಕೊಳ್ಳಲು ಒಂದು ಅವಕಾಶವಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೋಹನರಾಜ ಅವರು ಮಾತನಾಡುತ್ತಾ ಮಕ್ಕಳ ಉಜ್ವಲ ಭವಿಷ್ಯ ಶಿಕ್ಷಕರ ಕೈನಲ್ಲಿ ಮಾತ್ರವಿಲ್ಲ. ಶಿಕ್ಷಕರ ಜೊತೆ ಪಾಲಕರು ಹೊಂದಿರುವ ಸಂಬAಧವೂ ಮಹತ್ವದ್ದಾಗಿರುವದರಿಂದ ಇಂದು ಮಹಾವಿದ್ಯಾಲಯದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾತನಾಡಿ ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಸದರಿ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಹಲವಾರು ವಿದ್ಯಾರ್ಥಿನಿಯರ ಪೋಷಕÀರು
ಮಾತನಾಡಿ ಶಿಕ್ಷಕರ ಜೊತೆ ನೇರವಾಗಿ ಮಾತನಾಡುವ ಅವಕಾಶ ಪಾಲಕರಿಗೆ ಒದಗಿಸಿರುವುದು
ನಮ್ಮ ಮಕ್ಕಳ ಬಗ್ಗೆ ಮಹಾವಿದ್ಯಾಲಯದ ಶಿಕ್ಷಕರಿಗಿರು ಕಾಳಜಿಯನ್ನು ತೋರಿಸುತ್ತೆ ಎಂದು ಮಾತನಾಡಿ ನಮ್ಮ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಈ ಸಭೆಯು ಫಲಪ್ರದವಾಗಲಿ ಎಂದು ಹಾರೈಸಿದರು. ಹಾಗೆಯೆ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸಭೆಯ ಕುರಿತಾದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಈ ಸಭೆಯಲ್ಲಿ ಉಪನ್ಯಾಸಕರಾದ ಶ್ರೀಮತಿ. ಕಾಶೀಬಾಯಿ, ಶ್ರೀಮತಿ ಮಹಾನಂದಾ ಗೊಬ್ಬುರ, ಶ್ರೀಮತಿ. ಜ್ಯೋತಿ ಪಾಟೀಲ, ಶ್ರೀಮತಿ. ಅನೀತಾ ಪಾಟೀಲ, ಶ್ರೀಮತಿ ಪ್ರೀಯಾ ನಿಗ್ಗುಡಗಿ, ಶ್ರೀಮತಿ ಸಂತೋಷಿ ಕೆ, ಶ್ರೀಮತಿ ರಷ್ಮಿ ಅಂಟೂರಮಠ, ಶ್ರೀ. ಬಸವರಾಜ ಗೋಣಿ ಮತ್ತು ಶ್ರೀಮತಿ ಶೈಲಜಾ ನಾಕೇದಾರ, ಶ್ರೀಮತಿ ಜಗದೇವಿ ಚಿಕ್ಕೆಗೌಡ, ಶ್ರೀಮತಿ ಜಿನತ್ ಫಾತೀಮಾ, ಶ್ರೀಮತಿ ವಿಜಯಲಕ್ಷಿö್ಮ, ಶ್ರೀ ಗುರುಲಿಂಗಯ್ಯಾ, ಶ್ರೀ ಕಿರಣ ಮತ್ತು ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.