(KYF) ವತಿಯಿಂದ ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ದಿನಾಚರಣೆಯ

(KYF) ವತಿಯಿಂದ ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ದಿನಾಚರಣೆಯ

(KYF) ವತಿಯಿಂದ ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ದಿನಾಚರಣೆಯ

ಕಲಬುರಗಿ, ಸೆಪ್ಟೆಂಬರ್ 17:ಕಲ್ಯಾಣ ಕರ್ನಾಟಕ ಮರು ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕ ಯುವ ಫೋರಂ (KYF) ವತಿಯಿಂದ ಸೆಪ್ಟೆಂಬರ್ 18, ಬೆಳಿಗ್ಗೆ 8.30 ಕ್ಕೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಶಹಾದತ್ ವಹಿಸಿದ 1947-48ರ ಹುತಾತ್ಮರಿಗೆ ನಮನರೋಹಣ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನು ಸಂಘಟನೆಯ ಪೋಷಕರಾದ ಶ್ರೀ ಎಸ್.ಎ. ಪಾಟೀಲ ಅವರ ನೇತೃತ್ವದಲ್ಲಿ ಹಾಗೂ KYF ಅಧ್ಯಕ್ಷರಾದ ಅನಂತ ಗುಡಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಘಟನೆಯ ಹಿರಿಯರು, ಪೋಷಕರು ಹಾಗೂ ಹೋರಾಟಗಾರರಿಗೆ ನಮನ ಸಲ್ಲಿಸಲಾಗುವುದು.

ರಾಜ್ಯ ಸಂಚಾಲಕರಾದ ನ್ಯಾಯವಾದಿ ವಿನೋದಕುಮಾರ ಜೆನವೇರಿ ಅವರು, KYF ನ ಎಲ್ಲಾ ಪದಾಧಿಕಾರಿಗಳು ಹಾಗೂ ದೇಶಭಕ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

-