ಕಲಿಕಾ ಸಂಭ್ರಮ – ತರಬೇತಿ, ಕಲಿಕೆ ಮತ್ತು ಹಂಚಿಕೆ ಕಾರ್ಯಕ್ರಮ.

ಕಲಿಕಾ ಸಂಭ್ರಮ – ತರಬೇತಿ,  ಕಲಿಕೆ ಮತ್ತು ಹಂಚಿಕೆ ಕಾರ್ಯಕ್ರಮ.

ಕಲಿಕಾ ಸಂಭ್ರಮ – ತರಬೇತಿ, 

ಕಲಿಕೆ ಮತ್ತು ಹಂಚಿಕೆ ಕಾರ್ಯಕ್ರಮ.

ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಸ್ವತಾಲೀಮ್ ಫೌಂಡೇಶನ್ ಸಹಯೋಗದಲ್ಲಿ ಕಸ್ತೂರಬಾ ಕಲಿಕಾ ಸಂಭ್ರಮ ಕಾರ್ಯಕ್ರಮವು ಯಶಸ್ವಿಯಾಗಿ ಕಲಬುರಗಿ ಜಿಲ್ಲೆಯ ಮೈರಾಡ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು. 

ಈ ವಿಶೇಷ ಕಾರ್ಯಕ್ರಮದಲ್ಲಿಕೆ.ಜಿ.ಬಿ.ವಿ ಮತ್ತು ಕೆ.ಕೆ.ಜಿ.ಬಿ.ವಿ ವಸತಿ ಶಾಲೆ ಮತ್ತು ನಿಲಯಗಳ ವಾರ್ಡನ್‌ಗಳು ತಮ್ಮ ಕಾರ್ಯಾನುಭವ, ಯಶೋಗಾಥೆಗಳು, ಎದುರಿಸಿದ ಸವಾಲುಗಳು ಹಾಗೂ ಕಲಿತ ವಿಷಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಾರ್ಡನ್‌ಗಳು ತಮ್ಮ ಶಾಲೆಗಳಲ್ಲಿ ಬುನಾದಿ ಆಂಗ್ಲ ಭಾಷೆ ಹಾಗೂ ಹದಿಹರೆಯದ ಹೆಣ್ಣು ಮಕ್ಕಳ ಅಗತ್ಯ ಜೀವನ ಕೌಶಲ್ಯ ಗಳ (CSAG) ಕಾರ್ಯಕ್ರಮಗಳನ್ನು ಹೇಗೆ ಜಾರಿಗೆ ತಂದರು ಮತ್ತು ವಸತಿ ಶಾಲೆ ಮತ್ತು ನಿಲಯದ ಕಲಿಕೆಗಳನ್ನು ಚಾರ್ಟ್‌ ಮತ್ತು ಯೋಜನೆಗಳನ್ನು ಹಾಗೂ ಒಂದು ವರ್ಷದ ಅನುಭವವನ್ನು ಹಂಚಿಕೊಂಡರು. ಈ ಕಾರ್ಯಕ್ರಮಗಳು ಬಾಲಕಿಯರ ಆತ್ಮವಿಶ್ವಾಸ, ಸಂವಹನ, ಆರೋಗ್ಯ, ದೈಹಿಕ ಆರೋಗ್ಯ ಮತ್ತು ಇಂಗ್ಲೀಷ್‌ ಹಾಗು ಸಮಗ್ರ ಅಭಿವೃದ್ಧಿಗೆ ನೀಡಿದ ಪರಿಣಾಮವನ್ನು ಅವರು ವಿವರಿಸಿದರು.

ವಾರ್ಡನ್‌ರ ಬದ್ಧತೆ ಮತ್ತು ಶ್ರಮವನ್ನು ಗುರುತಿಸುವ ಉದ್ದೇಶದಿಂದ, SSK ಮತ್ತು ಸ್ವತಾಲೀಮ್ ಫೌಂಡೇಶನ್ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂಭ್ರಮವು ಅವರ ಕೊಡುಗೆಗಳನ್ನು ಮಾತ್ರವಲ್ಲದೆ, ಇತರರನ್ನು ಸಹ ಬಾಲಕಿಯಯರ ಶಿಕ್ಷಣದಲ್ಲಿ ನವೀನ ಪ್ರಯತ್ನಗಳನ್ನು ಮುಂದುವರಿಸಲು ಪ್ರೇರೇಪಿಸಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಿ.ವೈ.ಪಿ.ಸಿ. ವಿಠೋಬ ಪತ್ತಾರ್‌ವಾರ್ಡನ್‌ ಅವರ ಕಾರ್ಯ ಶ್ಲಾಘನೀಯವಾಗಿದೆ. ಕೆ.ಜಿ.ಬಿ.ವಿ ಶಾಲೆಗಳ ಫಲಿತಾಂಶಗಳ ಬೆಳವಣಿಗೆಯನ್ನು ನೋಡಿ ಮೆಚ್ಚುಗೆಯಾಗುತ್ತದೆ. ಇನ್ನಷ್ಟು ಹೆಚ್ಚಿನ ಬದಲಾವಣೆಗಳನ್ನು ತರಲು ಈ ಕಾರ್ಯಕ್ರಮ ತರಬೇತಿ ಸಹಾಯಕವಾಗಲಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಯಟ್ ಉಪನ್ಯಾಸಕರಾದ ಶ್ರೀಮತಿ ಸುಮಂಗಲ ಅವರು ವಾರ್ಡನ್‍ರವರನ್ನು ಉದ್ದೇಶಿಸಿ ಮಾತನಾಡಿದರು. ಅವರು ಬಾಲಕಿಯರ ಬೆಳವಣಿಗೆಯಲ್ಲಿ ವಾರ್ಡನ್‍ರವರ ಪಾತ್ರ ಮಹತ್ತರವಾಗಿದ್ದು, ಆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅವರು ತೋರಿಸುತ್ತಿರುವ ಶ್ರಮವನ್ನು ಮೆಚ್ಚಿದರು. ಶಿಕ್ಷಣಕ್ಕೆ ಎಷ್ಟೇ ಮಹತ್ವ ನೀಡುತ್ತಿದ್ದರೂ, ಇನ್ನೂ ಸಹ ಬಾಲ್ಯವಿವಾಹಗಳಂತಹ ಪದ್ಧತಿಗಳು ಸಮಾಜದಲ್ಲಿ ಕಂಡುಬರುತ್ತಿವೆ. ಅಂತಹ ಪದ್ಧತಿಯನ್ನು ನಿವಾರಿಸಲು ಶಿಕ್ಷಣವೇ ಪ್ರಮುಖ ಸಾಧನವೆಂದು ಅವರು ಒತ್ತಿಹೇಳಿದರು. ಬಾಲಕಿಯರ ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನಿಲಯ ಪಾಲಕರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸ್ವತಾಲೀಮ್ ಸಂಸ್ಥೆ ನೀಡುತ್ತಿರುವ ತರಬೇತಿಯನ್ನು ಪ್ರತಿಯೊಬ್ಬರೂ ಶಾಲೆಯಲ್ಲಿ ಅನುಷ್ಠಾನಗೊಳಿಸಿ, ಬಾಲಕಿಯರಲ್ಲಿ ಅರಿವು ಮೂಡಿಸಿ, ಅದರ ಮೂಲಕ ಬಾಲ್ಯವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು. ಪೀರಿಯಡ್ಸ್ , ಗುಡ್ ಟಚ್ ಬ್ಯಾಡ್ ಟಚ್ ಹಾಗೂ ಇತರ ಆರೋಗ್ಯ ಸಂಬಂಧಿತ ವಿಷಯಗಳು ಬಾಲಕಿಯರಿಗೆ ಅತ್ಯಂತ ಮುಖ್ಯವಾಗಿದ್ದು, ಅವುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸ್ವಾತಾಲಿಮ್‌ ರಾಜ್ಯ ಮುಖ್ಯಸ್ಥರಾದ ರಘು ರಾಮಾನುಜಂ ರವರು ಮಾತನಾಡಿ, ಕಳೆದ ಒಂದು ವರ್ಷದಲ್ಲಿ ವಾರ್ಡನ್‌ಗಳು ಸಾಕಷ್ಟು ಸವಾಲಿನ ನಡುವೆಯು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ತಮ್ಮ ತಮ್ಮ ವಸತಿಶಾಲೆ ಮತ್ತು ನಿಲಯಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಾರೆ, ಈಗಾಗಲೆ ಒಂದು ವರ್ಷ ಮುಗಿದಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಕಸ್ತೂರ್‌ ಬಾ ವಸತಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.