ಕಲಾವಿದ ವೀರಣ್ಣ ಗಂಗಾಣಿ ರಟಕಲ್ ಅವರಿಗೆ 5 ಗ್ರಾಂ ಚಿನ್ನ ರಂಗ ಸುವರ್ಣ ಪ್ರಶಸ್ತಿ ಮುಡಿಗೇರಿದೆ

ಕಲಾವಿದ ವೀರಣ್ಣ ಗಂಗಾಣಿ ರಟಕಲ್ ಅವರಿಗೆ 5 ಗ್ರಾಂ ಚಿನ್ನ ರಂಗ ಸುವರ್ಣ ಪ್ರಶಸ್ತಿ ಮುಡಿಗೇರಿದೆ

ಕಲಬುರಗಿ ರಂಗ ಮಿತ್ರ ನಾಟ್ಯ ಸಂಘದ ವತಿಯಿಂದ 

ರಂಗಭೂಮಿ ಕಲಾವಿದ ವೀರಣ್ಣ ಗಂಗಾಣಿ ರಟಕಲ್ ಅವರಿಗೆ 5 ಗ್ರಾಂ ಚಿನ್ನ ರಂಗ ಸುವರ್ಣ ಪ್ರಶಸ್ತಿ ಪ್ರದಾನ 

ಚಿಂಚೋಳಿ : ಕಲಬುರಗಿ ಡಾ. ಎಸ್.ಎಂ.ಪಂಡೀತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ, ಕಲಬುರಗಿ ರಂಗಮಿತ್ರ ನಾಟ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 2024ರ ಪ್ರತಿಭೆಗೊಂದು ರಂಗ ವೇದಿಕೆ ಅಡಿಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ನಾಟಕೋತ್ಸವ ಹಾಗೂ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವೀರಣ್ಣ ಎಸ್ ಗಣಗಾಣಿ ದಂಪತಿಗಳಿಗೆ ಸಂಘ ರಂಗ ಸುವರ್ಣ ಪ್ರಶಸ್ತಿ ಮತ್ತು 5 ಗ್ರಾಂ ಚಿನ್ನ ನೀಡಿ ಗೌರವಿಸಿ, ಸನ್ಮಾನಿಸಿದೆ. 

ಗಂಗಾಣಿ ಅವರು ರಟಕಲ್ ನಾಟ್ಯ ಸಂಘ ಮತ್ತು ರಟಕಲ್ ಗುಡ್ಡದ ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘದ ಮಾಲೀಕ, ಕಲಾವಿದರಾಗಿ ರಂಗಭೂಮಿಗೆ ಸುದೀರ್ಘ 10 ವರ್ಷಗಳ ಕಾಲ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ, ಗುರುತಿಸಿ, 5 ಗ್ರಾಂ. ಚಿನ್ನ, ಪ್ರಶಸ್ತಿ ಮತ್ತು ದಂಪತಿಗಳಿಗೆ ಮೈತುಂಬಾ ಹೋದಿಕೆ ಉಡುಗೊರೆಯೊಂದಿಗೆ ನೆನಪಿನ ಕಾಣಿಕೆ ಪ್ರದಾನ ಮಾಡಿ ಗೌರವಿಸಲಾಯಿತು. ವೀರಣ್ಣ ಗಂಗಾಣಿ ಅವರನ್ನು ರಂಗಭೂಮಿಗೆ ಕರೆತಂದ ರಾಜಶೇಖರ ಗುಡ್ಡದ್ ಹಾಗೂ ಶಿವರಾಜ ಪಾಟೀಲ ಗೋಣಗಿ ಅವರು ಇದೇ ವೇಳೆ ಸ್ಮರಿಸಿದರು. 

ಕಲಬುರಗಿ ರಂಗಮಿತ್ರ ನಾಟ್ಯ ಸಂಘವು ರಂಗ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಿದ

ಸಂಘದ ಪದಾಧಿಕಾರಿಗಳಾದ ಗುದ್ದುಗೆ ಮಠದ ಅಳೋಳ್ಳಿ ಶ್ರೀಗಳು, ಸಂಘದ ಅಧ್ಯಕ್ಷರ ಹಾಗೂ ಬಂಧು ಪ್ರೀಟರ್ಸ್ ನ ಮಾಲೀಕರಾದ ರಮೇಶ ಜಿ ತಿಪ್ಪನೂರ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರಜೀ ಹಿಪ್ಪರಗಿ, ಸಂಯೋಜಕರಾದ ಸಂತೋಷ ಖನ್ನಾ ಅವರಿಗೆ ಕೃತ್ಞತೆಗಳು ಸಲ್ಲಿಸಿದ್ದಾರೆ. 

ವೀರಣ್ಣ ಗಂಗಾಣಿ ಅವರೊಂದಿಗೆ ತಾಲೂಕಿನ ವೀರೇಶ ಮಾನ್ಕಾರ, ಸಂತೋಷ ಖನ್ನಾತಾಡಪಳ್ಳಿ ಅವರಿಗೂ ಸಹ 5 ಗ್ರಾಂ ಚಿನ್ನ ರಂಗ ಸುವರ್ಣ ಪ್ರಶಸ್ತಿ ನೀಡಿ, ದಂಪತಿಗಳಿಗೆ ಗೌರವ ಸನ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ರಂಗಭೂಮಿ ಕಲಾವಿದ, ಮಾಲಿಕನಾಗಿ ಸೇವೆ ಸಲ್ಲಿಸಿ ಯಶಸ್ವಿಗೊಳಲು ಮತ್ತು ಪ್ರಶಸ್ತಿ ಪಡೆದುಕೊಳ್ಳಲು ಸಹಕರಿಸಿದ ರಟಕಲ್ ಗುಡ್ಡದ ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘದ ಪದಾಧಿಕಾರಿಗಳಿಗೆ ಮತ್ತು ರಟಕಲ್ ಮುರುಗೇಂಧ್ರ ನವ ಯುವಕ ನಾಟ್ಯ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸಮಸ್ತ ರಟಕಲ್ ಗ್ರಾಮಸ್ಥರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಸ್ಮರಿಸಿಕೊಂಡಿದ್ದಾರೆ.