ಶುಶ್ರೂಷಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳು- ಡಾ ಕಿರಣ್ ದೇಶಮುಖ್

ಶುಶ್ರೂಷಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳು- ಡಾ ಕಿರಣ್ ದೇಶಮುಖ್

ಶುಶ್ರೂಷಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳು- ಡಾ ಕಿರಣ್ ದೇಶಮುಖ್ 

ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕಾಯಕವು ತಾಯಿ ಮಾಡುವಂತಹ ಕಾರ್ಯಕ್ಕೆ ಸಮನಾದುದು. ಶುಶೂಷಕರ ಕರ್ತವ್ಯವನ್ನು ದುಡಿಮೆ ಎಂದು ಪರಿಗಣಿಸದೆ ಸೇವೆ ಎಂದು ಭಾವಿಸಬೇಕು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್ ಹೇಳಿದರು .

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸ್ಕೂಲ್ ಆಂಡ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಶೂಶ್ರಕರಿಗೆ ನವೀನ ಕೌಶಲ್ಯ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಶುಶ್ರೂಷಕರು ಚಿಕಿತ್ಸಾ ಪ್ರಕ್ರಿಯೆಯ ಅತ್ಯಮೂಲ್ಯ ಭಾಗ .ಆದ್ದರಿಂದ ಅವರಿಗೆ ಚಿಕಿತ್ಸಾ ಕ್ರಮಗಳಲ್ಲಿನ ಹೊಸ ಅವಿಷ್ಕಾರಗಳು, ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

'ವೈದ್ಯರು ಮತ್ತು ರೋಗಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಶುಶೂಷಕರು, ಆಸ್ಪತ್ರೆಗಳ ಬೆನ್ನೆಲುಬಾಗಿದ್ದಾರೆ' ಒಂದು ಆಸ್ಪತ್ರೆ ಒಂದು ಸಂಸ್ಥೆ ಸಮಾಜದಲ್ಲಿ ಹೆಸರು ಪಡೆಯಬೇಕಾದರೆ ವೈದ್ಯರಷ್ಟೇ ಶುಶ್ರೂಷಕರು ಮಹತ್ವದ ಸ್ಥಾನ ಪಡೆದಿದ್ದಾರೆ.

ವೈದ್ಯರಿಗೆ ಅನೇಕ ನವನವೀನ ಕೌಶಲ್ಯ ತರಬೇತಿಗಳನ್ನು ಇಂದು ನೀಡಲಾಗುತ್ತಿದೆ ವೈದ್ಯರಷ್ಟೆ ಮುಖ್ಯರಾಗಿರುವ ಶೂಶ್ರಷಕರಿಗೂ ಕೌಶಲ್ಯಯುತ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಅವಶ್ಯಕವಾಗಿದೆ ಎಂದು ಹೇಳಿದರು 

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿಯವರು ಮಾತನಾಡಿ 

ಇಂದು ನಮ್ಮ ಸಂಸ್ಥೆಯು ಸಹ ನಮ್ಮ ಕಾಲೇಜಿನಲ್ಲಿಯ ಶೂಶ್ರಷಕರಿಗೆ ಒಳ್ಳೆಯ ಕೌಶಲ್ಯಯತ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತಿ ಪಡೆದ ಶೂಶ್ರೂಷಕ ವಿದ್ಯಾರ್ಥಿಗಳು ರೋಗಿಗಳ ಸೇವೆಯಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿ ತಾವು ಕಲಿತಿರುವ ನಮ್ಮ ಸಂಸ್ಥೆಗೂ ಕಿರ್ತೀ ತರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಎಸ್ ಆರ್ ಹರವಾಳ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಡಾ ಕಪ್ಪಿಕೇರಿ ಸರ್, ಡಾ ಪೂಜಾರಿ ಸ ನರ್ಸಿಂಗ್ ಕಾಲೇಜಿನ ಡೀನ್ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ ಮಹಾದೇವ ಗೋಡಿ ನಿರ್ವಹಿಸದರು